ಸಲಾಡ್ ನಲ್ಲಿತ್ತು ಮಾನವನ ಬೆರಳು – ತಿಂದ ಮೇಲೆ ಮಹಿಳೆಗೆ ಏನಾಯ್ತು ಗೊತ್ತೇ?

ಸಲಾಡ್ ನಲ್ಲಿತ್ತು ಮಾನವನ ಬೆರಳು – ತಿಂದ ಮೇಲೆ ಮಹಿಳೆಗೆ ಏನಾಯ್ತು ಗೊತ್ತೇ?

ನ್ಯೂಸ್ ಆ್ಯರೋ : ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ಅಡುಗೆ ಮಾಡಿ ತಿನ್ನುವವರು ಕಡಿಮೆಯಾಗುತ್ತಿದ್ದಾರೆ. ಹೊಟೇಲ್ ಗಳಿಗೆ ಹೆಚ್ಚು ಮೊರೆ ಹೋಗುತ್ತಿದ್ದಾರೆ. ಇದರಿಂದ ಸಮಯದ ಉಳಿತಾಯ ಒಂದು ಕಡೆಯಾದರೆ ಇನ್ನೊಂದು ಕಡೆ ಹೆಚ್ಚು ವೆರೈಟಿ ತಿಂಡಿಗಳನ್ನು ಸವಿಯಬಹುದು.

ಬ್ಯುಸಿ ಲೈಫ್ ನಲ್ಲಿ ಈಗ ಹೆಚ್ಚಿನವರಿಗೆ ಅಡುಗೆ ಮಾಡಲೂ ಸಮಯವಿಲ್ಲ. ಹೀಗಾಗಿ ಹೊಟೇಲ್ ಗೆ ಹೋಗಿ ಹೆಚ್ಚಿನವರು ಆಹಾರ ಸೇವನೆ ಮಾಡುತ್ತಾರೆ.

ಹೊಟೇಲ್ ಗಳಲ್ಲಿ ರುಚಿಯಷ್ಟೇ ಶುಚಿಯಾದ ತಿಂಡಿ ಸಿಗಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದರೆ ಹೊಟೇಲ್ ನವರು ರುಚಿಗೆ ಮಾತ್ರ ಆದ್ಯತೆ ಕೊಟ್ಟು ಶುಚಿಯನ್ನು ಮರೆತು ಬಿಡುತ್ತಾರೆ. ಗ್ರಾಹಕರು ಅವರ ರುಚಿಯ ತಿನಿಸುಗೆ ಮಾರು ಹೋಗಿ ಶುಚಿಯತ್ತ ನಿರ್ಲಕ್ಷ್ಯ ತೋರುತ್ತಾರೆ. ಹೀಗಾಗಿಯೇ ಇವತ್ತು ಹೆಚ್ಚಿನ ಹೊಟೇಲ್ ಗಳಲ್ಲಿ ಗ್ರಾಹಕರಿಗೆ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ. ಇದು ಮುಂದೆ ವಿಧವಿಧವಾದ ಕಾಯಿಲೆಗಳಿಗೆ ಆಹ್ವಾನ ನೀಡುತ್ತದೆ.

ಕೆಲವೊಂದು ಸಲ ಹೊಟೇಲ್ ಗಳಲ್ಲಿ ದೊಡ್ಡ ಮಟ್ಟದ ನಿರ್ಲಕ್ಷ್ಯ ಮಾಡಲಾಗುತ್ತದೆ. ಸಣ್ಣಪುಟ್ಟ ಕೂದಲು, ಅಕ್ಕಿಯಲ್ಲಿ ಹುಳ ಬರೋದು ಸಾಮಾನ್ಯ. ಆಹಾರದಲ್ಲಿ ನೊಣ ಅಥವಾ ಕೂದಲು ಬಿದ್ದರೆ ವಾಪಸ್ ಕೊಟ್ಟು ಬೇರೆ ಆಹಾರ ತರಿಸಿ ತಿಂದು ಕೊಂಡು ಬರುವವರೂ ಸಾಕಷ್ಟು ಮಂದಿ ಇದ್ದಾರೆ.

ಇತ್ತೀಚೆಗಂತೂ ಆಹಾರದಲ್ಲಿ ಹಲ್ಲಿ, ಇಲಿ, ಜಿರಳೆ ಸಿಕ್ಕಿರುವ ಸುದ್ದಿಗಳನ್ನು ನಾವು ಕೇಳಿದ್ದೇವೆ. ಇದೀಗ ಅಮೆರಿಕದ ಮಹಿಳೆಗೆ ಹೊಟೇಲ್ ನಲ್ಲಿ ಖರೀದಿ ಮಾಡಿದ ಸಲಾಡ್ ನಲ್ಲಿ ಮನುಷ್ಯನ ಬೆರಳು ಸಿಕ್ಕಿದೆ.

ಇದನ್ನು ನೋಡಿ ಮಹಿಳೆಗೆ ಶಾಕ್ ಆಗಿದೆ. ಹೊಟೇಲ್ ಮ್ಯಾನೇಜರ್ ಬೆರಳಿನ ಸಣ್ಣ ತುಂಡು ಸಲಾಡ್ ನಲ್ಲಿತ್ತು. ತಾನು ಅದನ್ನು ತಿಂದಿರೋದಾಗಿ ಆರೋಪಿಸಿ ದೂರು ನೀಡಿದ್ದಾರೆ.

ಯುನೈಟೆಡ್ ಸ್ಟೇಟ್ಸ್‌ನ ಕನೆಕ್ಟಿಕಟ್‌ನ ಗ್ರೀನ್‌ವಿಚ್‌ನಲ್ಲಿ ಅಲಿಸನ್ ಕೋಝಿ ಎಂಬ ಮಹಿಳೆ ನ್ಯೂಯಾರ್ಕ್ ಮೌಂಟ್ ಕಿಸ್ಕೋದ ಚಾಪ್ಟ್ ಹೆಸರಿನ ರೆಸ್ಟೋರೆಂಟ್ ನಲ್ಲಿ ಸಲಾಡ್ ಖರೀದಿ ಮಾಡಿ ತಿಂದಿದ್ದು, ಅದರಲ್ಲಿ ಮನುಷ್ಯನ ಬೆರಳು ಇದ್ದಿದ್ದು ಅವಳ ಅರಿವಿಗೆ ಬಂದಿದೆ.

ರೆಸ್ಟೋರೆಂಟ್ ನಲ್ಲಿ ಅರಗುಲಾ ಕತ್ತರಿಸುತ್ತಿದ್ದ ವೇಳೆ ಮ್ಯಾನೇಜರ್ ಕೈ ಬೆರಳು ಕಟ್ ಆಗಿ ಸಲಾಡ್ ಗೆ ಬಿದ್ದಿತ್ತು. ಆ ಕ್ಷಣ ಮ್ಯಾನೇಜರ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದಾರೆ. ಆದರೆ ಮಹಿಳೆಗೆ ಅದೇ ಸಲಾಡ್ ಅನ್ನು ನೀಡಲಾಗಿದೆ.

ಸಲಾಡ್ ನಲ್ಲಿದ್ದ ಬೆರಳು ತಿಂದ ಮಹಿಳೆಗೆ ಪ್ಯಾನಿಕ್ ಅಟ್ಯಾಕ್, ಮೈಗ್ರೇನ್, ಅರಿವಿನ ದುರ್ಬಲತೆ, ವಾಕರಿಕೆ, ತಲೆತಿರುಗುವಿಕೆ ಮತ್ತು ಕುತ್ತಿಗೆ ಮತ್ತು ಭುಜದ ನೋವು ಸೇರಿದಂತೆ ಕೆಲವೊಂದು ಗಂಭೀರ ಸಮಸ್ಯೆ ಎದುರಾಗಿತ್ತು.

ಕೋಝಿ ದೂರಿನ ಮೇರೆಗೆ ವೆಸ್ಟ್‌ಚೆಸ್ಟರ್ ಕೌಂಟಿ ಆರೋಗ್ಯ ಇಲಾಖೆಯು ಘಟನೆಯ ಬಗ್ಗೆ ತನಿಖೆ ನಡೆಸಿದ್ದು, ನಿರ್ಲಕ್ಷ್ಯ ವಹಿಸಿದ್ದ ರೆಸ್ಟೋರೆಂಟ್‌ಗೆ 900 ಡಾಲರ್ ದಂಡ ವಿಧಿಸಿದೆ.

Related post

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ ಪತ್ರ

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ…

ನ್ಯೂಸ್ ಆರೋ: ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು ಸಿಕ್ಕಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರಜ್ಞಾವಂತ ನಾಗರೀಕರು ಎಂಬ ಹೆಸರಿನಲ್ಲಿ…
ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ನ್ಯೂಸ್ ಆರೋ: ಕೆಜಿಎಫ್ ನಂತರ ಹಿಟ್ ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಯಶ್ ಇದೀಗ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಆ ಚಿತ್ರಕ್ಕೆ ಶೂರ್ಪನಖಿಯಾಗಿ ರಕುಲ್ ಕಾಣಿಸಿಕೊಳ್ಳಲಿದ್ದಾರೆ. ಹೌದು,ಶೂರ್ಪನಕಿಯಾಗಿ…
ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌ ದರ ಇಳಿಕೆ ಮಾಡಿದ ಪಾಕ್‌ ಸರ್ಕಾರ

ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌…

ನ್ಯೂಸ್ ಆರೋ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರು ಭಾರತಕ್ಕೆ ಸೇರುತ್ತೇವೆ ಎಂದು ನಡೆಸುತ್ತಿದ್ದ ಪ್ರತಿಭಟನೆಗೆ ಪಾಕಿಸ್ತಾನದ ಸರ್ಕಾರ ಮಣಿದಿದೆ. ಹೌದು, ಜನರ ಪ್ರತಿಭಟನೆ ಬೆನ್ನಲ್ಲೇ ಪಾಕ್‌ ಆಕ್ರಮಿತ ಕಾಶ್ಮೀರದ…

Leave a Reply

Your email address will not be published. Required fields are marked *