ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ಕೊಡಲಿದೆ ಟೆಸ್ಲಾ ಕಾರು – 2 ವರ್ಷದೊಳಗೆ ಭಾರತದಲ್ಲೇ ಉತ್ಪಾದನಾ ಘಟಕ ಸ್ಥಾಪನೆ

ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ಕೊಡಲಿದೆ ಟೆಸ್ಲಾ ಕಾರು – 2 ವರ್ಷದೊಳಗೆ ಭಾರತದಲ್ಲೇ ಉತ್ಪಾದನಾ ಘಟಕ ಸ್ಥಾಪನೆ

ನ್ಯೂಸ್ ಆ್ಯರೋ : ಹೊಸ ಹೊಸ ಶೈಲಿಯ ವಾಹನಗಳು ಮಾರುಕಟ್ಟೆಗೆ ಎಂಟ್ರಿ ಕೊಡುತ್ತಲೇ ಇರುತ್ತದೆ. ಸಾಮಾನ್ಯವಾಗಿ ಕೆಲವರು ಬೈಕ್ಗಳನ್ನು ಇಷ್ಟ ಪಟ್ಟರೆ ಇನ್ನೂ ಕೆಲವರಿಗೆ ಕಾರ್ ನ ಮೇಲೆ ಕ್ರೇಜ್ ಇರುತ್ತೆ. ಅದೇನೇ ಆದರೂ ಕೂಡಾ ಪ್ರತಿಯೊಬ್ಬರೂ ಅದರಲ್ಲೂ ವಿಶೇಷವಾಗಿ ಪುರುಷರು ಭಾರತಕ್ಕೆ ಲಗ್ಗೆಯಿಟ್ಟ ನೂತನ ಶೈಲಿಯ ಕಾರ್ ನ ಮೇಲೆ ದೃಷ್ಟಿಯಿಟ್ಟಿರುತ್ತಾರೆ.

ಅದರಂತೆ ಇದೀಗ ಸದ್ಯದಲ್ಲೇ ಭಾರತಕ್ಕೆ ಮತ್ತೊಂದು ನೂತನ ಕಂಪೆನಿಯ ಕಾರು ಅಗಮನವಾಗುತ್ತಿದೆ ಎನ್ನುವ ಸುದ್ದಿ ಕೇಳಿಬಂದಿದೆ. ಮುಂದಿನ ವರ್ಷದಿಂದ ಭಾರತಕ್ಕೆ ಎಲೆಕ್ಟ್ರಿಕ್ ವಾಹನಗಳನ್ನು ಆಮದು ಮಾಡಿಕೊಳ್ಳುವ ಸಂಬಂಧ ಟೆಸ್ಲಾ ಇಂಕ್ ಜೊತೆ ಕೇಂದ್ರ ಸರ್ಕಾರ ಒಪ್ಪಂದವನ್ನು ಅಂತಿಮಗೊಳಿಸುವ ಹಂತದಲ್ಲಿದೆ.

ಇದರಿಂದ ಟೆಸ್ಲಾ ಕಾರುಗಳು ಭಾರತಕ್ಕೆ ಕಾಲಿಡುವ ದಿನಗಳು ಶೀಘ್ರದಲ್ಲಿದೆ. ಇದೇ ಒಪ್ಪಂದದ ಭಾಗವಾಗಿ ಮುಂದಿನ ಎರಡು ವರ್ಷಗಳಲ್ಲಿ ಟೆಸ್ಲಾ ತನ್ನ ಉತ್ಪಾದನಾ ಘಟಕವನ್ನು ಭಾರತದಲ್ಲಿ ಸ್ಥಾಪಿಸಲು ಕೇಂದ್ರ ಅನುಮತಿ ನೀಡಲಿದೆ ಎಂದು ಸುದ್ದಿ ಸಂಸ್ಥೆ ಬ್ಲೂಮ್‌ಬರ್ಗ್ ವರದಿ ಮಾಡಿದೆ.

ಭಾರತದಲ್ಲಿ ಟೆಸ್ಲಾ ಮುಂದಿನ ಯೋಜನೆಯೇನು..?

ಭಾರತದಲ್ಲಿ ಟೆಸ್ಲಾ ತನ್ನ ಹೊಸ ಘಟಕವನ್ನು ಸ್ಥಾಪಿಸಲು ಆರಂಭದಲ್ಲಿ ಸುಮಾರು 2 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಯೋಜಿಸುತ್ತಿದೆ ಎಂದು ವರದಿ ಹೇಳಿದೆ. ಕಂಪನಿಯು ಭಾರತದಿಂದ ಸುಮಾರು 15 ಬಿಲಿಯನ್ ಡಾಲರ್‌ ಮೌಲ್ಯದ ಬಿಡಿಭಾಗಗಳನ್ನು ಖರೀದಿಸಲು ಮುಂದಾಗಿದೆ. ವೆಚ್ಚವನ್ನು ಕಡಿಮೆ ಮಾಡಲು ಕಂಪನಿಯು ಭಾರತದಲ್ಲೇ ಬ್ಯಾಟರಿಗಳನ್ನು ಕೂಡಾ ತಯಾರಿಸಲೂ ಪರಿಗಣಿಸುತ್ತಿದೆ. ಆದರೆ, ಈ ಯೋಜನೆಗಳು ಇನ್ನೂ ಅಂತಿಮ ರೂಪ ಪಡೆದಿಲ್ಲ. ಈಗ ಅಂದುಕೊಂಡಿರುವ ಯೋಜನೆಗಳು ಮುಂದೆ ಬದಲಾಗಲೂಬಹುದು.

2024ರ ಜೂನ್‌ನಲ್ಲಿ ಟೆಸ್ಲಾ ಕಂಪನಿಯು ಭಾರತದಲ್ಲಿ ‘ಮಹತ್ವದ ಹೂಡಿಕೆ’ ಮಾಡಲು ಉದ್ದೇಶಿಸಿದೆ ಮತ್ತು ಟೆಸ್ಲಾ ಸಿಇಒ, ಎಲಾನ್ ಮಸ್ಕ್ 2024ರಲ್ಲಿ ಭಾರತಕ್ಕೆ ಭೇಟಿ ನೀಡಲು ಯೋಜಿಸಿದ್ದಾರೆ ಎಂದು ತಿಳಿಸಲಾಗಿದೆ. ಆದರೆ, ಕಂಪನಿಯಾಗಲೀ, ಎಲಾನ್‌ ಮಸ್ಕ್‌ ಆಗಲಿ ಇದುವರೆಗೆ ಇದರ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ಟೆಸ್ಲಾ ಘಟಕಕ್ಕೆ ಭೇಟಿ ನೀಡಿದ್ದ ಪಿಯೂಷ್ ಗೋಯಲ್

ಕಳೆದ ವಾರ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಕ್ಯಾಲಿಫೋರ್ನಿಯಾದಲ್ಲಿರುವ ಟೆಸ್ಲಾ ಕಾರ್ಖಾನೆಗೆ ಭೇಟಿ ನೀಡಿದ್ದರು. ಅಲ್ಲಿ ಎಲಾನ್‌ ಮಸ್ಕ್ ಅವರನ್ನು ಭೇಟಿ ಮಾಡುವುದೆಂದು ನಿರ್ಧಾರವಾಗಿತ್ತು. ಆದರೆ, ಮಸ್ಕ್ ಅವರಿಗೆ ಆರೋಗ್ಯದ ಬರಲು ಸಾಧ್ಯವಾಗಿರಲಿಲ್ಲ. ಆದರೆ, ಎಲಾನ್‌ ಮಸ್ಕ್‌ ಶೀಘ್ರದಲ್ಲೇ ಸಚಿವರನ್ನು ಭೇಟಿ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಮಾರಾಟ ಕೇವಲ 2 ಶೇಕಡ..!

ಕಳೆದ ವರ್ಷ ಮಾರಾಟವಾದ ಎಲ್ಲಾ ಪ್ರಯಾಣಿಕ ವಾಹನಗಳಲ್ಲಿ ಎಲೆಕ್ಟ್ರಿಕ್ ಕಾರುಗಳ ಪ್ರಮಾಣ ಕೇವಲ ಶೇ. 1.3ರಷ್ಟು ಮಾತ್ರ ಇದೆ. ಇಂಧನ ಚಾಲಿತ ವಾಹನಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ಕಾರುಗಳು ದುಬಾರಿಯಾಗಿದ್ದು, ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಇದಲ್ಲದೆ ಭಾರತದಲ್ಲಿ ಇನ್ನೂ ಸಾಕಷ್ಟು ಚಾರ್ಜಿಂಗ್ ಸ್ಟೇಷನ್‌ಗಳಿಲ್ಲ.

ಇವೆಲ್ಲ ಕಾರಣಗಳಿಂದ ಜನರು ಎಲೆಕ್ಟ್ರಿಕ್‌ ಕಾರುಗಳ ಬಗ್ಗೆ ಅಷ್ಟೇನೂ ಆಸಕ್ತಿ ತಾಳಿಲ್ಲ. ಇನ್ನೊಂದೆಡೆ ದುಬಾರಿ ತೆರಿಗೆ ಕಾರಣಕ್ಕೆ ಟೆಸ್ಲಾ ಭಾರತಕ್ಕೆ ನೇರವಾಗಿ ಕಾರುಗಳನ್ನು ಆಮದು ಮಾಡಿಕೊಳ್ಳಲು ಸಾಧ್ಯವಿಲ್ಲ. ಇದಲ್ಲದೆ ಭಾರತದಲ್ಲೇ ತಯಾರಾದ ಕಾರುಗಳು ಬೆಲೆ ಕೂಡ ಸುಮಾರು 16 ಲಕ್ಷ ರೂ.ನಷ್ಟಿದೆ.

Related post

ಅಕ್ರಮ ಭ್ರೂಣ ಹತ್ಯೆ ಹಗರಣ; ವೈದ್ಯರ ವಿರುದ್ಧದ ಪ್ರಕರಣ ರದ್ದು ಸಾಧ್ಯವಿಲ್ಲ…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ವ್ಯಾಪಿಸಿರುವ ಅಕ್ರಮ ಭ್ರೂಣ ಹತ್ಯೆ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದೆ. “ಪ್ರಕರಣ…
ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಹೆಚ್ಚು ಆಶಾವಾದಿಗಳಾಗಿರಲು ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ಇದು ವಿಶ್ವಾಸ ಮತ್ತು ನಮ್ಯತೆಯನ್ನು ಹೆಚ್ಚಿಸುತ್ತದಾದರೂ ಅದೇ ಸಮಯದಲ್ಲಿ ಭಯ, ದ್ವೇಷ, ಅಸೂಯೆ, ಸೇಡಿನಂಥ ನಕಾರಾತ್ಮಕ ಭಾವನೆಗಳನ್ನು ಹಿಂದೆ ಬಿಡಲು ಸಿದ್ಧವಾಗಿ.…
ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ…

ನ್ಯೂಸ್ ಆ್ಯರೋ : ಬರದಿಂದ ಕಂಗೆಟ್ಟಿರುವ ರಾಜ್ಯದ ರೈತರಿಗೆ ಹವಾಮಾನ ಇಲಾಖೆ ಸಿಹಿಸುದ್ದಿ ನೀಡಿದೆ. ರಾಜ್ಯಾದ್ಯಂತ ಮುಂದಿನ 6 ದಿನಗಳ ಕಾಲ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ…

Leave a Reply

Your email address will not be published. Required fields are marked *