ಮೊಬೈಲ್ ತೆಗೆದುಕೊಳ್ಳುವ ಪ್ಲ್ಯಾನ್ ನಲ್ಲಿದ್ದೀರಾ..? – ಇಲ್ಲಿದೆ ನೋಡಿ 20ಸಾವಿರದೊಳಗಿನ 5G ಸ್ಮಾರ್ಟ್ ಫೋನ್ಸ್ ಡೀಟೇಲ್ಸ್…

ಮೊಬೈಲ್ ತೆಗೆದುಕೊಳ್ಳುವ ಪ್ಲ್ಯಾನ್ ನಲ್ಲಿದ್ದೀರಾ..? – ಇಲ್ಲಿದೆ ನೋಡಿ 20ಸಾವಿರದೊಳಗಿನ 5G ಸ್ಮಾರ್ಟ್ ಫೋನ್ಸ್ ಡೀಟೇಲ್ಸ್…

ನ್ಯೂಸ್ ಆ್ಯರೋ : ಸ್ಮಾರ್ಟ್ ಫೋನ್ ಗಳಿಲ್ಲದೆ ಜೀವನ ನಡೆಸಲೂ ಅಸಾಧ್ಯ ಅನ್ನುವಷ್ಟರ ಮಟ್ಟಿಗೆ ಬಂದು ಇವತ್ತು ನಾವು ತಲುಪಿದ್ದೇವೆ. ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಇವತ್ತು ಮೊಬೈಲ್ ಬಳಸದ ವ್ಯಕ್ತಿಗಳಿಲ್ಲ. ಕಡಿಮೆ ಬಜೆಟ್ ನಲ್ಲಿ ಒಂದೊಳ್ಳೆ ಮೊಬೈಲ್ ತೆಗೆದುಕೊಳ್ಳಬೇಕೆಂಬ ಬಯಕೆ ಎಲ್ಲರಿಗೂ ಇರುತ್ತೆ. ಆದರೆ ಇನ್ಮುಂದೆ ಟೆನ್ಶನ್ ಆಗಬೇಕಿಲ್ಲ. ಬಜೆಟ್ ಸ್ನೇಹಿ ಮೊಬೈಲ್ ಗಳು ಇದೀಗ ಮಾರುಕಟ್ಟೆಗೆ ಆಗಮಿಸಿದೆ.

ಜನರ ಬೇಡಿಕೆಗೆ ಅನುಗುಣವಾಗಿ ಸಾಕಷ್ಟು ಮಾದರಿಯ ಸ್ಮಾರ್ಟ್ ಫೋನ್ ಗಳು ಈಗ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಕೈಗೆಟಕುವ ಮೌಲ್ಯದ ಫೋನ್ ನಿಂದ ಹಿಡಿದು ದುಬಾರಿ ಬೆಲೆಯ ಫೋನ್ ವರೆಗೆ ಸಾಕಷ್ಟು ರೀತಿಯ, ವಿಭಿನ್ನ ಶೈಲಿಯ ಫೋನ್ ಗಳು ಈಗ ಸಿಗುತ್ತದೆ. ಅಂತೆಯೇ ಬಜೆಟ್ ಸ್ನೇಹಿಯಾದ ಹಾಗೂ 20ಸಾವಿರ ರೂಪಾಯಿಯೊಳಗೆ ಸಿಗುವ ಕೆಲವು 5G ಸ್ಮಾರ್ಟ್ ಫೋನ್ ಗಳ ವಿವರ ಇಲ್ಲಿದೆ.

  1. ಲಾವಾ ಬ್ಲೇಜ್ 5ಜಿ

ಲಾವಾ ಬ್ಲೇಜ್ 5ಜಿ ಫೋನ್‌ನ ಬೆಲೆ 11,999 ರೂಪಾಯಿ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 700 ಪ್ರೊಸೆಸರ್‌ನಿಂದ ಚಾಲಿತವಾಗಿದ್ದು, 5000mAh ಬ್ಯಾಟರಿ ಹಾಗೂ 3.5 ಎಂಎಂ ಆಡಿಯೋ ಜಾಕ್‌ನೊಂದಿಗೆ ಬರುತ್ತದೆ.

  1. ಟೆಕ್ನೋ ಪೋವಾ 5 ಪ್ರೋ
    ಪ್ರಸಿದ್ಧ ಟೆಕ್ನೋ ಕಂಪನಿಯ ಟೆಕ್ನೋ ಪೋವಾ 5 ಪ್ರೋ ಸ್ಮಾರ್ಟ್‌ಫೋನ್ 14,999 ರೂಪಾಯಿಗೆ ಸಿಗುತ್ತದೆ. ಈ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 6080 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಈ ಫೋನ್ 5000mAh ಬ್ಯಾಟರಿ ಹಾಗೂ 3.5 ಎಂಎಂ ಹೆಡ್‌ಫೋನ್ ಜಾಕ್‌ನೊಂದಿಗೆ ಸಿಗುತ್ತದೆ.
  2. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ34 5ಜಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ34 5ಜಿ ಸ್ಮಾರ್ಟ್‌ಫೋನ್‌ನ ಬೆಲೆ 19,999 ರೂಪಾಯಿ. ಇದು 6.5 ಇಂಚಿನ ಸೂಪರ್ AMOLED ಡಿಸ್‌ಪ್ಲೇ ಹೊಂದಿದ್ದು, 6000mAh ಬ್ಯಾಟರಿ ಹಾಗೂ 3.5 ಎಂಎಂ ಆಡಿಯೋ ಜಾಕ್‌ನೊಂದಿಗೆ ಸಿಗುತ್ತದೆ.

  1. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ14 5ಜಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ14 5ಜಿ ಫೋನ್‌ನ ಬೆಲೆ 18,999 ರೂಪಾಯಿ. ಇದು 6.6 ಇಂಚಿನ ಎಫ್‌ಎಚ್‌ಡಿ ಪ್ಲಸ್ ಸೂಪರ್ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದೆ. ಈ ಫೋನ್ 5000mAh ಬ್ಯಾಟರಿ ಹೊಂದಿದ್ದು, ಇದು 3.5 ಎಂಎಂ ಆಡಿಯೋ ಜಾಕ್‌ನೊಂದಿಗೆ ಬರುತ್ತದೆ.

  1. ನೋಕಿಯಾ ಜಿ42 5ಜಿ

ಈ ಸ್ಮಾರ್ಟ್‌ ಫೋನ್‌ನ ಬೆಲೆ 12,999 ರೂಪಾಯಿ. ಇದು ಸ್ನಾಪ್‌ಡ್ರಾಗನ್ 480+ ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಈ ಫೋನ್‌ ಕೂಡಾ 5000mAh ಬ್ಯಾಟರಿ ಹೊಂದಿದ್ದು, ಇದು 3.5 ಎಂಎಂ ಆಡಿಯೋ ಜಾಕ್‌ನೊಂದಿಗೆ ಲಭ್ಯವಿದೆ.

  1. ಟೆಕ್ನೋ ಪೋವಾ 5 ಪ್ರೋ

ಪ್ರಸಿದ್ಧ ಟೆಕ್ನೋ ಕಂಪನಿಯ ಟೆಕ್ನೋ ಪೋವಾ 5 ಪ್ರೋ ಸ್ಮಾರ್ಟ್‌ಫೋನ್ 14,999 ರೂಪಾಯಿಗೆ ಸಿಗುತ್ತದೆ. ಈ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 6080 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಈ ಫೋನ್ 5000mAh ಬ್ಯಾಟರಿ ಹಾಗೂ 3.5 ಎಂಎಂ ಹೆಡ್‌ಫೋನ್ ಜಾಕ್‌ನೊಂದಿಗೆ ಸಿಗುತ್ತದೆ ಹಾಗೂ 3.5 ಎಂಎಂ ಹೆಡ್‌ಫೋನ್ ಜಾಕ್‌ನೊಂದಿಗೆ ಗ್ರಾಹಕರಿಗೆ ಲಭಿಸುತ್ತದೆ.

  1. ರಿಯಲ್ ಮಿ ನರ್ಝೋ 60 5ಜಿ

ರಿಯಲ್ ಮಿ ನರ್ಝೋ 60 5ಜಿ ಫೋನ್‌ನ ಬೆಲೆ 17,999 ರೂಪಾಯಿ. ಈ ಫೋನ್ 6.4 ಇಂಚಿನ AMOLED ಡಿಸ್‌ಪ್ಲೇ ಹೊಂದಿದ್ದು, 5000mAh ಬ್ಯಾಟರಿ ಹಾಗೂ 3.5 ಎಂಎಂ ಹೆಡ್‌ಫೋನ್ ಜಾಕ್‌ನೊಂದಿಗೆ ಸಿಗುತ್ತದೆ. ಹೀಗೆ ಅನೇಕ ಸ್ಮಾರ್ಟ್ ಫೋನ್ ಗಳು ನಿಮ್ಮ ಬಜೆಟ್ ನಲ್ಲೇ ಮಾರ್ಕೆಟ್ ನಲ್ಲಿ ಲಭ್ಯವಿದೆ. 5G ಸಾಮರ್ಥ್ಯದ ಹೊಸ ಮೊಬೈಲ್ ಇದೀಗ ನೀವು ಕೂಡಾ ತಮ್ಮದಾಗಿಸಿಕೊಳ್ಳಬಹುದು.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *