ಅಕ್ಟೋಬರ್‌ನಲ್ಲಿ ಹಣಕಾಸಿನ ನಿಯಮಗಳಲ್ಲಿ ಭಾರೀ ಬದಲಾವಣೆ – ₹ 2000 ನೋಟು ರದ್ದು, ಹೊಸ ಟಿಸಿಎಸ್ ನಿಯಮ ಜಾರಿ

ಅಕ್ಟೋಬರ್‌ನಲ್ಲಿ ಹಣಕಾಸಿನ ನಿಯಮಗಳಲ್ಲಿ ಭಾರೀ ಬದಲಾವಣೆ – ₹ 2000 ನೋಟು ರದ್ದು, ಹೊಸ ಟಿಸಿಎಸ್ ನಿಯಮ ಜಾರಿ

ನ್ಯೂಸ್‌ ಆ್ಯರೋ : ತಿಂಗಳಿಗೊಮ್ಮೆ ಹಣಕಾಸಿನ ವ್ಯವಹಾರಗಳ ನಿಯಮಗಳಲ್ಲಿ ಬದಲಾವಣೆ ಆಗುವುದು ಸಹಜ ಪ್ರಕ್ರಿಯೆ. ಇದೀಗ ಅಕ್ಟೋಬರ್‌ ತಿಂಗಳು ಪ್ರಾರಂಭಕ್ಕೆ ಕೆಲ ದಿನವಿರುವಾಗಲೇ ಹಣಕಾಸಿಗೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ ಬದಲಾವಣೆಯಾಗಿದೆ.

ಹೊಸ ಟಿಸಿಎಸ್ ನಿಯಮ, ಆಧಾರ್ ಹಾಗೂ ಸರ್ಕಾರಿ ಕೆಲಸಗಳಿಗೆ ಜನನ ಪ್ರಮಾಣಪತ್ರ ಏಕೈಕ ದಾಖಲೆ ಸೇರಿದಂತೆ ಹಲವು ಬದಲಾವಣೆಗಳು ಅಕ್ಟೋಬರ್ ತಿಂಗಳಲ್ಲಿ ಜಾರಿಗೆ ಬರಲಿವೆ. ಇನ್ನು ಸೆಪ್ಟೆಂಬರ್ ತಿಂಗಳು ಪ್ರಮುಖ ಹಣಕಾಸಿನ ಕಾರ್ಯಗಳಿಗೆ ಅಂತಿಮ ಗಡುವಾಗಿದೆ. ಹೀಗಾಗಿ ಅಕ್ಟೋಬರ್ ತಿಂಗಳಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ.

ಆಧಾರ್ ಲಿಂಕ್ ಆಗದ ಸಣ್ಣ ಉಳಿತಾಯ ಖಾತೆ ನಿಷ್ಕ್ರಿಯ

ಆಧಾರ್ ಲಿಂಕ್ ಮಾಡದ ಸಣ್ಣ ಉಳಿತಾಯ ಖಾತೆಗಳು ಅಕ್ಟೋಬರ್ 1ರಿಂದ ನಿಷ್ಕ್ರಿಯಗೊಳ್ಳಲಿವೆ. ಹಾಗೆಯೇ ₹2 ಸಾವಿರ ನೋಟು ವಿನಿಮಯ ಅಥವಾ ಠೇವಣಿಗೆ ಕೂಡ ಸೆ.30 ಅಂತಿಮ ಗಡುವಾಗಿದೆ. ಹೀಗಾಗಿ ಅಕ್ಟೋಬರ್ 1ರಿಂದ ₹2 ಸಾವಿರ ನೋಟುಗಳು ಚಲಾವಣೆಯಲ್ಲಿರೋದಿಲ್ಲ. ‌‌‌

ಈ ಸುದ್ದಿಯಲ್ಲಿ ಅಕ್ಟೋಬರ್‌ ತಿಂಗಳಲ್ಲಿ ಯಾವೆಲ್ಲ ನಿಯಮಗಳಲ್ಲಿ ಬದಲಾವಣೆಗಳಿವೆ ಹಾಗೂ ಇದರಿಂದ ಜನರಿಗೆ ಏನೆಲ್ಲ ತೊಂದರೆಯಾಗಲಿದೆ ಎಂಬುದರ ಬಗ್ಗೆ ಮಾಹಿತಿಯಿದೆ.

  1. ಹೊಸ ಟಿಸಿಎಸ್ ನಿಯಮ ಜಾರಿಹೊಸ ಟಿಸಿಎಸ್ ನಿಯಮ ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ. ವಿದೇಶಗಳಿಗೆ ಪ್ರವಾಸ ತೆರಳುವವರಿಗೆ ಹಾಗೂ ಅಲ್ಲಿ ಶಿಕ್ಷಣ ಪಡೆಯುತ್ತಿರುವವರ ಮೇಲೆ ಈ ನಿಯಮ ಪರಿಣಾಮ ಬೀರಲಿದೆ. ವಿದೇಶಗಳಲ್ಲಿ ವಾರ್ಷಿಕ ₹7ಲಕ್ಷ ಮೇಲ್ಪಟ್ಟ ಕ್ರೆಡಿಟ್ ಕಾರ್ಡ್ ವಹಿವಾಟುಗಳ ಮೇಲೆ ಶೇ.20ರಷ್ಟು ಟಿಸಿಎಸ್ ವಿಧಿಸಲಾಗುವುದು. ಒಂದು ವೇಳೆ ಇಂಥ ವೆಚ್ಚಗಳನ್ನು ವೈದ್ಯಕೀಯ ಅಥವಾ ಶೈಕ್ಷಣಿಕ ಉದ್ದೇಶಗಳಿಗೆ ಮಾಡಿದ್ದರೆ ಶೇ.5ರಷ್ಟು ಟಿಸಿಎಸ್ ವಿಧಿಸಲಾಗುವುದು. ಇನ್ನು ವಿದೇಶದಲ್ಲಿ ಶಿಕ್ಷಣ ಪಡೆಯಲು ಸಾಲ ಪಡೆದಿದ್ದರೆ ₹7ಲಕ್ಷ ಮೇಲ್ಪಟ್ಟ ಮೊತ್ತಕ್ಕೆ ಶೇ.0.5ಷ್ಟು ಟಿಸಿಎಸ್ ವಿಧಿಸಲಾಗುವುದು.

2.ಆಧಾರ್, ಸರ್ಕಾರಿ ಉದ್ಯೋಗಗಳಿಗೆ ಜನನ ಪ್ರಮಾಣಪತ್ರ ಕಡ್ಡಾಯ

ಅಕ್ಟೋಬರ್ 1ರಿಂದ ಆಧಾರ್ ಹಾಗೂ ಸರ್ಕಾರಿ ಉದ್ಯೋಗಗಳಿಗೆ ಜನನ ಪ್ರಮಾಣಪತ್ರ ಏಕೈಕ ದಾಖಲೆಯಾಗಲಿದೆ. ಅಕ್ಟೋಬರ್ 1 ಜನನ ಹಾಗೂ ಮರಣ (ನೋಂದಣಿ) ಕಾಯ್ದೆ 2023ರ ನೋಂದಣಿ ದೇಶಾದ್ಯಂತ ಜಾರಿಗೆ ಬರಲಿದೆ. ಶಾಲೆಗೆ ಮಗುವಿನ ಸೇರ್ಪಡೆ, ಡ್ರೈವಿಂಗ್ ಲೈಸೆನ್ಸ್, ಮತದಾರರ ಪಟ್ಟಿ ತಯಾರಿ, ಆಧಾರ್ ಸಂಖ್ಯೆ, ವಿವಾಹ ನೋಂದಣಿ ಅಥವಾ ಸರ್ಕಾರಿ ಉದ್ಯೋಗ ನೇಮಕಾತಿಗೆ ಜನನ ಪ್ರಮಾಣಪತ್ರ ಏಕೈಕ ದಾಖಲೆಯಾಗಿರಲಿದೆ.

  1. ₹2ಸಾವಿರ ನೋಟು ರದ್ದಾಗಲಿದೆ

ಬ್ಯಾಂಕ್ ಗಳಲ್ಲಿ ₹2000 ನೋಟು ವಿನಿಮಯ ಅಥವಾ ಠೇವಣಿಗೆ ಸೆ.30 ಅಂತಿಮ ಗಡುವಾಗಿದೆ. ಇನ್ನೂ ಬ್ಯಾಂಕ್‌ಗಳಲ್ಲಿ ಅ.1ರಿಂದ ₹2000 ನೋಟುಗಳನ್ನು ಸ್ವೀಕರಿಸಲು ನಿರಾಕರಿಸುವ ಸಾಧ್ಯತೆಯಿದೆ. ಅಲ್ಲದೆ, ಈ ಬಗ್ಗೆ ಆರ್ ಬಿಐ ಸ್ಪಷ್ಟನೆ ನೀಡಲಿದೆ.

4.ಸಣ್ಣ ಉಳಿತಾಯ ಖಾತೆಗಳಿಗೆ ಆಧಾರ್ ಲಿಂಕ್

ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಸುಕನ್ಯಾ ಸಮೃದ್ಧಿ, ಅಂಚೆ ಕಚೇರಿ ಠೇವಣಿಗಳು ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಖಾತೆಗೆ ಹೂಡಿಕೆದಾರರು ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡೋದು ಕಡ್ಡಾಯ. ಸೆ.30ರೊಳಗೆ ಸಣ್ಣ ಉಳಿತಾಯ ಖಾತೆಗಳಿಗೆ ಆಧಾರ್ ಲಿಂಕ್ ಮಾಡದಿದ್ದರೆ ಅ.1ರಿಂದ ಆ ಖಾತೆಗಳು ನಿಷ್ಕ್ರಿಯಗೊಳ್ಳಲಿವೆ.

5.ಎಲ್ ಪಿಜಿ ದರ ಬದಲಾವಣೆ

ಎಲ್ ಪಿಜಿ ದರವನ್ನು ಪ್ರತಿ ತಿಂಗಳು ಬದಲಾವಣೆ ಮಾಡಲಾಗುತ್ತದೆ. ಪ್ರತಿ ತಿಂಗಳ ಮೊದಲ ದಿನ ಸಾಮಾನ್ಯವಾಗಿ ಈ ಪರಿಷ್ಕರಣೆ ನಡೆಯುತ್ತದೆ. ಅದರಂತೆ ಅಕ್ಟೋಬರ್ 1ರಿಂದ ಕೂಡ ಎಲ್ ಪಿಜಿ ದರದಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ.

ಅಕ್ಟೋಬರ್‌ ತಿಂಗಳಿನಲ್ಲಿ ಕೆಲ ಹಣಕಾಸಿನ ನಿಯಮಗಳಲ್ಲಿ ಬದಲಾವಣೆ ಆಗುತ್ತಿದ್ದು, ಜನರು ಈ ಬಗ್ಗೆ ತಿಳಿದುಕೊಂಡು ವ್ಯವಹರಿಸಬೇಕಾಗಿದೆ.

Related post

11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ ಸಂಗೀತ ನಿರ್ದೇಶಕ ಹೇಳಿದಿಷ್ಟು…!

11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ…

ನ್ಯೂಸ್ ಆರೋ: ತಮಿಳಿನ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಜಿ.ವಿ ಪ್ರಕಾಶ್ ಕುಮಾರ್ ಈಗ ಸುದ್ದಿಯಲ್ಲಿದ್ದು,11 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಬೆನ್ನಲ್ಲೇ ಅವರ ವೈಯುಕ್ತಿಕ ವಿಚಾರಗಳನ್ನು ಟ್ರೋಲ್ ಮಾಡಲಾಗುತ್ತಿದೆ.…
ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ ಹೆಚ್ಚಿಸಿದ ವೆಸ್ಟ್‌ನೈಲ್‌

ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ…

ನ್ಯೂಸ್ ಆರೋ: ಕೊರೋನಾ ವೈರಸ್ ನ ಆತಂಕ ಮುಗಿಯುತ್ತಿದ್ದಂತೆ ಇದೀಗ ಮತ್ತೆ ಹೊಸದೊಂದು ವೈರಸ್ ಪತ್ತೆಯಾಗಿದೆ. ದಿನಕಳೆದಂತೆ ನಾನಾರೀತಿಯ ವೈರಸ್‌ಗಳು ಸೃಷ್ಠಿಯಾಗುತ್ತಿದ್ದು ಆತಂಕ ಹೆಚ್ಚಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ನೆರೆಯ…
ಮನೆಕೆಲಸದಾಕೆಯಿಂದ ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ; 66 ಗ್ರಾಂ ಚಿನ್ನ, 150 ಗ್ರಾಂ ಬೆಳ್ಳಿ ವಶ

ಮನೆಕೆಲಸದಾಕೆಯಿಂದ ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ; 66 ಗ್ರಾಂ…

ನ್ಯೂಸ್ ಆರೋ: ಕನ್ನಡ ಹಾಗೂ ಪರಭಾಷೆಯ ಸಿನಿಮಾಗಳಲ್ಲೂ ಮಿಂಚಿರುವ ನಟಿ ಛಾಯಾ ಸಿಂಗ್ ಅವರ ತಾಯಿ ಮನೆಯಲ್ಲಿ ಕಳ್ಳತನ ನಡೆದಿದೆ. ಚಿನ್ನಾಭರಣ ಕಳುವಾಗಿರುವ ಬಗ್ಗೆ ಛಾಯಾ ಸಿಂಗ್ ತಾಯಿ…

Leave a Reply

Your email address will not be published. Required fields are marked *