ಶಾಲೆ ಆರಂಭಕ್ಕೂ ಮುನ್ನವೇ ಪೋಷಕರ ಜೇಬಿಗೆ‌ ಕತ್ತರಿ – ಈ ಬಾರಿ ಮಕ್ಕಳ ಖರ್ಚು ಇನ್ನಷ್ಟು ದುಬಾರಿ, ಹೇಗೆ ಗೊತ್ತಾ?

ಶಾಲೆ ಆರಂಭಕ್ಕೂ ಮುನ್ನವೇ ಪೋಷಕರ ಜೇಬಿಗೆ‌ ಕತ್ತರಿ – ಈ ಬಾರಿ ಮಕ್ಕಳ ಖರ್ಚು ಇನ್ನಷ್ಟು ದುಬಾರಿ, ಹೇಗೆ ಗೊತ್ತಾ?

ನ್ಯೂಸ್ ಆ್ಯರೋ‌ : ಇನ್ನೇನು ಎಂದು ವಾರದಲ್ಲಿ ಶಾಲೆ ಆರಂಭ. ಶೈಕ್ಷಣಿಕ ವರ್ಷದ ಆರಂಭಕ್ಕೆ ಸಿದ್ದತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ, ಪಾಲಕರಿಗೆ ಶಾಕ್ ಎದುರಾಗಿದೆ. ಪಠ್ಯ ಪುಸ್ತಕ, ವಿದ್ಯಾರ್ಥಿಗಳ ಶಾಲೆ ಶುಲ್ಕದ ಬೆನ್ನಿಗೆ ನೋಟ್ ಬುಕ್, ವರ್ಕ್ ಬುಕ್ ಮತ್ತು ಪೇಪರ್ ಬೆಲೆ ಏರಿಕೆಯಾಗಿದೆ. ಇವುಗಳ ಬೆಲೆ ಸುಮಾರು ಶೇ. 30ರಿಂದ 40ರಷ್ಟು ಹೆಚ್ಚಳವಾಗಿದೆ.

ನೋಟ್ ಬುಕ್, ವರ್ಕ್ ಬುಕ್‍ಗೆ ಹಿಂದೆ 28 ರೂ. ಇತ್ತು. ಈಗ 40 ರೂ.ಗೆ ಏರಿಕೆಯಾಗಿದೆ. 50 ಪೈಸೆಗೆ ಸಿಗುತ್ತಿದ್ದ ಖಾಲಿ ಹಾಳೆಗೆ ಇನ್ನು 1 ರೂ., ರೂಲ್ಡ್ ಗೆ 2 ರೂ. ಪಾವತಿಸಬೇಕು.

ಶೈಕ್ಷಣಿಕ ಚಟುವಟಿಕೆಗಳ ನಿರ್ವಹಣೆ ಮತ್ತಿತರ ಕಾರಣ ನೀಡಿ ತಿಂಗಳ ಹಿಂದೆಯೇ 20ರಿಂದ 30ರಷ್ಟು ಶಾಲಾ ಪ್ರವೇಶ ಶುಲ್ಕವನ್ನು ಖಾಸಗಿ ಶಾಲಾ ಒಕ್ಕೂಟಗಳು ಏರಿಕೆ ಮಾಡಿದ್ದವು. ಇದೀಗ ಶೈಕ್ಷಣಿಕ ಪರಿಕರಗಳ ಬೆಲೆಯೂ ಹೆಚ್ಚಿದ್ದು ಪಾಲಕರಿಗೆ ತಲೆನೋವಾಗಿ ಪರಿಣಮಿಸಿದೆ.

ಕಾರಣವೇನು?

ಸದ್ಯ ಕೇಂದ್ರ ಸರಕಾರ ಹೇರಿರುವ ಜಿ.ಎಸ್.ಟಿ. ಹೊರೆ, ಇಂಧನಗಳ ಬೆಲೆ ಹೆಚ್ಚಳ, ತಯಾರಿಕರಿಂದ ಬೆಲೆ ಹೆಚ್ಚಳ, ಮತ್ತು ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಪೇಪರ್ ಗೆ ಸಾಕಷ್ಟು ಬೇಡಿಕೆ ಸೃಷ್ಟಿಯಾಗಿದ್ದು, ಬೆಲೆ ಹೆಚ್ಚಳಕ್ಕೆ ಕಾರಣ ಎಂದು ವರ್ತಕರು ಹೇಳುತ್ತಾರೆ.

ಪ್ರತೀ ವಿದ್ಯಾರ್ಥಿಗೆ ಹತ್ತರಿಂದ ಹದಿನೈದು ನೋಟ್ ಬುಕ್, ವರ್ಕ್ ಬುಕ್ ಅಗತ್ಯ. ಆದರೆ ಇದೀಗ ಬೆಲೆ ಹೆಚ್ಚಳ ಪಾಲಕರನ್ನು ಚಿಂತೆಗೀಡು ಮಾಡಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *