ಇನ್ಮುಂದೆ ದೇಶದ ಎಲ್ಲಾ ವೈದ್ಯರಿಗೆ ಯೂನಿಕ್ ಐಡಿ ಕಡ್ಡಾಯ – ನಿಯಮ ಏನು ಹೇಳುತ್ತದೆ?

ಇನ್ಮುಂದೆ ದೇಶದ ಎಲ್ಲಾ ವೈದ್ಯರಿಗೆ ಯೂನಿಕ್ ಐಡಿ ಕಡ್ಡಾಯ – ನಿಯಮ ಏನು ಹೇಳುತ್ತದೆ?

ನ್ಯೂಸ್ ಆ್ಯರೋ‌ : ಇನ್ನು ಮುಂದೆ ಭಾರತದಲ್ಲಿನ ಎಲ್ಲಾ ವೈದ್ಯರು ವಿಶೇಷ ಗುರುತಿನ ಸಂಖ್ಯೆ (UID- Unique Identification Number) ಹೊಂದಿರುವುದು ಕಡ್ಡಾಯ ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ.

ನ್ಯಾಷನಲ್ ಮೆಡಿಕಲ್ ಕಮಿಷನ್​(NMC- National Medical Commission) ನ ಎಥಿಕ್ಸ್ ಬೋರ್ಡ್ ಈ ಯೂನಿಕ್ ಐಡಿ ಒದಗಿಸಲಿದೆ. ಎನ್​ಎಂಸಿಯ ಎಥಿಕ್ಸ್ ಮತ್ತು ಮೆಡಿಕಲ್ ರಿಜಿಸ್ಟ್ರೇಷನ್ ಬೋರ್ಡ್ ರಾಷ್ಟ್ರೀಯ ವೈದ್ಯಕೀಯ ನೊಂದಣಿ (NMR- National Medical Register) ಯನ್ನು ನಿರ್ವಹಿಸಲಿದೆ.

ರಾಜ್ಯ ವೈದ್ಯಕೀಯ ಮಂಡಳಿಗಳ ರಿಜಿಸ್ಟರ್​ಗಳಲ್ಲಿರುವ ಎಲ್ಲಾ ನೊಂದಾಯಿತ ವೈದ್ಯರನ್ನು ರಾಷ್ಟ್ರೀಯ ವೈದ್ಯಕೀಯ ರಿಜಿಸ್ಟರ್​ಗೆ ಸೇರಿಸಲಾಗುತ್ತದೆ. ಈ ರಿಜಿಸ್ಟರ್​ನಲ್ಲಿ ವೈದ್ಯರ ಸ್ಪೆಷಲ್ ಕ್ವಾಲಿಫಿಕೇಶನ್, ತೇರ್ಗಡೆ ವರ್ಷ, ವಿಶ್ವ ವಿದ್ಯಾನಿಲಯ ಅಥವಾ ಶಿಕ್ಷಣ ಸಂಸ್ಥೆಯ ಹೆಸರು, ಕೆಲಸ ಮಾಡುವ ಸಂಸ್ಥೆ ಇತ್ಯಾದಿ ವಿವರಗಳು ಇರುತ್ತವೆ. ಈ ಎಲ್ಲಾ ದತ್ತಾಂಶಗಳನ್ನು ಎನ್​ಎಂಸಿಯ ಅಧಿಕೃತ ವೆಬ್​ಸೈಟ್ www.nmc.org.inನಲ್ಲಿ ವೀಕ್ಷಿಸಬಹುದು.

ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧಿಸೂಚನೆ ಪ್ರಕಾರ ವೈದ್ಯಕೀಯ ವೃತ್ತಿಯಲ್ಲಿರುವವರು ಪ್ರತೀ 5 ವರ್ಷಕ್ಕೊಮ್ಮೆ ಲೈಸೆನ್ಸ್ ನವೀಕರಿಸಬೇಕು. ಪರವಾನಿಗೆ ಅವಧಿ ಮುಗಿಯುವ ದಿನಕ್ಕೆ ಕನಿಷ್ಠ 3 ತಿಂಗಳು ಮುಂಚೆ ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಪರವಾನಿಗೆ ನವೀಕರಣಕ್ಕೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ತಿಳಿಸಲಾಗಿದೆ.

ಪರವಾನಿಗೆ ನವೀಕರಣಕ್ಕೆ ಅರ್ಜಿಯನ್ನು ರಾಜ್ಯ ವೈದ್ಯಕೀಯ ಮಂಡಳಿಗೆ ಸಲ್ಲಿಸಬೇಕಾಗುತ್ತದೆ. ಒಂದು ವೇಳೆ ರಾಜ್ಯ ಮಂಡಳಿಯು ಲೈಸೆನ್ಸ್ ನವೀಕರಣಕ್ಕೆ ನಿರಾಕರಿಸಿದರೆ ಆ ವೈದ್ಯರು ಎನ್​ಎಂಸಿಯ ಎಥಿಮ್ಸ್ ಆ್ಯಂಡ್ ಮೆಡಿಕಲ್ ರೆಗ್ಯುಲೇಶನ್ ಬೋರ್ಡ್​ಗೆ ಮನವಿ ಮಾಡಬಹುದು. ಇದು 30 ದಿನದೊಳಗೆ ಆಗಬೇಕು. ಅಂದರೆ ಲೈಸೆನ್ಸ್ ನವೀಕರಣ ಅರ್ಜಿ ತಿರಸ್ಕೃತವಾಗಿ 30 ದಿನದೊಳಗೆ ಮೇಲ್ಮನವಿ ಸಲ್ಲಿಸುವ ಅವಕಾಶ ಇರುತ್ತದೆ. ರಾಜ್ಯ ವೈದ್ಯಕೀಯ ಮಂಡಳಿಗೆ ಸಲ್ಲಿಸಿದ ಮೂಲ ಅರ್ಜಿಯನ್ನು ಸೇರಿಸಿ ಎನ್​ಎಂಸಿಯ ಕಾರ್ಯದರ್ಶಿಗೆ ವೈದ್ಯರು ಮೇಲ್ಮನವಿ ಹೋಗಬಹುದು. ಇದಕ್ಕೆ ಪ್ರೋಸಸಿಂಗ್ ಶುಲ್ಕ ಇರುತ್ತದೆ.

30 ದಿನದೊಳಗೆ ಈ ಮೇಲ್ಮನವಿ ಅರ್ಜಿಯ ಬಗ್ಗೆ ಅಂತಿಮ ತೀರ್ಮಾನ ಆಗುತ್ತದೆ. ಈ ತೀರ್ಮಾನವೇ ಅಂತಿಮ ಆಗಿರುತ್ತದೆ. ಒಂದು ವೇಳೆ, ಈ ಮೊದಲ ಮನವಿ ಅರ್ಜಿ ತಿರಸ್ಕೃತವಾದಲ್ಲಿ ಎರಡನೇ ಬಾರಿ ಮೇಲ್ಮನವಿ ಸಲ್ಲಿಸುವ ಅವಕಾಶವೂ ಇದೆ.

Related post

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ ಸೂಪರ್

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ…

ನ್ಯೂಸ್ ಆರೋ: ಆರೋಗ್ಯಕ್ಕೆ ಹಿತ ಎನಿಸುವ ಹಾಗೂ ರುಚಿಕಟ್ಟಾದ ರೆಸಿಪಿಯೊಂದನ್ನು ನಾವಿಂದು ಹೇಳಿಕೊಡುತ್ತೇವೆ. ಈ ಗೋಧಿ ಉಸ್ಲಿ ರೆಸಿಪಿಯನ್ನು ನೀವು ಬೇಕೆಂದರೆ ಸ್ನ್ಯಾಕ್ಸ್ ಆಗಿಯೂ ಬೆಳಗ್ಗಿನ ಉಪಾಹಾರವಾಗಿಯೂ ಮಾಡಿ…
ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ ಆಯ್ಕೆ

ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ…

ನ್ಯೂಸ್ ಆರೋ: ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯು ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಒಟ್ಟು 2 ಪ್ರಾಜೆಕ್ಟ್​ ಅಸೋಸಿಯೇಟ್-I ಹುದ್ದೆ ಖಾಲಿ ಇದ್ದು, ಅರ್ಹ…
ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ನ್ಯೂಸ್ ಆ್ಯರೋ : ಇಂದು  4ನೇ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯುತ್ತಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿ ಹಲವೆಡೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಇದೀಗ ಸಾಮಾನ್ಯರಂತೆಯೇ ಸರತಿ…

Leave a Reply

Your email address will not be published. Required fields are marked *