ಹಿಮಾಲಯನ್ ವಯಾಗ್ರಾ ಹುಡುಕಾಡಲು ಹೋದ ಐವರು ಕಣ್ಮರೆ – ಅಷ್ಟಕ್ಕೂ ಅಲ್ಲಿ ಅಂಥಾದ್ದೇನಾಗಿತ್ತು?

ಹಿಮಾಲಯನ್ ವಯಾಗ್ರಾ ಹುಡುಕಾಡಲು ಹೋದ ಐವರು ಕಣ್ಮರೆ – ಅಷ್ಟಕ್ಕೂ ಅಲ್ಲಿ ಅಂಥಾದ್ದೇನಾಗಿತ್ತು?

ನ್ಯೂಸ್ ಆ್ಯರೋ : ಕಳಪೆ ಆಹಾರ, ಮಿತಿಮೀರಿದ ಜಾಗತಿಕರಣ, ವಾತಾವರಣದ ನಿರಂತರ ಬದಲಾವಣೆಯಿಂದಾಗಿ ಮನುಷ್ಯ ಜೀವನ ಹದಗೆಡುತ್ತಿದೆ. ಇವುಗಳಿಂದಾಗಿ ದೈಹಿಕ ಸಾಮರ್ಥ್ಯ ಕಳೆದುಕೊಳ್ಳುತ್ತಿರುವ ಜನರ ಲೈಂಗಿಕ ಶಕ್ತಿಯೂ ಕುಂದುತ್ತಿದೆ. ಇದಕ್ಕಾಗಿ ಜನರು ಅನ್ಯ ಮಾರ್ಗಗಳಾದ ಗಿಡಮೂಲಿಕೆ, ಆಯುರ್ವೇದಿಕ್ ಔಷದಿಗಳ ಹುಡುಕಾಟದಲ್ಲಿದ್ದಾರೆ. ಹೀಗೆ ಕಾಮ ಶಕ್ತಿ ಹೆಚ್ಚಿಸುವ ‘ಹಿಮಾಲಯನ್ ವಯಾಗ್ರ’ ವನ್ನು ಅರಸಿ ನೇಪಾಳದ ಪರ್ವತ ಜಿಲ್ಲೆಯಾದ ಡಾರ್ಕುಲಕ್ಕೆ ತೆರಳಿದ ಐವರು ಇದೀಗ ಹಿಮಕುಸಿತದಿಂದ ಕಣ್ಮರೆಯಾಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಾರ್ಕುಲದ ಎಸ್.ಪಿ ಪ್ರದೀಪ್ ಸಿಂಗ್ ಧಾಮಿ, ವಯಾಗ್ರ ಹುಡುಕಲು ಹೋದವರಲ್ಲಿ ಓರ್ವ ಪುರುಷ ಸೇರಿ ನಾಲ್ಕು ಜನ ಮಹಿಳೆಯರಿದ್ದರು. ಹಿಮಕುಸಿತದಿಂದ ಅವರು ಕಾಣೆಯಾಗಿದ್ದು, ಅವರೆಲ್ಲರೂ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಅದಾಗ್ಯೂ ಅವರ ಪತ್ತೆಗಾಗಿ 8 ತಂಡಗಳು ತನಿಖೆ ನಡೆಸುತ್ತಿವೆ’ ಎಂದಿದ್ದಾರೆ.

ಇತ್ತೀಚೆಗಷ್ಟೇ, ನೇಪಾಳದ ಬ್ಯಾನಸ್ ಎಂಬ‌ ಹಳ್ಳಿಯ ಹಿಮ ಪ್ರದೇಶದಲ್ಲಿ ಹಿಮ‌ ಕುಸಿತವಾಗಿದೆ. ಇದೇ ಸಂದರ್ಭದಲ್ಲಿ ಹಿಮಾಲಯನ್ ವಯಾಗ್ರ ಹುಡುಕಲು ಹೋದವರು‌ ಕಣ್ಮರೆಯಾಗಿರಬಹುದು ಎಂದು ಎನ್ನಲಾಗಿದೆ.

ಹಿಮಾಲಯನ್ ವಯಾಗ್ರ ಅಂದರೇನು?

ಹಿಮಾಲಯನ್ ವಯಾಗ್ರ ಅಥವಾ ಯರ್ಸ್ ಗುಂಬಾ ಎಂಬ ಅಣಬೆ ಜಾತಿಯ ಸಸ್ಯವು ಸುಮಾರು 2ರಿಂದ 3 ಸಾವಿರ ಮೀಟರ್ ಎತ್ತರದ ಪರ್ವತ ಪ್ರದೇಶಗಳಲ್ಲಿ ಮಾತ್ರ ಬೆಳೆಯುತ್ತದೆ. ಇದನ್ನು ಹೆಚ್ಚಾಗಿ ಚೀನಾ ಮೂಲದ ಔಷಧಗಳಲ್ಲಿ ಬಳಸಲಾಗುತ್ತದೆ. ಕಾಮೋತ್ತೇಜಕ, ಹೃದಯ ಮತ್ತು‌ ಮೂತ್ರ ಪಿಂಡದ ಸಮಸ್ಯೆಗಳಿಗೆ ಇದನ್ನು‌ ಬಳಸಲಾಗುತ್ತದೆ.

ಟಿಬೆಟ್ ನಲ್ಲಿ ಮಾತ್ರ ಸಿಗುತ್ತೆ..!!

ಈ ಹಿಮಾಲಯನ್ ವಯಾಗ್ರ ಟಿಬೆಟಿಯನ್ ಪ್ರಸ್ಥಭೂಮಿಯಲ್ಲಿ ಮಾತ್ರ ಕಂಡು ಬರುತ್ತದೆ. ನೇಪಾಳದ ಜನರು ಮೇ ತಿಂಗಳಲ್ಲಿ ಯರ್ಸ್ ಗುಂಬಾ ಉತ್ಸವ ಆವರಿಸುತ್ತಾರೆ. ಮತ್ತು ಹಿಮಾಲಯನ್ ವಯಾಗ್ರ ಅರಸಿ ಪರ್ವತ ಪ್ರದೇಶಗಳಿಗೆ ತೆರಳುತ್ತಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *