ರೈತ ವರ್ಗಕ್ಕೆ ಗುಡ್ ನ್ಯೂಸ್‌ – ಪಿಎಂ-ಕಿಸಾನ್ 14ನೇ ಕಂತಿನ 2 ಸಾವಿರ ರೂಪಾಯಿ ಯಾವಾಗ ಬಿಡುಗಡೆಯಾಗುತ್ತೆ ಗೊತ್ತಾ?

ರೈತ ವರ್ಗಕ್ಕೆ ಗುಡ್ ನ್ಯೂಸ್‌ – ಪಿಎಂ-ಕಿಸಾನ್ 14ನೇ ಕಂತಿನ 2 ಸಾವಿರ ರೂಪಾಯಿ ಯಾವಾಗ ಬಿಡುಗಡೆಯಾಗುತ್ತೆ ಗೊತ್ತಾ?

ನ್ಯೂಸ್ ಆ್ಯರೋ : ಪ್ರಧಾನ‌ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ‌ ನೋಂದಾಯಿಸಿಕೊಂಡಿರುವ ರೈತರು 14ನೇ ಕಂತಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಈ ವರ್ಷದ ಪೆಬ್ರವರಿಯಲ್ಲಿ 13ನೇ ಕಂತನ್ನು‌ ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದರು. ಇದೀಗ 14 ಕಂತು ಬಿಡುಗಡೆಯಾಗಲು ದಿನಗಣನೆ ಆರಂಭವಾಗಿದ್ದು, ಆ ಬಗೆಗಿನ‌ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

ಕಿಸಾನ್ ಸಮ್ಮಾನ್ ಯೋಜನೆಯಡಿ ಅರ್ಹ ರೈತರಿಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಮೂರು‌ ಕಂತುಗಳಲ್ಲಿ 2000 ರೂ ಅಂದರೆ ವಾರ್ಷಿಕವಾಗಿ 6,000 ನೀಡಲಾಗುತ್ತದೆ. ಈ ಯೋಜನೆಯಡಿ ಏಪ್ರಿಲ್-ಜುಲೈ, ಆಗಸ್ಟ್-ನವೆಂಬರ್ ಹಾಗೂ ಡಿಸೆಂಬರ್-ಮಾರ್ಚ್ ತಿಂಗಳಲ್ಲಿ ಆರ್ಥಿಕ ನೆರವು ನೀಡಲಾಗುತ್ತದೆ. ಈ ಮೊತ್ತವು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾವಣೆಯಾಗುತ್ತದೆ.

ಕಿಸಾನ್ ಯೋಜನೆಯ ನಾಲ್ಕನೇ ಕಂತಿಗೆ ಅರ್ಜಿ ಸಲ್ಲಿಸುವುದು ಹೇಗೆ?

ಕಿಸಾನ್ ಸಮ್ಮಾನ್ ಯೋಜನೆಯ 14ನೇ ಕಂತನ್ನು‌ ಪಡೆಯಲು-

  1. 1.ಮೊದಲು www.pmkisan.gov.in ವೆಬ್ಸೈಟ್ ಗೆ ಲಾಗಿನ್ ಆಗಿ ನಂತರ ‘ಫಾರ್ಮರ್ಸ್ ಕಾರ್ನರ್’ ಆಯ್ಕೆ ಕ್ಲಿಕ್ ಮಾಡಿ.
  2. ಬಳಿಕ ಹೊಸ ರೈತರ‌ ನೋಂದಣಿ ಮತ್ತು ನಿಮ್ಮ ಆಧಾರ್ ಸಂಖ್ಯೆಯನ್ನು‌ ನಮೂದಿಸಿ
  3. ಅದಾದ ಬಳಿಕ ‘ಹೌದು’ ಆಯ್ಕೆಯನ್ನು ಕ್ಲಿಕ್ ಮಾಡಿ.
  4. ನಂತರ‌ ಕಿಸಾನ್ ಸಮ್ಮಾನ್ ಸ್ಕೀಮ್ ವಿನಂತಿಸಿದ ವಿವರಗಳನ್ನು ನಮೂದಿಸಬೇಕು.

ಪರಿಶೀಲನೆ ಹೇಗೆ‌ ನಡೆಸುವುದು?

  • 1.ಮೊದಲು www.pmkisan.gov.in ವೆಬ್ಸೈಟ್ ಗೆ ಲಾಗಿನ್ ಆಗಿ.
  • 2.ಬಳಿಕ ಮುಖಪುಟದಲ್ಲಿರುವ ‘ಮಾಜಿಸ್ ಕಾರ್ನರ್’ ಕ್ಲಿಕ್ ಮಾಡಿ.
  • 3.ಇದಾದ ನಂತರ ‘ಫಲಾನುಭವಿ ಸ್ಥಿತಿ’ ಆಯ್ಕೆ ಮೇಲೆ ಕ್ಲಿಕ್ ಮಾಡಿ.
  • 4.ಅನಂತರ ಡೇಟಾ ಪಡೆದರೆ ಬಳಕೆ ದಾರರ ಸ್ಥತಿ ಪರದೆಯಲ್ಲಿ ಕಾಣಿಸುತ್ತದೆ.
  • ಫಲಾನುಭವಿಗಳ ಪಟ್ಟಿ ಪರಿಶೀಲನೆ ಹೇಗೆ?
  • 1.ಮೊದಲು www.pmkisan.gov.in ವೆಬ್ಸೈಟ್ ಗೆ ಲಾಗಿನ್ ಆಗಿ.
  • 2.ನಂತರ ಮುಖಪುಟದ ‘ಫಲಾನುಭವಿ ಪಟ್ಟಿ’ ಕ್ಲಿಕ್ ಮಾಡಿ.
  • 3.ಇಲ್ಲಿ‌ ರಾಜ್ಯ, ಜಿಲ್ಲೆ,ಉಪ ಜಿಲ್ಲೆ, ತಾಲೂಕು ಮತ್ತು ಗ್ರಾಮ‌ ನಮೂದಿಸಿದರೆ ಫಲಾನುಭವಿಗಳ ಪಟ್ಟಿ ಕಾಣಿಸುತ್ತದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *