ಅಮಿತಾಭ್ ಬಚ್ಚನ್, ವಿರಾಟ್ ಕೊಹ್ಲಿ, ಶಾರುಖ್ ಖಾನ್ ಟ್ವಿಟರ್ ಬ್ಲೂಟಿಕ್ ಏಕಾಏಕಿ‌ ಮಾಯ – ಇದೇನು ಎಲಾನ್ ಮಸ್ಕ್ ಹೊಸಾ ರೂಲ್ಸ್?

ಅಮಿತಾಭ್ ಬಚ್ಚನ್, ವಿರಾಟ್ ಕೊಹ್ಲಿ, ಶಾರುಖ್ ಖಾನ್ ಟ್ವಿಟರ್ ಬ್ಲೂಟಿಕ್ ಏಕಾಏಕಿ‌ ಮಾಯ – ಇದೇನು ಎಲಾನ್ ಮಸ್ಕ್ ಹೊಸಾ ರೂಲ್ಸ್?

ನ್ಯೂಸ್ ಆ್ಯರೋ : ಇತ್ತೀಚೆಗಷ್ಟೇ ಟ್ವಿಟರನ್ನು ತನ್ನ‌ ತೆಕ್ಕೆಗೆ ಹಾಕಿಕೊಂಡಿರುವ ಎಲಾನ್ ಮಸ್ಕ್ ಟ್ವಿಟರ್ ನಲ್ಲಿ ತರಹೇವಾರಿ ರೂಲ್ಸ್ ಗಳನ್ನು ತರುವ ಮೂಲಕ ಸುದ್ದಿಯಾಗಿದ್ದಾರೆ. ಇದೀಗ ಕ್ರೀಡೆ, ಸಿನಿಮಾ‌ ಕ್ಷೇತ್ರದ ದಿಗ್ಗಜರ ಟ್ವಿಟ್ಟರ್ ಬ್ಲೂಟಿಕ್ ಏಕಾಏಕಿ ಮಾಯವಾಗಿದ್ದು ‘ಹಣ ಕೊಟ್ಟು ಬ್ಲೂ ಟಿಕ್ ಪಡೆದುಕೊಳ್ಳಿ’ ಎಂದು ಎಲಾನ್ ಮಾಸ್ಕ್ ತಿಳಿಸಿದ್ದಾರೆ.

ಹೌದು, ಟ್ವಿಟ್ಟರ್ ಸಿಇಒ ಎಲಾನ್‌ ಮಸ್ಕ್ ತಮ್ಮ ಮೈಕ್ರೋ-ಬ್ಲಾಗಿಂಗ್ ಸೈಟ್ ನ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಈ ಎಲ್ಲಾ ನಿಯಮಗಳನ್ನು ಜಾರಿ ಮಾಡುತ್ತಿದ್ದಾರೆ. ಅದರಂತೆ ಟ್ವಿಟ್ಟರ್‌ ಬ್ಲೂಟಿಕ್‌ ಚಂದಾದಾರಿಕೆಗೆ ಬೆಲೆ ನಿಗದಿ ಮಾಡಲಾಗಿದ್ದು, ಯಾರೆಲ್ಲಾ ಹಣ ಪಾವತಿ ಮಾಡಿಲ್ಲವೋ ಅವರ ಖಾತೆ ಈಗ ಸಾಮಾನ್ಯ ಖಾತೆಯಂತೆ ಆಗಿದ್ದು, ಅಭಿಮಾನಿಗಳು ಅಚ್ಚರಿಗೊಳಗಾಗಿದ್ದಾರೆ.

ಏನಿದು ಹೊಸಾ ರೂಲ್ಸ್?

ಟ್ವಿಟರ್‌ ಖಾತೆಯು ಅಧಿಕೃತ ಎಂದು ತಿಳಿಸುವ ಸಲುವಾಗಿ ಈ ಬ್ಲೂಟಿಕ್‌ ನೀಡಲಾಗುತ್ತಿದ್ದು, ಈವರೆಗೂ ಇದು ಗಣ್ಯಾತಿಗಣ್ಯರಿಗೆ ಉಚಿತವಾಗಿ ಬ್ಲೂಟಿಕ್ ದೊರೆಯುತ್ತಿತ್ತು. ಆದರೆ, ಈಗ ಅದಕ್ಕೆ ಹಣ ಪಾವತಿ ಮಾಡಬೇಕಾಗಿದೆ. ಅಂದರೆ ವೆಬ್‌ ಬಳಕೆದಾರರು ಪ್ರತಿ ತಿಂಗಳು 657ರೂ. ಹಾಗೂ ಐಒಎಸ್ ಮತ್ತು ಆಂಡ್ರಾಯ್ಡ್‌ ಬಳಕೆದಾರರು 904ರೂ. ಗಳನ್ನು ಪಾವತಿ ಮಾಡಬೇಕು. ಏ.20ರಿಂದ ಗಣ್ಯರಿಗೆ ಸಿಕ್ಕ ಉಚಿತ ಬ್ಲೂ ಟಿಕ್ ಗಳು ಮಾಯವಾಗಿದ್ದು, ಹಣ ಪಾವತಿ ಮಾಡುವಂತೆ ಎಲಾನ್ ಮಾಸ್ಕ್ ತಿಳಿಸಿದ್ದಾರೆ.

ಬ್ಲೂಟಿಕ್ ಕಳೆದುಕೊಂಡ ಸೆಲೆಬ್ರಿಟಿಗಳು ಯಾರೆಲ್ಲಾ?

ಕ್ರೀಡೆ, ಸಿನಿಮಾ, ರಾಜಕೀಯ ಕ್ಷೇತ್ರದ ದಿಗ್ಗಜರುಗಳಾದ ಶಾರುಖ್ ಖಾನ್, ಅಮಿತಾಬ್ ಬಚ್ಚನ್, ಆಲಿಯಾ ಭಟ್, ಯುಪಿ ಸಿಎಂ ಯೋಗಿ ಆದಿತ್ಯನಾಥ್, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸೇರಿದಂತೆ ಸ್ವಾಮೀಜಿಗಳು ಸಮಾಜದಲ್ಲಿ ಉತ್ತಮ ಸೇವೆಯಲ್ಲಿ ಇರುವವರು, ದೊಡ್ಡ ದೊಡ್ಡ ಸರ್ಕಾರಿ ಅಧಿಕಾರಿಗಳು, ಸರ್ಕಾರಿ ಇಲಾಖೆಗಳು ಹಾಗೂ ಸಾಮಾಜಿಕ ಜೀವನದಲ್ಲಿ ಇರುವ ಹಲವರು ಈ ಬ್ಲೂಟಿಕ್ ಸೇವೆಯನ್ನು‌ ಕಳೆದುಕೊಂಡಿದ್ದಾರೆ.

ಎಲಾನ್ ಮಸ್ಕ್ ಅವರ ಈ ನಿರ್ಧಾರದಿಂದಾಗಿ ಕೆಲವರು ಸಂತಸ ಪಟ್ಟರೆ ಮತ್ತೆ ಕೆಲವರು ಸೋಶಿಯಲ್ ಮೀಡಿಯಾ ಮೂಲಕ ಮಸ್ಕ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಆದರೆ ಎಲಾನ್ ಮಸ್ಕ್ ಮಾತ್ರ ಯಾರ ಮಾತಿಗೂ ಡೋಂಟ್ ಕೇರ್ ಅನ್ನುತ್ತಿದ್ದಾರೆ.

Related post

ದಿನ‌ ಭವಿಷ್ಯ 03-06-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 03-06-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಆರೋಗ್ಯವನ್ನು ನಿರ್ಲಕ್ಷ್ಯ ಮಾಡಬೇಡಿ ವಿಶೇಷವಾಗಿ ಮದ್ಯಪಾನ ಮಾಡಬೇಡಿ. ರಿಯಲ್ ಎಸ್ಟೇಟ್ ಮತ್ತು ಆರ್ಥಿಕ ವ್ಯವಹಾರಗಳಿಗೆ ಒಳ್ಳೆಯ ದಿನ. ಒಬ್ಬ ಹಳೆಯ ಸ್ನೇಹಿತರು ಸಂಜೆ ನಿಮಗೆ ಕರೆ ಮಾಡುತ್ತಾರೆ…
ಉಡುಪಿಯಲ್ಲಿ ಪ್ರಜ್ವಲ್ ರೇವಣ್ಣ ಮಾದರಿ ಪ್ರಕರಣ – ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿ ವಿಡಿಯೋ ಮಾಡುತ್ತಿದ್ದ ಕಾಮುಕ : ಪ್ರಕರಣ ಬೆಳಕಿಗೆ ಬಂದದ್ದು ಹೇಗೆ?

ಉಡುಪಿಯಲ್ಲಿ ಪ್ರಜ್ವಲ್ ರೇವಣ್ಣ ಮಾದರಿ ಪ್ರಕರಣ – ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ…

ನ್ಯೂಸ್ ಆ್ಯರೋ : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಇಡೀ ದೇಶದಲ್ಲಿ ಭಾರಿ ಸದ್ದು ಮಾಡುತ್ತಿದೆ. ಈಗ ಇದೇ ಮಾದರಿ ಎನ್ನಲಾದ ಮತ್ತೊಂದು ಘಟನೆ…
ವಿಧಾನಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಪಟ್ಟಿ ಪ್ರಕಟ – ಸಿ.ಟಿ ರವಿಗೆ ಬಂಪರ್, ಮಾಜಿ ಸಂಸದೆ ಸುಮಲತಾಗೆ ನಿರಾಸೆ

ವಿಧಾನಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಪಟ್ಟಿ ಪ್ರಕಟ – ಸಿ.ಟಿ ರವಿಗೆ…

ನ್ಯೂಸ್ ಆ್ಯರೋ : ಶಾಸಕರಿಂದ ಆಯ್ಕೆಯಾಗುವ ವಿಧಾನ ಪರಿಷತ್ ಚುನಾವಣೆಗೆ ರಾಜ್ಯ ಬಿಜೆಪಿ ತನ್ನ ಮೂವರು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು ಚಿಕ್ಕಮಗಳೂರಿನ ಮಾಜಿ ಶಾಸಕ, ಮಾಜಿ ರಾಷ್ಟ್ರೀಯ ಸಂಘಟನಾ…

Leave a Reply

Your email address will not be published. Required fields are marked *