The Elephant Whisperers : ಪ್ರಶಸ್ತಿ ವಿಜೇತ ದಂಪತಿ ಬೊಮ್ಮನ್ ಬೆಳ್ಳಿ ದಂಪತಿ ಸಾಕುತ್ತಿದ್ದ ಮರಿಯಾನೆ ಸಾವು – ವಿಡಿಯೋ ಇಲ್ಲಿದೆ..

The Elephant Whisperers : ಪ್ರಶಸ್ತಿ ವಿಜೇತ ದಂಪತಿ ಬೊಮ್ಮನ್ ಬೆಳ್ಳಿ ದಂಪತಿ ಸಾಕುತ್ತಿದ್ದ ಮರಿಯಾನೆ ಸಾವು – ವಿಡಿಯೋ ಇಲ್ಲಿದೆ..

ನ್ಯೂಸ್ ಆ್ಯರೋ : ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ ʻದಿ ಎಲಿಫೆಂಟ್ ವಿಸ್ಪರರ್ಸ್‌ʼ (The Elephant Whisperers) ಖ್ಯಾತಿಯ ದಂಪತಿ ಬೊಮ್ಮನ್ ಮತ್ತು ಬೆಳ್ಳಿ ಅವರು ಆರೈಕೆ ಮಾಡುತ್ತಿದ್ದ ನಾಲ್ಕು ತಿಂಗಳ ಮರಿ ಆನೆಯೊಂದು ಮಾರ್ಚ್‌ 31ರಂದು ಶುಕ್ರವಾರ ನಸುಕಿನಲ್ಲಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

ಸುಮಾರು ಎರಡು ವಾರಗಳ ಕಾಲ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರದಲ್ಲಿ ಮರಿ ಆನೆಯನ್ನು ಇರಿಸಲಾಗಿತ್ತು. ಆನೆ ಮರಿ ತಾಯಿ ಮತ್ತು ಹಿಂಡಿನಿಂದ ಬೇರ್ಪಟ್ಟಿರುವುದು ಗೊತ್ತಾಗುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಆನೆಮರಿಯನ್ನು ಶಿಬಿರಕ್ಕೆ ಸ್ಥಳಾಂತರಿಸಿದ್ದಾರೆ. ತನ್ನ ಹಿಂಡಿನಿಂದ ಬೇರ್ಪಟ್ಟ ಒತ್ತಡದ ಕಾರಣದಿಂದಾಗಿ ಮೃತಪಟ್ಟಿದೆ ಎನ್ನಲಾಗಿದೆ.

ಕಳೆದ ತಿಂಗಳ ಆರಂಭದಲ್ಲಿ, ರಾಜ್ಯ ಅರಣ್ಯ ಇಲಾಖೆಯ ಆದೇಶದಂತೆ, ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಬೆಲ್ಲನ್ ಎಂಬಲ್ಲಿನ ಬಾವಿಯಿಂದ ಮರಿ ಆನೆಯನ್ನು ರಕ್ಷಿಸಲಾಯಿತು. ಮಾರ್ಚ್ 16ರಿಂದ, ಮರಿ ಆನೆಗೆ ದ್ರವ ಆಹಾರವನ್ನು ನೀಡಲಾಗಿತ್ತು. ವೈದ್ಯಕೀಯ ಸಿಬ್ಬಂದಿ ಮತ್ತು ದಂಪತಿ ಬೊಮ್ಮನ್ ಮತ್ತು ಬೆಳ್ಳಿ ಅವರು ಮೇಲ್ವಿಚಾರಣೆ ಮಾಡುತ್ತಿದ್ದರು. ಅಧಿಕಾರಿಗಳ ಪ್ರಕಾರ, ಆನೆಮರಿಗೆ ಲ್ಯಾಕ್ಟೋಜೆನ್ ಅನ್ನು ನೀಡಲಾಗುತ್ತಿತ್ತು. ಮರಿ ಆನೆ ಲ್ಯಾಕ್ಟೋಜೆನ್ ಅನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

ಮಾರ್ಚ್‌ 30 ಮಧ್ಯಾಹ್ನದವರೆಗೆ ಆನೆ ಮರಿಯ ಆರೋಗ್ಯ ಸಾಮಾನ್ಯವಾಗಿತ್ತು ಎಂದು ಎಂಟಿಆರ್ ಕ್ಷೇತ್ರ ನಿರ್ದೇಶಕ ಡಿ.ವೆಂಕಟೇಶ್ ತಿಳಿಸಿದ್ದಾರೆ. ಆದರೆ ಸಂಜೆಯ ಹೊತ್ತಿಗೆ ಬೇಧಿ ಉಂಟಾಗಿದ್ದು, ರಾತ್ರಿಯವರೆಗೂ ಹಾಗೇ ಇತ್ತು. ‘ಪಶುವೈದ್ಯರ ತಂಡವು ಆನೆ ಮರಿಗೆ ಚಿಕಿತ್ಸೆ ನೀಡಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಮೃತಪಟ್ಟಿದೆ’ ಎಂದು ವೆಂಕಟೇಶ್ ತಿಳಿಸಿದರು. ಕೆಲವು ಅಲರ್ಜಿಗಳಿಂದ ಅತಿಸಾರದಿಂದಾಗಿ ಸಾವು ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಆದರೆ ಅನೆ ಮರಿ ಸಾವಿಗೆ ನಿಖರವಾದ ಕಾರಣವನ್ನು ಅಧ್ಯಯನ ಮಾಡಲು ಮರಣೋತ್ತರ ಪರೀಕ್ಷೆ ನಡೆಸಲು ಲ್ಯಾಬ್ ಪರೀಕ್ಷೆಗಾಗಿ ಮೃತದೇಹದ ಪ್ರಮುಖ ಭಾಗಗಳ ಮಾದರಿಗಳನ್ನು ಸಂಗ್ರಹಿಸಲಾಗಿದೆ. ನಂತರ, ಬೊಮ್ಮನ್ ಮತ್ತು ಅರಣ್ಯ ಸಿಬ್ಬಂದಿ ಅರಣ್ಯ ಪ್ರದೇಶದಲ್ಲಿ ಶವವನ್ನು ಸುಡುವ ಮೊದಲು ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *