ಸ್ಟಾರ್​ ನಟ ತಿಂದು ಉಗುಳಿದ ಚೂಯಿಂಗ್ ಗಮ್‌ ಬೆಲೆ ಲಕ್ಷ ಲಕ್ಷ – ಹರಾಜಿನಲ್ಲಿದೆ ರಾಬರ್ಟ್ ಡೌನಿ ಎಸೆದ ಗಮ್‌..!!

ಸ್ಟಾರ್​ ನಟ ತಿಂದು ಉಗುಳಿದ ಚೂಯಿಂಗ್ ಗಮ್‌ ಬೆಲೆ ಲಕ್ಷ ಲಕ್ಷ – ಹರಾಜಿನಲ್ಲಿದೆ ರಾಬರ್ಟ್ ಡೌನಿ ಎಸೆದ ಗಮ್‌..!!

ನ್ಯೂಸ್‌ ಆ್ಯರೋ : ಹಾಲಿವುಡ್ ನಟ ರಾಬರ್ಟ್ ಡೌನಿ ಜೂನಿಯರ್​ ತಿಂದು ಉಗುಳಿದ ಚೂಯಿಂಗ್​ ಗಮ್​ ಅನ್ನು ಹರಾಜಿಗೆ ಇಡಲಾಗಿದೆ. ಕೇಳೋಕೆ ವಿಚಿತ್ರ ಅನಿಸಿದರೂ, ಇದು ಸತ್ಯ. ಈ ಬಗ್ಗೆ ಇಬೇ ವೆಬ್​ಸೈಟ್​ನಲ್ಲಿ ಚೂಯಿಂಗ್ ಗಮ್ ಮಾರಾಟ ಮಾಡುತ್ತಿರುವ ವ್ಯಕ್ತಿ ಹೇಳಿದ್ದಾನೆ.

ಹಾಲಿವುಡ್ ಸಿನಿಮಾದ ಐರನ್ ಮ್ಯಾನ್ ಪಾತ್ರ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹಾಲಿವುಡ್​ನ ರಾಬರ್ಟ್ ಡೌನಿ ಜೂನಿಯರ್ ಅವರು ಐರನ್ ಮ್ಯಾನ್ ಪಾತ್ರದಿಂದ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಈ ನಟ ತಿಂದು ಅಗಿದು ಉಗುಳಿದ ಚೂಯಿಂಗ್​ ಗಮ್​ ದುಬಾರಿ ಬೆಲೆಗೆ ಹರಾಜು ಹಾಕಲಾಗುತ್ತಿದೆ.

ಹಾಲಿವುಡ್ ವಾಕ್ ಆಫ್ ಫೇಮ್ ಸಮಾರಂಭದಲ್ಲಿ ನಟ ರಾಬರ್ಟ್ ಡೌನಿ ಜೂನಿಯರ್ ತಿಂದೆಸೆದ ಚೂಯಿಂಗ್ ಗಮ್ ತನ್ನ ಬಳಿ ಇದೆ ಎಂದು ಇದೆ ಎಂದು ಅಭಿಮಾನಿಯೊಬ್ಬ ಹೇಳಿಕೊಂಡಿದ್ದಾನೆ. ಗಮ್ ಅನ್ನು ದೃಢೀಕರಿಸಲು ಯಾವುದೇ ಮಾರ್ಗವಿಲ್ಲದಿದ್ದರೂ, ಅದರ ಮೇಲೆ ಡೌನಿಯವರ ಡಿಎನ್‌ಎ ಇದೆಯೇ ಎಂದು ಪರೀಕ್ಷಿಸಬಹುದು ಎಂದು ಹೇಳಿದ್ದಾನೆ. ಈಗ ಇದೇ ಚೂಯಿಂಗ್ ಗಮ್ ಅನ್ನು ಹರಾಜಿಗೆ ಇರಿಸಿದ್ದಾನೆ.

ಈ ಚೂಯಿಂಗ್ ಗಮ್ ಹರಾಜಿನಲ್ಲಿ ಈಗ 4,000 ಡಾಲರ್‌ (ಸುಮರು ₹ 4 ಲಕ್ಷ) ಗಿಂತಲೂ ಹೆಚ್ಚು ಆರಂಭಿಕ ಬಿಡ್‌ನಲ್ಲಿದೆ. ಏಪ್ರಿಲ್ 1 ರಂದು ಹರಾಜು ಕೊನೆಗೊಳ್ಳಲಿದೆ. ಈ ಗಮ್ ಅನ್ನು ಪ್ಲಾಸ್ಟಿಕ್ ಕಂಟೇನರ್‌ನಲ್ಲಿ ಅದೃಷ್ಟದ ಬಿಡ್ಡರ್‌ಗೆ ರವಾನಿಸಲಾಗುತ್ತದೆ. ಈ ಸುದ್ದಿ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.

ಇದನ್ನು ಹೆಚ್ಚು ಬಿಡ್​ ಮಾಡಿದವರಿಗೆ ನೀಡಲಾಗುತ್ತದೆ. ಈ ಚೂಯಿಂಗ್​ ಗಮ್​ ಅನ್ನು ಒಂದು ಸಿಲ್ವರ್​ ಕಂಟೇನರ್​ನಲ್ಲಿ ಹಾಕಿ ನೀಡಲಾಗುತ್ತಂತೆ. ಈ ಸುದ್ದಿ ಕೇಳಿ ನೆಟ್ಟಿಗರು ಕಕ್ಕಾಬಿಕ್ಕಿಯಾಗಿದ್ದಾರೆ…!!

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *