ಅಪರೂಪದ ಕಾಯಿಲೆಗಳ ಔಷಧಕ್ಕೆ ತೆರಿಗೆ ವಿನಾಯಿತಿ – ಬಜೆಟ್‌ನಲ್ಲಿ ಘೋಷಿಸಿದಂತೆ ಇಂದಿನಿಂದಲೇ ಜಾರಿ‌‌

ಅಪರೂಪದ ಕಾಯಿಲೆಗಳ ಔಷಧಕ್ಕೆ ತೆರಿಗೆ ವಿನಾಯಿತಿ – ಬಜೆಟ್‌ನಲ್ಲಿ ಘೋಷಿಸಿದಂತೆ ಇಂದಿನಿಂದಲೇ ಜಾರಿ‌‌

ನ್ಯೂಸ್‌ ಆ್ಯರೋ : ಕೇಂದ್ರ ಸರ್ಕಾರವು 2023–24ರ ಬಜೆಟ್‌ನಲ್ಲಿ ಘೋಷಿಸಿದಂತೆ ಅಪರೂಪದ ಕಾಯಿಲೆಗಳ ಚಿಕಿತ್ಸೆಗಾಗಿ ವಿದೇಶದಿಂದ ಆಮದು ಮಾಡಿಕೊಳ್ಳುವ ಔಷಧಿ ಮತ್ತು ಆಹಾರ ಉತ್ಪನ್ನಗಳ ಮೇಲಿನ ತೆರಿಗೆಗೆ ವಿನಾಯಿತಿ ನೀಡಿದೆ.

ಇಂದಿನಿಂದ 2023-24ನೇ ಸಾಲಿನ ಆರ್ಥಿಕ ವರ್ಷ ಆರಂಭವಾಗುತ್ತಿದ್ದು, ಕೇಂದ್ರ ಸರ್ಕಾರ ಹಲವು ಬದಲಾವಣೆಗಳನ್ನು ಮಾಡುತ್ತಿದೆ. ಅದರಲ್ಲಿ ವಿಶೇಷವಾಗಿ ಅಪರೂಪದ ಕಾಯಿಲೆಗೆ ವಿದೇಶದಿಂದ ಆಮದು ಮಾಡಿಕೊಳ್ಳುವ ಔಷಧಿ ಹಾಗೂ ಆಹಾರ ಉತ್ಪನ್ನಗಳಿಗೆ ವಿಧಿಸುತ್ತಿದ್ದ ತೆರೆಗೆಗೆ ವಿನಾಯಿತಿ ನೀಡಿದೆ.

ವಿನಾಯಿತಿ ಅಧಿಸೂಚನೆಯ ಮೂಲಕ ಅಪರೂಪದ ರೋಗಗಳ ರಾಷ್ಟ್ರೀಯ ನೀತಿ 2021 ರ ಅಡಿಯಲ್ಲಿ ಪಟ್ಟಿ ಮಾಡಲಾದ ಎಲ್ಲಾ ಅಪರೂಪದ ಕಾಯಿಲೆಗಳ ಚಿಕಿತ್ಸೆಗಾಗಿ ವೈಯಕ್ತಿಕ ಬಳಕೆಗಾಗಿ ವಿಶೇಷ ವೈದ್ಯಕೀಯ ಉದ್ದೇಶಗಳಿಗಾಗಿ ಆಮದು ಮಾಡಿಕೊಳ್ಳುವ ಎಲ್ಲಾ ಔಷಧಿಗಳು ಮತ್ತು ಆಹಾರ ಉತ್ಪನ್ನಗಳ ಮೇಲಿನ ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ವಿನಾಯಿತಿಯನ್ನು ಪಡೆಯಲು, ವೈಯಕ್ತಿಕ ಆಮದುದಾರರು ಕೇಂದ್ರ ಅಥವಾ ರಾಜ್ಯ ಆರೋಗ್ಯ ಸೇವೆಗಳ ನಿರ್ದೇಶಕರು ಅಥವಾ ಜಿಲ್ಲೆಯ ಜಿಲ್ಲಾ ವೈದ್ಯಾಧಿಕಾರಿ/ಸಿವಿಲ್ ಸರ್ಜನ್ ಅವರಿಂದ ಪ್ರಮಾಣಪತ್ರವನ್ನು ಸಲ್ಲಿಸಬೇಕು.

ಔಷಧಗಳಿಗೆ ಸಾಮಾನ್ಯವಾಗಿ ಶೇ 10 ರಷ್ಟು ಮೂಲ ಕಸ್ಟಮ್ಸ್ ಸುಂಕವನ್ನು ವಿಧಿಸಲಾಗುತ್ತಿತ್ತು. ಕೆಲವು ವರ್ಗಗಳ ಜೀವರಕ್ಷಕ ಔಷಧಗಳು/ಲಸಿಕೆಗಳಿಗೆ ಶೇ 5 ರಷ್ಟು ಅಥವಾ ಶೂನ್ಯ ತೆರೆಗೆ ಇತ್ತು. ಬೆನ್ನುಮೂಳೆಯ ಸ್ನಾಯು ಕ್ಷೀಣತೆಯ ಚಿಕಿತ್ಸೆಗೆ ನಿರ್ದಿಷ್ಟಪಡಿಸಿದ ಔಷಧಿಗಳಿಗೆ ಈಗಾಗಲೇ ವಿನಾಯಿತಿಗಳನ್ನು ನೀಡಲಾಗಿದ್ದರೂ, ಇತರ ಅಪರೂಪದ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಸುವ ಔಷಧಿಗಳಿಗೆ ಕಸ್ಟಮ್ಸ್ ಸುಂಕದಲ್ಲಿ ವಿನಾಯಿತಿ ಕೋರಿ ಕೇಂದ್ರ ಸರ್ಕಾರಕ್ಕೆ ಹಲವು ಪತ್ರಗಳು ಬಂದಿದ್ದವು. ಇದನ್ನು ಪರಿಗಣಿಸಿ ನಿನ್ನೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಹಲವು ಔಷಧಿಗಳಿಗೆ ತೆರಿಗೆಯಿಂದ ವಿನಾಯಿತಿ ಸಿಕ್ಕಿದೆ.

10 ಕೆಜಿ ತೂಕದ ಮಗುವಿಗೆ ಕೆಲವು ಅಪರೂಪದ ಕಾಯಿಲೆಗಳ ಚಿಕಿತ್ಸೆಯ ವಾರ್ಷಿಕ ವೆಚ್ಚವು ವರ್ಷಕ್ಕೆ ₹ 10 ಲಕ್ಷ ರೂಪಾಯಿಯಿಂದ 1 ಕೋಟಿ ರೂಪಾಯಿಗೂ ಅಧಿಕವಾಗಬಹುದು. ಚಿಕಿತ್ಸೆಯು ಲೈಫ್ ಟೈಮ್ ಮತ್ತು ಔಷಧಗಳ ಪ್ರಮಾಣ ಹಾಗೂ ವೆಚ್ಚಗಳು ಮಗುವಿನ ವಯಸ್ಸು ಮತ್ತು ತೂಕದ ಆಧಾರದಲ್ಲಿ ಹೆಚ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ.

ಈ ವಿನಾಯಿತಿಯು ಗಣನೀಯ ವೆಚ್ಚದ ಉಳಿತಾಯಕ್ಕೆ ನೆರವಾಗಬಹುದು. ರೋಗಿಗಳಿಗೆ ಅಗತ್ಯವಾದ ಪರಿಹಾರವನ್ನು ನೀಡುತ್ತದೆ ಎಂದು ಕೇಂದ್ರ ಸರ್ಕಾರ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ಬೇರೆ ಏನು ಬದಲಾವಣೆಗಳು ಇವೆ?

  • ಫೆ.1 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ ಬಜೆಟ್ ನಲ್ಲಿ ಆದಾಯ ತರಿಗೆ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಈ ಬದಲಾವಣೆಗಳು ತೆರಿಗೆ ಪಾವತಿದಾರರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತವೆ.
  • ಡಿಫಾಲ್ಟ್‌ ತೆರಿಗೆ ಪದ್ಧತಿ: ಆದಾಯ ತೆರಿಗೆ ರಿಟರ್ನ್‌ ಸಲ್ಲಿಸುವಾಗ ಬಳಕೆದಾರರು ಹಳೆಯ ಅಥವಾ ಹೊಸತು ಈ ಎರಡು ಆಯ್ಕೆಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳದಿದ್ದರೆ ಅವರಿಗೆ ಡಿಫಾಲ್ಟ್‌ ಆಗಿ ಹೊಸ ತೆರಿಗೆ ಪದ್ಧತಿ ಅನ್ವಯಿಸಲಾಗುತ್ತದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ.
  • ಇಲ್ಲಿಯವರೆಗೆ ಐದು ಲಕ್ಷ ರೂ. ವರೆಗೆ ತೆರಿಗೆ ವಿನಾಯಿತಿ ಮಿತಿ ಇತ್ತು. ಈ ಮಿತಿ ಏಳು ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಇದರರ್ಥ ವರ್ಷಕ್ಕೆ 7 ಲಕ್ಷಕ್ಕಿಂತ ಕಡಿಮೆ ಸಂಬಳ ಹೊಂದಿರುವ ವ್ಯಕ್ತಿಯು ವಿನಾಯಿತಿಗಳನ್ನು ಪಡೆಯುವ ಸಲುವಾಗಿ ವಿವಿಧ ಹೂಡಿಕೆ ತೋರಿಸಬೇಕಾಗಿಲ್ಲ.
  • ಸ್ಟ್ಯಾಂಡರ್ಡ್ ಡಿಡಕ್ಷನ್: ಹಳೆಯ ತೆರಿಗೆ ಪದ್ಧತಿಯಲ್ಲಿ 50,000 ರೂ. ಕಡಿತದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇದನ್ನು ಹೊಸ ತೆರಿಗೆ ಪದ್ಧತಿಗೂ ವಿಸ್ತರಿಸಲಾಗಿದೆ. ಆದ್ದರಿಂದ, ವಾರ್ಷಿಕ ಆದಾಯ ರೂ 5.15 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ವೇತನದಾರರು 52,500 ರೂ.ನಷ್ಟು ಪ್ರಯೋಜನ ಪಡೆಯುತ್ತಾರೆ.

Related post

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…
ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷತುಂಬಾ ಚಿಂತೆ ಮಾನಸಿಕ ಶಾಂತಿಗೆ ಭಂಗ ತರಬಹುದು. ಆತಂಕ, ಉದ್ವೇಗದ ಪ್ರತೀ ತುಣುಕೂ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಇದನ್ನು ತಡೆಯಿರಿ. ಬಯಸದೆ ಇರುವ ಯಾವುದೇ ಅತಿಥಿ…
Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…

Leave a Reply

Your email address will not be published. Required fields are marked *