ಭಾರತೀಯ ರೈಲ್ವೆ ಪ್ರಪಂಚದಲ್ಲಿಯೇ ಅತಿ ದೊಡ್ಡ ಸಂಪರ್ಕ ಜಾಲ: ರೈಲಿನ ಕೊನೆಯ ಬೋಗಿಯಲ್ಲಿರುವ X ಚಿಹ್ನೆಯ ವಿಶೇಷತೆ ಗೊತ್ತಾ?

ಭಾರತೀಯ ರೈಲ್ವೆ ಪ್ರಪಂಚದಲ್ಲಿಯೇ ಅತಿ ದೊಡ್ಡ ಸಂಪರ್ಕ ಜಾಲ: ರೈಲಿನ ಕೊನೆಯ ಬೋಗಿಯಲ್ಲಿರುವ X ಚಿಹ್ನೆಯ ವಿಶೇಷತೆ ಗೊತ್ತಾ?

ನ್ಯೂಸ್‌ ಆ್ಯರೋ : ಪ್ರತಿ ದಿನ ಸುಮಾರು 1.40 ಕೋಟಿ ಪ್ರಯಾಣಿಕರನ್ನೂ, ಒಂದು ಕೋಟಿ ಟನ್‌ಗೂ ಹೆಚ್ಚು ಸರಕನ್ನೂ ಸಾಗಾಟ ಮಾಡುವ ಭಾರತೀಯ ರೈಲ್ವೆಯು ಪ್ರಪಂಚದಲ್ಲಿಯೇ ಅತಿ ದೊಡ್ಡ ಹಾಗೂ ಅತಿ ಚಟುವಟಿಕೆಯ ರೈಲು ಜಾಲಗಳಲ್ಲಿ ಒಂದಾಗಿದೆ.

ಭಾರತೀಯ ರೈಲ್ವೆಯಲ್ಲಿ ಮಹತ್ತರ ಬದಲಾವಣೆಗಳಾಗಿದೆ. ವಂದೇ ಭಾರತ್ ಅತೀ ವೇಗದ ರೈಲು, ವಿದ್ಯುದ್ದೀಕರಣ, ಐಷಾರಾಮಿ ರೈಲು, ಡಿಜಿಟಲೀಕರಣ ಸೇರಿದಂತೆ ಹಲವು ಬದಲಾವಣೆಯಾಗಿದೆ. ಭಾರತೀಯ ರೈಲ್ವೆಯಲ್ಲಿನ ಕೆಲ ವಿಚಾರಗಳು ಅಷ್ಟೇ ಕುತೂಹಲಕರ.

ಪ್ರತಿಯೊಂದು ರೈಲಿನ ಕೊನೆಯ ಬೋಗಿಯ ಹಿಂಭಾಗದಲ್ಲಿ X ಚಿಹ್ನೆ ಹಾಕಲಾಗಿದೆ. ಅದರ ಅರ್ಥವೇನು? ಈ ಕುರಿತ ರಹಸ್ಯವನ್ನು ಸ್ವತಃ ಭಾರತೀಯ ರೈಲ್ವೆ ಸಚಿವಾಲಯ ಬಯಲು ಮಾಡಿದೆ. ರೈಲು ಯಾವುದೇ ಬೋಗಿಗಳನ್ನು ಬಿಡದೆ ಸಾಗಿದೆ ಎಂದರ್ಥ. ರೈಲು ಯಾವುದೇ ಬೋಗಿಗಳನ್ನು ಬೇರ್ಪಡಿಸದೆ ರೈಲು ಸಂಪೂರ್ಣವಾಗಿ ಹಾದು ಹೋಗಿದೆ ಎಂದು ದೃಢೀಕರಣಕ್ಕಾಗಿ ಈ ಚಿಹ್ನೆ ಹಾಕಲಾಗಿದೆ ಎಂದು ರೈಲ್ವೇ ಸಚಿವಾಲಯ ರಹಸ್ಯ ಬಿಚ್ಚಿಟ್ಟಿದೆ.

ರೈಲು ನಿಲ್ದಾಣದಲ್ಲಿ ರೈಲು ಕ್ರಾಸಿಂಗ್‌ನಲ್ಲಿ, ರೈಲು ಕಂಟ್ರೋಲ್ ರೂಂಗಳಲ್ಲಿ ರೈಲನ್ನು ಗಮನಿಸುತ್ತಿರುವ ಅಧಿಕಾರಿಗಳು, ರೈಲು ಯಾವುದೇ ಕೋಚ್ ಬಿಡದೆ ಸಾಗಿದೆ ಅನ್ನೋದು ಖಾತ್ರಿಪಡಿಸಲು X ಚಿಹ್ನೆ ಹಾಕಲಾಗಿದೆ. X ಬೋಗಿ ನೋಡಿದರೆ ಇದು ರೈಲಿನ ಕೊನೆಯ ಬೋಗಿ ಅನ್ನೋದು ಖಚಿತವಾಗಲಿದೆ. ಯಾವುದೇ ಸಂದರ್ಭದಲ್ಲಿ ಯಾವುದೇ ಬೋಗಿ ಬೇರ್ಪಟ್ಟರೆ ಇದರಿಂದ ತಿಳಿಯಲಿದೆ. ಹೀಗಾಗಿ ತುರ್ತು ಕ್ರಮ ಕೈಗೊಳ್ಳಲು ನೆರವಾಗಲಿದೆ.

ಈ ಕುರಿತು ಕೇಂದ್ರ ರೈಲ್ವೇ ಸಚಿವಾಲಯ ಟ್ವಿಟರ್ ಮೂಲಕ ಮಾಹಿತಿ ನೀಡಿದೆ. X ಚಿಹ್ನೆ ನೋಡಿದರೆ ರೈಲು ಅಧಿಕಾರಿಗಳಿಗೆ ರೈಲು ಯಾವುದೇ ಬೋಗಿಗಳನ್ನು ಬೇರ್ಪಡಿಸದೆ, ಸಂಪೂರ್ಣವಾಗಿ ಸಾಗಿದೆ ಎನ್ನುವುದು ಖಾತ್ರಿಯಾಗಲಿದೆ. ಯಾವುದೇ ಬೋಗಿಗಳು ರೈಲಿನಿಂದ ಬೇರ್ಪಟ್ಟಿಲ್ಲ, ರೈಲಿನ ಎಲ್ಲಾ ಬೋಗಿಗಳು ಜೊತೆಯಲ್ಲೇ ಸಾಗಿರುವುದು ಖಚಿತವಾಗಲಿದೆ ಎಂದಿದೆ.

ಸಚಿವಾಲಯ ಮಾಹಿತಿ ಹಂಚಿಕೊಂಡ ಬೆನ್ನಲ್ಲೇ 2 ಲಕ್ಷಕ್ಕೂ ಅಧಿಕ ಮಂದಿ ಈ ಮಾಹಿತಿಯನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಅಷ್ಟೇ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಈ ಮಾಹಿತಿಗಾಗಿ ಧನ್ಯವಾದ. ಪ್ರತಿ ದಿನ ರೈಲಿನಲ್ಲಿ ಪ್ರಯಾಣಿಸುತ್ತಿದ್ದೇನೆ. ಯಾಕೆ ಅನ್ನೋ ಪ್ರಶ್ನೆ ಹಲವು ಬಾರಿ ಮೂಡಿತ್ತು. ಇದೀಗ ಪರಿಹಾರವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *