ಇನ್ಮುಂದೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಬರಲಿದೆ ಕ್ರಿಪ್ಟೋ ವ್ಯವಹಾರಗಳು – ಕೇಂದ್ರ ಸರ್ಕಾರದಿಂದ ಅಧಿಸೂಚನೆ

ಇನ್ಮುಂದೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಬರಲಿದೆ ಕ್ರಿಪ್ಟೋ ವ್ಯವಹಾರಗಳು – ಕೇಂದ್ರ ಸರ್ಕಾರದಿಂದ ಅಧಿಸೂಚನೆ

ನ್ಯೂಸ್‌ ಆ್ಯರೋ : ಡಿಜಿಟಲ್ ಆಸ್ತಿಗಳ ಮೇಲ್ವಿಚಾರಣೆಯನ್ನು ಬಿಗಿಗೊಳಿಸುವ ನಿಟ್ಟಿನಿಂದ ಕ್ರಿಪ್ಟೋಕರೆನ್ಸಿ ವಹಿವಾಟುಗಳು ಮತ್ತು ವರ್ಚುವಲ್‌ ಸ್ವತ್ತುಗಳ ವಹಿವಾಟು ಇನ್ಮುಂದೆ ಅಕ್ರಮ ಹಣ ವರ್ಗಾವಣೆ ಕಾಯ್ದೆಯ ನಿಬಂಧನೆಗಳ ವ್ಯಾಪ್ತಿಯಲ್ಲಿ ಬರಲಿದೆ ಎಂದು ಹಣಕಾಸು ಸಚಿವಾಲಯ ಅಧಿಸೂಚನೆ ಹೊರಡಿಸಿದೆ.

ವರ್ಚುವಲ್ ಡಿಜಿಟಲ್ ಸ್ವತ್ತುಗಳನ್ನು ಒಳಗೊಂಡ ವಹಿವಾಟುಗಳಲ್ಲಿ ಭಾಗವಹಿಸುವಿಕೆಯು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಬರುತ್ತದೆ. ಈ ಕ್ರಮವು ಡಿಜಿಟಲ್ ಆಸ್ತಿಗಳ ಮೇಲ್ವಿಚಾರಣೆಯನ್ನು ಬಿಗಿಗೊಳಿಸಲು ಕೈಗೊಂಡ ಪ್ರಮುಖ ಹೆಜ್ಜೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.

ಅಧಿಸೂಚನೆಯಲ್ಲಿ ಏನಿದೆ?

“ವಿತರಕರ ಕೊಡುಗೆ ಮತ್ತು ವರ್ಚುವಲ್ ಡಿಜಿಟಲ್ ಆಸ್ತಿಯ ಮಾರಾಟಕ್ಕೆ ಸಂಬಂಧಿಸಿದ ಹಣಕಾಸು ಸೇವೆಗಳಲ್ಲಿ ಭಾಗವಹಿಸುವಿಕೆ ಮತ್ತು ಒದಗಿಸುವಿಕೆ” ವಿರುದ್ಧ ಸಚಿವಾಲಯವು ಹೂಡಿಕೆದಾರರಿಗೆ ಎಚ್ಚರಿಕೆ ನೀಡಿದೆ.

ವರ್ಚುವಲ್ ಡಿಜಿಟಲ್ ಸ್ವತ್ತುಗಳ ವಿನಿಮಯ ಮತ್ತು ವರ್ಗಾವಣೆ ಕೂಡ, ಅಕ್ರಮ ಹಣ ವರ್ಗಾಚಣೆ ತಡೆ ಕಾಯ್ದೆಯ ಅಡಿಯಲ್ಲಿ ಬರುತ್ತದೆ ಎಂದು ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಆದಾಯ ತೆರಿಗೆ ಕಾಯ್ದೆಯ ಪ್ರಕಾರ, ವರ್ಚುವಲ್ ಡಿಜಿಟಲ್ ಆಸ್ತಿಯು ಯಾವುದೇ ಮಾಹಿತಿ, ಕೋಡ್, ಸಂಖ್ಯೆ ಅಥವಾ ಟೋಕನ್ ಅನ್ನು ಸೂಚಿಸುತ್ತದೆ (ಭಾರತೀಯ ಕರೆನ್ಸಿ ಅಥವಾ ವಿದೇಶಿ ಕರೆನ್ಸಿ ಅಲ್ಲ). ಕ್ರಿಪ್ಟೋಗ್ರಾಫಿಕ್ ವಿಧಾನಗಳ ಮೂಲಕ ಅಥವಾ ಬೇರೆ ರೀತಿಯಲ್ಲಿ ಈ ಆಸ್ತಿಯನ್ನು ರಚಿಸಲಾಗಿದೆ. ಹೀಗಾಗಿ ಇದನ್ನು ಯಾವುದೇ ಹೆಸರಿನಿಂದ ಕರೆಯಬಹುದಾಗಿದೆ.

ಮನಿ ಲಾಂಡರಿಂಗ್ ಮತ್ತು ಫಾರೆಕ್ಸ್ ಉಲ್ಲಂಘನೆ ಪ್ರಕರಣಗಳನ್ನು ತನಿಖೆ ಮಾಡುವ ಆದೇಶವನ್ನು ಹೊಂದಿರುವ ಜಾರಿ ನಿರ್ದೇಶನಾಲಯವು, ಈಗಾಗಲೇ ವಿನಿಮಯ ಕೇಂದ್ರಗಳಾದ CoinSwitch Kuber ಮತ್ತು WazirX ಸೇರಿದಂತೆ ಕ್ರಿಪ್ಟೋ ಕಂಪನಿಗಳನ್ನು ತನಿಖೆ ಮಾಡುವಂತೆ ತಿಳಿಸಿತ್ತು.

ಕಾನೂನು ಸಂಸ್ಥೆಯ ಟ್ರಿಲೀಗಲ್‌ನ ಸಲಹೆಗಾರ ಜೈದೀಪ್ ರೆಡ್ಡಿ ಮಾತನಾಡಿ, “ಬ್ಯಾಂಕ್‌ಗಳು ಅಥವಾ ಸ್ಟಾಕ್ ಬ್ರೋಕರ್‌ಗಳಂತಹ ಇತರ ನಿಯಂತ್ರಿತ ಘಟಕಗಳು ಅನುಸರಿಸುತ್ತಿರುವಂತೆಯೇ, ಮನಿ ಲಾಂಡರಿಂಗ್ ವಿರೋಧಿ ಮಾನದಂಡಗಳನ್ನು ಅನುಸರಿಸಲು ಡಿಜಿಟಲ್-ಸ್ವತ್ತು ಪ್ಲಾಟ್‌ಫಾರ್ಮ್‌ಗಳ ಅಗತ್ಯವಿರುವ ಜಾಗತಿಕ ಪ್ರವೃತ್ತಿಯೊಂದಿಗೆ ಭಾರತದ ಇತ್ತೀಚಿನ ಕ್ರಮವು ಹೊಂದಾಣಿಕೆಯಾಗುತ್ತದೆ’ ಎಂದರು.

Related post

ಗ್ಯಾಂಗ್‌ಸ್ಟಾರ್‌ ಲಾರೆನ್ಸ್ ಬಿಷ್ಣೋಯಿಯಿಂದ ನಟ ಸಲ್ಮಾನ್‌ಗೆ ಜೀವಬೆದರಿಕೆ – ನಟನ ಮನೆ ಸುತ್ತ ಭದ್ರತೆ ಹೆಚ್ಚಿಸಿದ ಮುಂಬೈ ಪೊಲೀಸರು

ಗ್ಯಾಂಗ್‌ಸ್ಟಾರ್‌ ಲಾರೆನ್ಸ್ ಬಿಷ್ಣೋಯಿಯಿಂದ ನಟ ಸಲ್ಮಾನ್‌ಗೆ ಜೀವಬೆದರಿಕೆ – ನಟನ ಮನೆ…

ನ್ಯೂಸ್‌ ಆ್ಯರೋ : ಬಾಲಿವುಡ್‌ ನಟ ಸಲ್ಮಾನ್ ಖಾನ್‌ಗೆ ಇದೀಗ ಜೀವ ಬೆದರಿಕೆಯೊಡ್ಡಿ ಇ ಮೇಲ್‌ ಬಂದ ಹಿನ್ನೆಲೆಯಲ್ಲಿ ಮನೆಯ ಸುತ್ತಲೂ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ಕಳೆದ ವರ್ಷ…
ಸಾಧಕರೆಲ್ಲ ಓದಿದ್ದು ಸರ್ಕಾರಿ ಶಾಲೆಯಲ್ಲಿ ಎಂದ ರಿಷಬ್ – ಸರ್ಕಾರಿ ಶಾಲೆ ಉದ್ಘಾಟಿಸಿ ಪೋಷಕರಿಗೆ ಕಿವಿಮಾತು ಹೇಳಿದ್ದೇನು?

ಸಾಧಕರೆಲ್ಲ ಓದಿದ್ದು ಸರ್ಕಾರಿ ಶಾಲೆಯಲ್ಲಿ ಎಂದ ರಿಷಬ್ – ಸರ್ಕಾರಿ ಶಾಲೆ…

ನ್ಯೂಸ್‌ ಆ್ಯರೋ : ಸರ್ಕಾರಿ ಶಾಲೆ ಉಳಿವಿಗಾಗಿ ಮಕ್ಕಳು, ಗ್ರಾಮಸ್ಥರು ಹೋರಾಡುವ ಕಥೆಯನ್ನು ಸಿನಿಮಾ ಮಾಡಿ ಎಲ್ಲರ ಮನಸ್ಸನ್ನು ಗೆದ್ದಿದ್ದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ನಾನು…
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೌಂಟ್‌ಡೌನ್‌ – ಇದೇ ತಿಂಗಳು ದಿನಾಂಕ ಘೋಷಣೆ ಸಾಧ್ಯತೆ, ಪಕ್ಷಗಳಲ್ಲಿ ಚಟುವಟಿಕೆ ಬಿರುಸು

ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೌಂಟ್‌ಡೌನ್‌ – ಇದೇ ತಿಂಗಳು ದಿನಾಂಕ ಘೋಷಣೆ…

ನ್ಯೂಸ್‌ ಆ್ಯರೋ : ಕರ್ನಾಟಕ ವಿಧಾನಸಭೆಯ ಚುನಾವಣೆಗೆ ಸಿದ್ಧತೆ ನಡೆಸಿರುವ ಕೇಂದ್ರ ಚುನಾವಣಾ ಆಯೋಗವು ಇದೇ ತಿಂಗಳ ಕೊನೆಯ ವಾರದಲ್ಲಿ ದಿನಾಂಕ ಘೋಷಣೆ ಮಾಡುವ ನಿರೀಕ್ಷೆ ಇದೆ. ಮೇ…

Leave a Reply

Your email address will not be published. Required fields are marked *