ಕ್ರಾಂತಿ ಸಿನಿಮಾಕ್ಕೆ ಡಿಬಾಸ್‌ ಪಡೆದ ಸಂಭಾವಣೆ ಎಷ್ಟು ಗೊತ್ತಾ? – ರವಿಚಂದ್ರನ್‌, ಸುಮಲತಾ ಅಂಬರೀಶ್‌ ಗೆ ಸಿಕ್ಕಿದ್ದೆಷ್ಟು? ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಬಾಚಿದ್ದೆಷ್ಟು?

ಕ್ರಾಂತಿ ಸಿನಿಮಾಕ್ಕೆ ಡಿಬಾಸ್‌ ಪಡೆದ ಸಂಭಾವಣೆ ಎಷ್ಟು ಗೊತ್ತಾ? – ರವಿಚಂದ್ರನ್‌, ಸುಮಲತಾ ಅಂಬರೀಶ್‌ ಗೆ ಸಿಕ್ಕಿದ್ದೆಷ್ಟು? ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಬಾಚಿದ್ದೆಷ್ಟು?

ನ್ಯೂಸ್‌ ಆ್ಯರೋ : ಡಿಬಾಸ್‌ ಅಭಿನಯದ ಕ್ರಾಂತಿ ಸಿನಿಮಾ ಸೂಪರ್‌ಹಿಟ್‌ ಸಿನಿಮಾಗಳ ಸಾಲಿಗೆ ಸೇರಿದೆ. ದರ್ಶನ್ ಅವರು ಈ ಸಿನಿಮಾದ ಪ್ರಮೋಷನ್‌ಗಾಗಿ ವಿಶೇಷ ಮುತುವರ್ಜಿ ವಹಿಸಿ ಪ್ರಚಾರ ಮಾಡಿ, ಸಿನಿಮಾವನ್ನು ಗೆಲ್ಲಿಸಿಕೊಟ್ಟಿದ್ದಾರೆ.

ಡಿ ಬಾಸ್‌ ಅವರ ಚಿತ್ರ ಬಹುದಿನಗಳ ನಂತರ ದೊಡ್ಡ ಪರದೆ ಮೇಲೆ ಬಂದಿದ್ದರಿಂದ ಅಭಿಮಾನಿಗಳು ಚಿತ್ರವನ್ನು ಮೊದಲ ಪ್ರದರ್ಶನದಲ್ಲಿ ಮುಗಿಬಿದ್ದು ನೋಡಿದ್ದಾರೆ. ಚಿತ್ರವು ಸೂಪರ್‌ ಹಿಟ್‌ ಸಾಲಿಗೆ ಸೇರಿದ್ದು, ನಿರ್ಮಾಪಕರು ಹಾಕಿದ ಬಂಡವಾಳ ಲಾಭದೊಂದಿಗೆ ವಾಪಸ್‌ ಬಂದಿದೆ ಎನ್ನುತ್ತವೆ ಮೂಲಗಳು.

ಸ್ಯಾಂಡಲ್‌ವುಡ್‌ನ ಜನಪ್ರಿಯ ನಟರಾದ ದರ್ಶನ್ ಮತ್ತು ರವಿಚಂದ್ರನ್ ಅವರು ‘ಕ್ರಾಂತಿ’ ಚಿತ್ರದಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಕುರುಕ್ಷೇತ್ರ ಸಿನಿಮಾದಲ್ಲಿ ಡಿ ಬಾಸ್‌ ಜತೆ ಕಾಣಿಸಿಕೊಂಡಿದ್ದ ರವಿಚಂದ್ರನ್ ಅವರು ಕ್ರಾಂತಿಯಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. ಕ್ರೇಜಿಸ್ಟಾರ್‌ ಅವರು ಈ ಸಿನಿಮಾಕ್ಕಾಗಿ ₹ 90 ಲಕ್ಷದಿಂದ ₹1 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ಚಿತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿಯಾಗಿ ನಟಿಸಿದ್ದು, ಅವರ ಪಾತ್ರಕ್ಕಾಗಿ ಅವರು ಸುಮಾರು ₹ 60 ರಿಂದ ₹ 70 ಲಕ್ಷ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಕನ್ನಡ ಚಿತ್ರರಂಗದ ಹಿರಿಯ ನಟಿ, ಮಂಡ್ಯ ಸಂಸದೆ ಹಾಗೂ ಸುಮಲತಾ ಅಂಬರೀಶ್ ಕೂಡ ಕ್ರಾಂತಿ ಚಿತ್ರದಲ್ಲಿ ದರ್ಶನ್ ಜೊತೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ₹ 30 ರಿಂದ ₹ 40 ಲಕ್ಷ ಸಂಭಾವಣೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದ ನಾಯಕನಾಗಿದ್ದು, ಅವರು ಚಿತ್ರದ ಪ್ರಚಾರಕ್ಕಾಗಿ ಸಾಕಷ್ಟು ಸಮಯ ನೀಡಿದ್ದಾರೆ. ಆದರೆ, ಅಂದಹಾಗೆ ಈ ಸಿನಿಮಾಗೆ ದರ್ಶನ್ ಬರೋಬ್ಬರಿ 15 ಕೋಟಿ ಎಂದು ಸಂಭಾವನೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಷ್ಟೆ ಅಲ್ಲ, ನಿರ್ಮಾಪಕರ ಲಾಭದಲ್ಲಿ ನಟ ಕೂಡ ಪಾಲನ್ನು ಪಡೆಯಲಿದ್ದಾರಂತೆ ಎಂಬ ಮಾಹಿತಿ ಇದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *