ಮಾರ್ಚ್ ಬಳಿಕ ಮೊಬೈಲ್ ಮುಟ್ಟಲ್ಲ ಎಂದಿದ್ದ ರಿಷಬ್ ಶೆಟ್ಟಿ ಮಾತು ತಪ್ಪಿದ್ರಾ..!? – ಮಗಳ ಹುಟ್ಟುಹಬ್ಬಕ್ಕೆ ಬಂದ ಗಣ್ಯರಿಗೆ ಆಹ್ವಾನ ನೀಡಿದ್ದು ಹೇಗೆ?

ಮಾರ್ಚ್ ಬಳಿಕ ಮೊಬೈಲ್ ಮುಟ್ಟಲ್ಲ ಎಂದಿದ್ದ ರಿಷಬ್ ಶೆಟ್ಟಿ ಮಾತು ತಪ್ಪಿದ್ರಾ..!? – ಮಗಳ ಹುಟ್ಟುಹಬ್ಬಕ್ಕೆ ಬಂದ ಗಣ್ಯರಿಗೆ ಆಹ್ವಾನ ನೀಡಿದ್ದು ಹೇಗೆ?

ನ್ಯೂಸ್‌ ಆ್ಯರೋ : ನಟ, ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಪ್ರಗತಿ ದಂಪತಿಯು ತಮ್ಮ ಪುತ್ರಿ ರಾಧ್ಯಾ ಬರ್ತ್‌ಡೇ ಇತ್ತೀಚೆಗೆ ಆಚರಿಸಿಕೊಂಡಿದ್ದಾರೆ. ಈ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್‌ನ ಬಹುತೇಕ ಸ್ಟಾರ್‌ಗಳು ಭಾಗವಹಿಸಿದ್ದರು.

ಕಾಂತಾರ ಸಿನಿಮಾ ಸೂಪರ್‌ ಹಿಟ್‌ ಆದ ಬಳಿಕ ರಿಷಬ್‌ ಶೆಟ್ಟಿ ಅವರ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಾಗಿದೆ. ಅವರು ತಮ್ಮ ಮುದ್ದಿನ ಮಗಳಾದ ರಾಧ್ಯಾ ರವರ ಮೊದಲನೇ ವರ್ಷದ ಹುಟ್ಟುಹಬ್ಬವನ್ನು ತುಂಬಾ ಗ್ರ್ಯಾಂಡ್ ಆಗಿ ಆಚರಿಸಿದ್ದಾರೆ.

ಬರ್ತ್‌ಡೇ ಸಂಭ್ರಮದಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರನ್‌, ಪುತ್ರರಾದ ಮನೋರಂಜನ್, ವಿಕ್ರಮ್‌ ರವಿಚಂದ್ರನ್‌, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ನಟ ಅನಿರುದ್ಧ್ ದಂಪತಿ, ಮೋಹಕತಾರೆ ರಮ್ಯಾ, ಅಭಿಷೇಕ್ ಅಂಬರೀಶ್ ಪ್ರಮೋದ್‌ ಶೆಟ್ಟಿ, ಪ್ರಮಿಳಾ ಜೋಷಾಯ್‌, ಸುಂದರ್‌ ರಾಜ್‌, ಝೈದ್‌ ಖಾನ್‌ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಹಾರೈಸಿದರು.

ಸಿನಿಮಾ ತಾರೆಯರು ಮಾತ್ರವಲ್ಲದೇ ರಾಜಕೀಯ ವ್ಯಕ್ತಿಗಳು ಸಂಭ್ರಮದಲ್ಲಿ ಭಾಗಿಯಾಗಿದ್ದರು. ಮೈಸೂರು ಸಂಸದ ಪ್ರತಾಪ್ ಸಿಂಹ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪಾಲ್ಗೊಂಡಿದ್ದರು.

ಅಭಿಷೇಕ್‌ ಜೊತೆ ಪಾರ್ಟಿಗೆ ಬಂದ ದರ್ಶನ್‌, ಸ್ಟೇಜ್‌ ಬಳಿ ತೆರಳಿ ರಾಧ್ಯಾ ಕೆನ್ನೆ ಗಿಲ್ಲಿ ಗಿಫ್ಟ್‌ ನೀಡುತ್ತಾರೆ. ನಂತರ ರಿಷಬ್‌ ಶೆಟ್ಟಿ, ಪ್ರಗತಿ ದಂಪತಿಯನ್ನು ಮಾತನಾಡಿಸಿ ರಣ್ವಿತ್‌ನನ್ನು ಎತ್ತಿಕೊಂಡು ಆ ಮಗುವಿಗೊಂದು ಮುತ್ತು ಕೊಟ್ಟು ನಂತರ ರವಿಚಂದ್ರನ್‌ ಜೊತೆ ಬಂದು ಕೂರುತ್ತಾರೆ. ಈ ವಿಡಿಯೋ ಅಭಿಮಾನಿಗಳಿಗೆ ಬಹಳ ಇಷ್ಟವಾಗಿದೆ. ಮುಗ್ದ ಮನಸ್ಸಿನ ಒಡೆಯನನ್ನು ಮುದ್ದಾದ ಮಕ್ಕಳೊಡನೆ ನೋಡಿ ತುಂಬಾ ಖುಷಿಯಾಯ್ತು ಎಂದು ದರ್ಶನ್‌ ಫ್ಯಾನ್ಸ್‌ ಕಮೆಂಟ್‌ ಮಾಡುತ್ತಿದ್ದಾರೆ.

ರಿಷಬ್‌ ದಂಪತಿಯು ರಾಧ್ಯಾ ಜನ್ಮ ದಿನಕ್ಕೆಂದೇ ಒಂದು ವಿಶೇಷ ವಿಡಿಯೋ ಮಾಡಿಸಿದ್ದರು. ಅದನ್ನು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ವಿಶೇಷ ವಿಡಿಯೋದಲ್ಲಿ ಪುಟಾಣಿ ರಾಧ್ಯಾ ತುಂಬಾ ಮುದ್ದಾಗಿ ಕಾಣ್ತಾ ಇದ್ದಾಳೆ. ಸದಾ ಸಿನಿಮಾ ಜಂಜಾಟದಲ್ಲಿ ಇರುತ್ತಿದ್ದ ರಿಷಬ್ ಶೆಟ್ಟಿ ಅವರು ಬಹಳ ದಿನಗಳ ನಂತರದಲ್ಲಿ ಸ್ಯಾಂಡಲ್‍ವುಡ್ ಕಲಾವಿದರ ಜೊತೆಗೆ ಸುಂದರ ಕ್ಷಣಗಳನ್ನು ಕಳೆದಿದ್ದಾರೆ.

ಮೊಬೈಲ್ ಮುಟ್ಟಲ್ಲ‌ ಎಂದಿದ್ದ ರಿಷಬ್ ಶೆಟ್ಟಿ…!!

ಮಾರ್ಚ್ ಬಳಿಕ ಮೊಬೈಲ್ ಮುಟ್ಟಲ್ಲ‌ ಎಂದಿದ್ದ ರಿಷಬ್ ಶೆಟ್ಟಿ ಕಾಂತಾರ 2 ಸಿನಿಮಾದ ಕಥೆ ರಚನೆಯಲ್ಲಿ ಬ್ಯುಸಿಯಾಗಿದ್ರು.‌ ಆದರೆ ಅವರ ಮಗಳ ಹುಟ್ಟುಹಬ್ಬದಂದು ಹಲವು ಗಣ್ಯರು ಆಗಮಿಸಿದ್ದು, ರಿಷಬ್ ಅವರನ್ನು ಕರೆದಿದ್ದು ಹೇಗೆ? ಮೊಬೈಲ್ ಬಳಸಿರಬೇಕಲ್ಲ‌ ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *