ದೇವರು-ದೇವರೇ, ಕಲಾವಿದರು-ಕಲಾವಿದರೇ: ಅಪ್ಪು ದೇವರ ಮಾಲೆಗೆ ನಟ ಪ್ರಥಮ್ ಪ್ರತಿಕ್ರಿಯೆ

ದೇವರು-ದೇವರೇ, ಕಲಾವಿದರು-ಕಲಾವಿದರೇ: ಅಪ್ಪು ದೇವರ ಮಾಲೆಗೆ ನಟ ಪ್ರಥಮ್ ಪ್ರತಿಕ್ರಿಯೆ

ನ್ಯೂಸ್‌ಆ್ಯರೋ : ಅಪ್ಪು ದೇವರ ಮಾಲೆ ಧರಿಸಿ ವ್ರತ ಆಚರಿಸುವ ವಿಧಾನದ ಬಗ್ಗೆ ಬಿಗ್‌ಬಾಸ್‌ ವಿನ್ನರ್, ನಟ ಪ್ರಥಮ್ ಅವರು ಪ್ರತಿಕ್ರಿಯಿಸಿ, ಕಲಾವಿದರನ್ನ ಕಲಾವಿದರಾಗಿರೋಕೆ ಬಿಡಿ! ಧಾರ್ಮಿಕ ನಂಬಿಕೆಗಳಲ್ಲಿ ಯಾರೂ ಅತೀರೇಕದ ವರ್ತನೆ ತೋರಬಾರದು! ದೇವರು-ದೇವರೇ. ಕಲಾವಿದರು-ಕಲಾವಿದರೇ! ಎಂದು ಟ್ವೀಟ್ ಮಾಡಿದ್ದಾರೆ.

ಈಚೆಗೆ ಪುನೀತ್ ರಾಜ್​ಕುಮಾರ್ ಅವರ ಕುರಿತಾದ ದೇವರ ಮಾಲೆ ವ್ರತ ಆಚರಿಸುವ ನೋಟಿಸ್ ವೈರಲ್ ಆಗಿತ್ತು. ಇದರಲ್ಲಿ ಪುನೀತ್ ರಾಜ್​ಕುಮಾರ್ ಅವರ ಫೋಟೋ ಕೂಡಾ ಲಗತ್ತಿಸಲಾಗಿತ್ತು. ಮಾರ್ಚ್​ 1ರಿಂದ ಅಭಿಮಾನಿಗಳು ಮಾಲೆ ಹಾಕಬಹುದು. ಮಾರ್ಚ್​ 17ರ ತನಕ ವ್ರತ ಆಚರಿಸಬೇಕು. ಈ ರೀತಿ ತಮ್ಮದೇ ರೂಲ್ಸ್ ಮಾಡಿದ್ದರು.

ಆದರೆ ಈ ನೋಟಿಸ್ ವೈರಲ್ ಆಗುತ್ತಿದ್ದಂತೆ ಹಾಗೆ ಟ್ರೋಲ್ ಕೂಡಾ ಆಗಿದೆ. ಅಪ್ಪು ಅವರ ಫ್ಯಾನ್ಸ್ ಮಾಡಿದ ನೋಟಿಸ್ ಟೀಕೆಗಳನ್ನು ಎದುರಿಸುತ್ತಿದೆ.

ಈ ನೋಟಿಸು ಸಂಬಂಧ ಟ್ವೀಟ್ ಮಾಡಿದ ಪ್ರಥಮ್, ‘ದೇವರ ಮೇಲೆ ಭಕ್ತಿ ಇರಲಿ!ಕಲಾವಿದರ ಮೇಲೆ ಪ್ರೀತಿ,ಅಭಿಮಾನವಿರಲಿ! ಶಬರಿಮಲೆಗೆ ಹೋಗೋದು ಅಯ್ಯಪ್ಪನಲ್ಲಿ ಶರಣಾಗೋಕೆ. ಬಹಳ ಶಿಸ್ತುಗಳನ್ನ ಪಾಲಿಸಿ ಶ್ರದ್ಧಾಭಕ್ತಿಗಳಿಂದ ಮಾಲೆ ಧಾರಣೆ ಮಾಡಬೇಕು.ಕಲಾವಿದರನ್ನ ಕಲಾವಿದರಾಗಿರೋಕೆ ಬಿಡಿ! ಧಾರ್ಮಿಕ ನಂಬಿಕೆಗಳಲ್ಲಿ ಯಾರೂ ಅತೀರೇಕದ ವರ್ತನೆ ತೋರಬಾರದು! ದೇವರು-ದೇವರೇ. ಕಲಾವಿದರು-ಕಲಾವಿದರೇ!’ ಎಂದು ಟ್ವೀಟ್ ಮಾಡಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *