
ಗಗನಕ್ಕೇರುತ್ತಿರುವ ಇಂಧನ ಬೆಲೆ, ಎಲೆಕ್ಟ್ರಿಕ್ ವಾಹನಕ್ಕೆ ಹೆಚ್ಚಿದ ಬೆಲೆ: ಬೆಂಗಳೂರು ಮೂಲದ River Indie ಸ್ಕೂಟರ್ ಮಾರುಕಟ್ಟೆಗೆ ಲಗ್ಗೆ
- ಆಟೋ ನ್ಯೂಸ್
- February 24, 2023
- No Comment
- 70
ನ್ಯೂಸ್‌ಆ್ಯರೋ : ದೇಶದಲ್ಲಿಇಂಧನ ಬೆಲೆಗಳು ಗಗನಕ್ಕೇರುತ್ತಿದ್ದ ಹಾಗೇ ವಾಹನ ಸವಾರರು ಎಲೆಕ್ಟ್ರಿಕ್ ವಾಹನದತ್ತ ಮುಖಮಾಡಿದ್ದಾರೆ. ಪರಿಸರ ಸ್ನೇಹಿಯೂ ಆಗಿರುವ ಕಾರಣ ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನ ಭಾರೀ ಬೇಡಿಕೆಯನ್ನು ಪಡೆದುಕೊಂಡಿದೆ. ಇದೀಗ ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಕಂಪನಿಯಾದ River Indie ಎಂಬ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದೆ.

ಈ ಹೊಸ River Indie ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯು ₹1.25 ಲಕ್ಷವಾಗಿದೆ. ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಹೆಚ್ಚಿನ ಸ್ಟೋರೇಜ್ ಸ್ಪೇಸ್, ಪ್ಯಾನಿಯರ್ ಮೌಂಟ್‌ಗಳು, ಮುಂಭಾಗದ ಫುಟ್‌ಪೆಗ್‌ಗಳು ಮತ್ತು ಕ್ರ್ಯಾಶ್ ಗಾರ್ಡ್‌ಗಳಂತಹ ವೈಶಿಷ್ಟ್ಯಗಳನ್ನೊಳಗೊಂಡಿದೆ. ಮಾನ್ಸೂನ್ ಬ್ಲೂ, ಸಮ್ಮರ್ ರೆಡ್ ಮತ್ತು ಸ್ಪ್ರಿಂಗ್ ಯೆಲ್ಲೋ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.
4kWh ಬ್ಯಾಟರಿ ಪ್ಯಾಕ್ 120 ಕಿ.ಮೀ ರೇಂಜ್‌ನಲ್ಲಿ ಓಡುತ್ತದೆ:
ಬಹುನಿರೀಕ್ಷಿತ River Indie ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ IP67-ರೇಟೆಡ್ 4kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಅದು 120 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಸ್ಟ್ಯಾಂಡರ್ಡ್ ಚಾರ್ಜರ್ ಅನ್ನು ಬಳಸಿಕೊಂಡು 5 ಗಂಟೆಗಳಲ್ಲಿ ಬ್ಯಾಟರಿಯನ್ನು 80 ಪ್ರತಿಶತದಷ್ಟು ಚಾರ್ಜ್ ಮಾಡಬಹುದು. ಸ್ಕೂಟರ್ ಮಧ್ಯದಲ್ಲಿ ಅಳವಡಿಸಲಾಗಿರುವ ಸಿಂಗಲ್ ಮೋಟಾರ್ 8.98 ಬಿಹೆಚ್‍ಪಿ ಪವರ್ ಮತ್ತು 26 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ River Indie ಎಲೆಕ್ಟ್ರಿಕ್ ಸ್ಕೂಟರ್ 3.9 ಸೆಕೆಂಡ್‌ಗಳಲ್ಲಿ 0-40 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಹೊಸ River Indie ಎಲೆಕ್ಟ್ರಿಕ್ ಸ್ಕೂಟರ್ 90 ಕಿ,.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಬ್ಯಾಟರಿ ಮತ್ತು ಸ್ಕೂಟರ್ ಎರಡಕ್ಕೂ 5 ವರ್ಷ/50,000 ಕಿಮೀ ವಾರಂಟಿಯನ್ನು ಕಂಪನಿಯು ನೀಡಿದ್ದಾರೆ. ಹೊಸ River Indie ಎಲೆಕ್ಟ್ರಿಕ್ ಸ್ಕೂಟರ್ 770mm ಸೀಟ್ ಎತ್ತರವನ್ನು ಹೊಂದಿದೆ. ಇನ್ನು ಯಮಹಾ ಏರಾಕ್ಸ್ ಮತ್ತು ಎಪ್ರಿಲಿಯಾ SR160 ಸ್ಕೂಟರ್ ಗಳ ರೀತಿಯಲ್ಲಿ 14-ಇಂಚಿನ ವ್ಹೀಲ್ ಗಳನ್ನು ಹೊಂದಿದೆ.
ಇನ್ನು ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್ ಅಬ್ಸಾರ್ಬರ್ ಸೆಟಪ್ ಅನ್ನು ಒಳಗೊಂಡಿದೆ. ಇನ್ನು ಪ್ರಮುಖವಾಗಿ ಬ್ರೇಕಿಂಗ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 240mm ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 200mm ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ. ಇನ್ನು ಈ ಹೊಸ River Indie ಎಲೆಕ್ಟ್ರಿಕ್ ಸ್ಕೂಟರ್ 165mm ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ.


ಮೂರು ರೈಡಿಂಗ್ ಮೋಡ್‌ಗಳಲ್ಲಿ River Indie ಎಲೆಕ್ಟ್ರಿಕ್ ಸ್ಕೂಟರ್:
ಹೊಸ River Indie ಎಲೆಕ್ಟ್ರಿಕ್ ಸ್ಕೂಟರ್ ಕಲರ್ LCD ಡ್ಯಾಶ್ ಅನ್ನು ಹೊಂದಿದೆ. ಈ ಸ್ಕೂಟರ್ ನಲ್ಲಿ ಇಕೋ, ರೈಡ್ ಮತ್ತು ರಶ್ ಎಂಬ ಮೂರು ರೈಡಿಂಗ್ ಮೋಡ್ ಗಳನ್ನು ಹೊಂದಿವೆ. ಇನ್ನು ಇತರೆ ಪ್ರಮುಖ ಫೀಚರ್ಸ್ ಗಳು, ಡ್ ಸ್ಟ್ಯಾಂಡ್ ಕಟ್-ಆಫ್, ರಿವರ್ಸ್ ಪಾರ್ಕಿಂಗ್ ಅಸಿಸ್ಟ್ ಮತ್ತು 90-ಡಿಗ್ರಿ ವಾಲ್ವ್ ಸೆಟ್ಮ್ ಅನ್ನು ಒಳಗೊಂಡಿವೆ. ಈ ಸ್ಕೂಟರ್ ಮಾದರಿಯ ವಿಭಾಗದಲ್ಲಿ ಅತಿ ಉದ್ದವಾದ ಮತ್ತು ಅಗಲವಾದ ಸೀಟ್ ಅನ್ನು ಹೊಂದಿದೆ ಎಂದು ಕಂಪನಿ ಹೇಳಿದೆ.
ಕ್ರ್ಯಾಶ್ ಗಾರ್ಡ್‌ಗಳು ಮತ್ತು ಫ್ರಂಟ್ ಫುಟ್‌ಪೆಗ್‌ಗಳಂತಹ ಇತರ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಕಂಡುಬರದ ಕೆಲವು ಹೊಸ ವೈಶಿಷ್ಟ್ಯಗಳನ್ನು ಹೊಸ River Indie ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ನೀಡಲಾಗಿದೆ. ಇದು ಎರಡೂ USB ಚಾರ್ಜಿಂಗ್ ಪೋರ್ಟ್‌ಗಳನ್ನು ಸಹ ಹೊಂದಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಎಲ್ಇಡಿ ಲೈಟಿಂಗ್ ಮತ್ತು 25-ಲೀಟರ್ ಟಾಪ್ ಬಾಕ್ಸ್ ಮತ್ತು ಪ್ಯಾನಿಯರ್ ಸೆಟ್‌ನಂತಹ ಆಡ್-ಆನ್ ಲಗೇಜ್ ಆಯ್ಕೆಗಳನ್ನು ಪಡೆಯುತ್ತದೆ, ಇದು 40 ಲೀಟರ್ ವರೆಗಿನ ಸಾಮರ್ಥ್ಯವಿದೆ.
ಬಜಾಜ್ ಚೇತಕ್‌ಗೆ ಪೈಪೋಟಿ ನೀಡಬಲ್ಲ River Indieಗೆ ಬುಕ್ಕಿಂಗ್ ಶುರು:
ಈ ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಬಜಾಜ್ ಚೇತಕ್, Ola S1 Pro ಮತ್ತು Ather 450X ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಪೈಪೋಟಿ ನೀಡುತ್ತದೆ. River Indie ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಲಾಗಿದೆ. ಆಸಕ್ತ ಗ್ರಾಹಕರು ಇಂದಿನಿಂದ ಕಂಪನಿಯ ವೆಬ್‌ಸೈಟ್‌ನಲ್ಲಿ ಬುಕ್ ಮಾಡಬಹುದು. 2024ರ ಒಳಗೆ ಭಾರತದಾದ್ಯಂತ 50 ನಗರಗಳಿಗೆ ವಿಸ್ತರಿಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆ.