ಭಾರತದಲ್ಲಿ ಇರುವ ಒಟ್ಟು ಹಿಂದೂ ದೇವಾಲಯಗಳು ಎಷ್ಟು ಗೊತ್ತಾ…!? – ಅತೀ ಕಡಿಮೆ ದೇವಾಲಯ ಇರೋ ರಾಜ್ಯ ಯಾವುದು?

ಭಾರತದಲ್ಲಿ ಇರುವ ಒಟ್ಟು ಹಿಂದೂ ದೇವಾಲಯಗಳು ಎಷ್ಟು ಗೊತ್ತಾ…!? – ಅತೀ ಕಡಿಮೆ ದೇವಾಲಯ ಇರೋ ರಾಜ್ಯ ಯಾವುದು?

ನ್ಯೂಸ್ ಆ್ಯರೋ : ಭಾರತ ಅತ್ಯಂತ ಪ್ರಾಚೀನ ನಾಗರಿಕತೆ, ಭವ್ಯ ಸಂಸ್ಕೃತಿ, ಪಾರಂಪರಿಕ ಇತಿಹಾಸವಿರುವ ದೇಶ. ಸಾವಿರಾರು ವರ್ಷಗಳಿಂದಲೂ ಹಿಂದು ಸಂಸ್ಕೃತಿ ಈ ದೇಶದಲ್ಲಿ ಗಟ್ಟಿಯಾಗಿ ನೆಲೆಯೂರಿ ನಿಂತಿದೆ. ಹಿಂದುಗಳೇ ಬಹುಸಂಖ್ಯಾತರಾಗಿರುವ ಭಾರತದಲ್ಲಿ , ಮುಕ್ಕೋಟಿ ದೇವಾನುದೇವತೆಗಳ ಕಲ್ಪನೆಯಿದೆ. ಹಾಗೆಯೇ ವಿವಿಧ ರೀತಿಯ ಪೂಜೆ ಪುನಸ್ಕಾರಗಳು ನಿತ್ಯ ನಡೆಯುತ್ತಲೇ ಇರುತ್ತದೆ.

ಭಾರತದಲ್ಲಿ ನಾಗರಿಕತೆ ಹುಟ್ಟಿಕೊಂಡಾಗಿನಿಂದಲೂ ಇಲ್ಲಿ ಆರಾಧನೆಗಳು ನಡೆಯುತ್ತಿವೆ ಎಂಬುದಕ್ಕೆ ಸಾಕಷ್ಟು ಪುರಾವೆಗಳು ದೊರೆತಿವೆ. ಈ ದೇಶವನ್ನಾಳಿದ‌ ಎಲ್ಲಾ ರಾಜ ಮನೆತನಗಳೂ ಕೂಡ ನೂರಾರು ದೇಗುಲಗಳನ್ನು ನಿರ್ಮಿಸಿ ಧರ್ಮ ಸಾಕ್ಷಾತ್ಕಾರಕ್ಕೆ ಕೊಡುಗೆ ನೀಡಿವೆ. ಅತ್ಯಂತ ಪ್ರಾಚೀನ, ಜಗತ್ಪ್ರಸಿದ್ಧ ದೇಗುಲಗಳಿರುವ ಈ ದೇಶದಲ್ಲಿ ಒಟ್ಟಾರೆಯಾಗಿ ಎಷ್ಟು ದೇಗುಲಗಳಿವೆ, ಹೆಚ್ಚಿನ‌ ದೇಗುಲಗಳು ಯಾವ ರಾಜ್ಯದಲದಲಿರಬಹುದು, ಕಡಿಮೆ ದೇಗುಲವಿರುವ ರಾಜ್ಯ ಯಾವುದು ಎಂಬ ಪ್ರಶ್ನೆಗಳು ಒಮ್ಮೆಯಾದರು ನಿಮ್ಮನ್ನು ಕಾಡದಿರದು. ಆ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ.

ವರದಿಯೊಂದರ ಪ್ರಕಾರ, ಭಾರತದಲ್ಲಿ ಒಟ್ಟಾರೆಯಾಗಿ ಸುಮಾರು 6.48 ಲಕ್ಷ ದೇವಸ್ಥಾನಗಳಿವೆ. ಹಾಗೆಯೇ, ಅತ್ಯಂತ ಹೆಚ್ಚು ದೇವಸ್ಥಾನಗಳಿರುವುದು ನೆರೆಯ ರಾಜ್ಯ ತಮಿಳುನಾಡಿನಲ್ಲಿ. ತಮಿಳುನಾಡಿನ‌ ನಾಗರಿಕತೆ, ಸಂಸ್ಕೃತಿಗೆ ಸರಿಸುಮಾರು 5000 ವರ್ಷಗಳ ಇತಿಹಾಸವಿದ್ದು, 79,154 ದೇವಸ್ಥಾನಗಳಿವೆ.

ಇನ್ನು ಮಹಾರಾಷ್ಟ್ರದಲ್ಲಿ 77,283 ಹಿಂದು ದೇಗುಲಗಳಿದ್ದು, ಈ ರಾಜ್ಯ ಅತೀ ಹೆಚ್ಚು ದೇವಸ್ಥಾನಗಳಿರುವ ಎರಡನೇ ರಾಜ್ಯ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ?

ಇತಿಹಾಸ, ನಾಗರಿಕತೆ, ಮಹೋನ್ನತ ಸಂಸ್ಕೃತಿಯ ವಿಚಾರದಲ್ಲಿ ಕರ್ನಾಟಕ ರಾಜ್ಯವೂ ಹಿಂದೆ ಬಿದ್ದಿಲ್ಲ. ಕೋಟ್ಯಾಂತರ ಹಿಂದು ಧರ್ಮ ಪಾಲಕರಿರುವ ಈ ರಾಜ್ಯದಲ್ಲೂ ಸಾಕಷ್ಟು ದೇಗುಲಗಳಿದ್ದು ಅತೀ ಹೆಚ್ಚು ದೇವಾಲಯಗಳಿರುವ ಮೂರನೇ ರಾಜ್ಯ ಎಂಬ ಹಿರಿಮೆಗೆ ಕರ್ನಾಟಕ ಹಾಗೂ ಪಶ್ಚಿಮದ ಬಂಗಾಳ ಪಾತ್ರವಾಗಿದೆ.

ಇನ್ನೂ, ಅತ್ಯಂತ‌ ಕಡಿಮೆ ದೇಗುಲಗಳಿರುವ ರಾಜ್ಯ ಮಿಜೊರಾಂ ಆಗಿದ್ದು ಇಲ್ಲಿ ಕೇವಲ 32 ಹಿಂದು ದೇವಸ್ಥಾನಗಳಿವೆ. ವರದಿಯ ಪ್ರಕಾರ, ಭಾರತದ 1 ಲಕ್ಷ ಜನರಿಗೆ 53 ದೇವಾಲಯಗಳಿವೆ ಎಂಬ ಮಾಹಿತಿ ದೊರೆತಿದೆ. ಒಟ್ಟಾರೆ ಹೇಳುವುದಾದರೆ ಭಾರತದಲ್ಲಿ ಪ್ರತಿರಾಜ್ಯದಲ್ಲಿ ಪ್ರತಿ 1 ಲಕ್ಷ ಜನಸಂಖ್ಯೆಗೆ 53 ಹಿಂದು ದೇವಸ್ಥಾನಗಳಿವೆ ಎಂದು ಇಂಡಿಯಾ ಇನ್​ ಪಿಕ್ಸೆಲ್ಸ್ ತಿಳಿಸಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *