ಪುರುಷರಿಗೂ ಬಂದಿದೆ ಗರ್ಭನಿರೋಧಕ ಮಾತ್ರೆ – ಎರಡು ಗಂಟೆ ಕಾಲ ವೀರ್ಯ ನಿಶ್ಚಲವಾಗಿರಲಿದೆಯಂತೆ..!!

ಪುರುಷರಿಗೂ ಬಂದಿದೆ ಗರ್ಭನಿರೋಧಕ ಮಾತ್ರೆ – ಎರಡು ಗಂಟೆ ಕಾಲ ವೀರ್ಯ ನಿಶ್ಚಲವಾಗಿರಲಿದೆಯಂತೆ..!!

ನ್ಯೂಸ್ ಆ್ಯರೋ : ಇಂದಿನ ಕಾಲಕ್ಕೆ ಆರೋಗ್ಯಪೂರ್ಣ ಲೈಂಗಿಕತೆ ಎಂಬುದು ಅತೀ ಅನಿವಾರ್ಯವಾದುದು. ಇದರಿಂದಾಗಿ ಏಡ್ಸ್ ನಂತಹ ಕಾಯಿಲೆಯಿಂದ ದೂರವಿರಬಹುದಾಗಿದೆ. ಇದೇ ದೃಷ್ಟಿಯಿಂದ ವಿಜ್ಞಾನಿಗಳು ಹೊಸದೊಂದು ಪ್ರಯೋಗ ನಡೆಸಿದ್ದಾರೆ. ಮೊದಲು ಈ ಪ್ರಯೋಗವನ್ನು ಇಲಿಗಳ ಮೇಲೆ ನಡೆಸಿದ್ದು ಶೇ.100ರಷ್ಟು ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ಈ ಮಾತ್ರಗಳನ್ನು ಗರ್ಭನಿರೋಧಕ್ಕಾಗಿ ಪುರುಷರೂ ಕೂಡ ಬಳಸಬಹುದು ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

ಇಲ್ಲಿಯವರೆಗೂ ಗರ್ಭಧಾರಣೆ ತಡೆಯಲು ಪುರುಷರಿಗೆ ಕೇವಲ ಎರಡು ಆಯ್ಕೆಗಳಿತ್ತು. ಅವುಗಳೆಂದರೆ ‘ವ್ಯಾಸೆಕ್ಟಮಿ ಹಾಗೂ ಕಾಂಡೊಮ್’ ಬಳಕೆ. ಆದರೆ ಇದೀಗ, ಮೂರನೇ ಆಯ್ಕೆಯೂ ಲಭ್ಯವಾಗುವ ನಿರೀಕ್ಷೆ ಮೂಡಿದೆ‌. ಕೆಲವೇ ಸಮಯದಲ್ಲಿ ಪುರುಷರಿಗಾಗಿಯೇ ಎಲ್ಲಾ ಮೆಡಿಕಲ್ ಸ್ಟೋರ್ ಗಳಲ್ಲಿ ಈ ಗರ್ಭನಿರೋಧಕ ಮಾತ್ರೆಗಳು ಲಭ್ಯವಾಗಲಿದೆ.

ಮಗುವಿನ ಜವಾಬ್ದಾರಿ ಹೊರಲು ಹಿಂಜರಿಯುವ ಹಾಗೂ ದೈಹಿಕ ಸಂಪರ್ಕವನ್ನು ನಿಯಂತ್ರಿಸಲಾಗದ ಪುರುಷರಿಗಾಗಿ ವಿಜ್ಞಾನಿಗಳು ಈ ಸಂಶೋಧನೆ ನಡೆಸಿದ್ದಾರೆ. ಅಭಿವೃದ್ಧಿ ಪಡಿಸಲಾಗುತ್ತಿರುವ ಈ ಹೊಸ ಗರ್ಭನಿರೋಧಕ ಮಾತ್ರೆ ಸೇವನೆಯ ಪ್ರಭಾವದಿಂದಾಗಿ, 2 ಗಂಟೆಗಳವರೆಗೆ ಪುರುಷರಲ್ಲಿನ ವೀರ್ಯ ನಿಶ್ಚಲವಾಗಿರಲಿದೆಯಂತೆ. ಆ ಕಾರಣ ಪುರುಷನ ವೀರ್ಯಾಣು, ಮಹಿಳೆಯ ಅಂಡಾಣು ಪ್ರವೇಶಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳಲಿದೆ ಎನ್ನಲಾಗಿದೆ.

ಸಂಶೋಧನಾ ವರದಿಯ ಪ್ರಕಾರ, ಸಾಕಷ್ಟು ಸಮಯದಿಂದಲೂ ಪುರುಷರಿಗಾಗಿ ಗರ್ಭನಿರೋಧಕ ಮಾತ್ರೆಗಳನ್ನು ಅಭಿವೃದ್ಧಿ ಪಡಿಸುವ ಕೆಲಸ ನಡೆಯುತ್ತಿದ್ದರೂ ಕೂಡ ಅದು ನಿರೀಕ್ಷಿತ ಫಲಿತಾಂಶ ನೀಡಿರಲಿಲ್ಲ. ಆದರೆ ಈಗ ನಡೆಯುತ್ತಿರುವ ಪ್ರಯೋಗವು ಇಲಿಗಳ ಮೇಲೆ ನಿರೀಕ್ಷಿತ ಪರಿಣಾಮ ಬೀರಿದ್ದು, ಮಾನವರನ್ನು ಒಳಗೊಂಡ ಕ್ಲಿನಿಕಲ್ ಪ್ರಯೋಗಳಿಗೆ ಅಮೆರಿಕಾದ ನ್ಯೂಯಾರ್ಕ್ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಸಿದ್ಧತೆ ಆರಂಭವಾಗಿದೆ ಎಂದು ವಿಜ್ಞಾನಿಗಳ ಮೂಲಗಳಿಂದ ತಿಳಿದು ಬಂದಿದೆ‌. ಈ ಮಾತ್ರೆಗಳ ಪರಿಣಾಮ‌ ಹಾಗೂ ಅಡ್ಡ ಪರಿಣಾಮಗಳ ಬಗ್ಗೆ ವಿಜ್ಞಾನಿಗಳು ಇನ್ನಷ್ಟು ಸೂಕ್ಷ್ಮವಾಗಿ ಗಮನ ಹರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸಂಶೋಧನಾ ವರದಿಯ ಪ್ರಕಾರ, ಈ ಮಾತ್ರೆಗಳ ಸೇವನೆಯೂ ದೇಹದ ಯಾವುದೇ ಹಾರ್ಮೋನ್‌ಗಳ ಮೇಲೆ ಅಡ್ಡ ಪರಿಣಾಮ ಉಂಟು ಮಾಡುವುದಿಲ್ಲ. ಅಲ್ಲದೇ, ಈ ಹೊಸ ಮಾತ್ರೆಗಳು ಗರ್ಭನಿರೋಧಕ ಕೆಲಸಗಳನ್ನು ಆರಂಭಿಸಲು ದಿನಗಟ್ಟಲೆ ಸಮಯ ತೆಗೆದುಕೊಳ್ಳದೇ, ಕ್ಷಿಪ್ರವಾಗಿ ಕೆಲಸ ಆರಂಭಿಸುತ್ತದೆ‌. ಜೊತೆಗೆ ಇದರ ಪರಿಣಾಮವೂ ಕೂಡ ಒಂದೇ ದಿನಕ್ಕೆ ದೇಹದಿಂದ ನಿರ್ಗಮಿಸಲಿದೆಯಂತೆ. ಪ್ರಯೋಗಗಳೆಲ್ಲ ಮುಗಿದ ನಂತರ ಈ ಮಾತ್ರೆಗಳು ಮಾರುಕಟ್ಟೆ ಪ್ರವೇಶಿಸಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ‌‌.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *