ಟಾಟಾ ನೆಕ್ಸಾನ್ ಪ್ರತಿಸ್ಪರ್ಧಿ ‘ಮಹೀಂದ್ರಾ XUV400’ ಇವಿ ಮಾರುಕಟ್ಟೆಗೆ ಲಗ್ಗೆ – ಈ ಅತ್ಯಾಧುನಿಕ ವಾಹನ ಹೇಗಿದೆ ಗೊತ್ತಾ?

ಟಾಟಾ ನೆಕ್ಸಾನ್ ಪ್ರತಿಸ್ಪರ್ಧಿ ‘ಮಹೀಂದ್ರಾ XUV400’ ಇವಿ ಮಾರುಕಟ್ಟೆಗೆ ಲಗ್ಗೆ – ಈ ಅತ್ಯಾಧುನಿಕ ವಾಹನ ಹೇಗಿದೆ ಗೊತ್ತಾ?

ನ್ಯೂಸ್ ಆ್ಯರೋ : ಇತ್ತೀಚೆಗೆ ಸಾಕಷ್ಟು ವಾಹನ ತಯಾರಿಕಾ ಕಂಪೆನಿಗಳು ಇವಿ ವಾಹನಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುತ್ತಿದೆ.‌ ಇದೀಗ ಭಾರತದ ಪ್ರಮುಖ ಕಂಪೆನಿಯಾದ ಮಹೀಂದ್ರಾ ತನ್ನ ಮೊಟ್ಟಮೊದಲ ಎಲೆಕ್ಟ್ರಿಕ್ ಯುವಿಎಸ್ ‘XUV400’ ಅನ್ನು ಕಳೆದ ತಿಂಗಳು ಲಾಂಚ್ ಮಾಡಿತ್ತು. ಈ ಅತ್ಯಾಧುನಿಕ ವಾಹನ ಈಗಾಗಲೇ ಡೀಲರ್ ಶಿಪ್ ಗಳ ಬಳಿ ತಲುಪಿದ್ದು, ರೂ.21,000 ಕ್ಕೆ ಬುಕ್ಕಿಂಗ್ ಕೂಡ ಆರಂಭವಾಗಿದೆ. ಮೂಲಗಳ ಪ್ರಕಾರ ಮುಂದಿನ ತಿಂಗಳಿನಿಂದ ವಿತರಣೆ ಆರಂಭವಾಗಲಿದೆಯಂತೆ. ಹಾಗಿದ್ದರೆ‌ ಒಮ್ಮೆ ಈ ವಾಹನದ ವೈಶಿಷ್ಟ್ಯತೆಗಳನ್ನು ನೋಡೋಣ ಬನ್ನಿ.

ಇಸಿ ಹಾಗೂ ಇಎಲ್ ಸೇರಿದಂತೆ ಎರಡು ರೂಪಾಂತರಗಳಲ್ಲಿ ಮಹೀಂದ್ರಾ ಈ ವಾಹನವನ್ನು ಗ್ರಾಹಕರಿಗೆ ಪರಿಚಯಿಸಲು ಯೋಚಿಸಿದೆ. ಇಸಿ ಬೆಲೆ ರೂ.15.99 ಲಕ್ಷ ರೂ. ಹಾಗೂ 18.99 ಲಕ್ಷ ಬೆಲೆಯಲ್ಲಿ ಲಭ್ಯವಿರಲಿದೆ. ಈ ಕಾರು ಇನ್ಫಿನಿಟಿ ಬ್ಲೂ, ಆರ್ಕ್ಟಿಕ್ ಬ್ಲೂ, ಗ್ಯಾಲಕ್ಸಿ ಗ್ರೇ ಹಾಗೂ ಎವರೆಸ್ಟ್ ವೈಟ್ ಸೇರಿದಂತೆ ನಾಲ್ಕು ಬಣ್ಣಗಳಲ್ಲಿ‌ ಲಾಂಚ್ ಆಗಲಿವೆ‌.

ಇನ್ನು ಈ ನೂತನ ಮಹೀಂದ್ರಾ XUV400 ಕಾರು ಇದು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಖರೀದಿಗೆ ಲಭ್ಯರಲಿದ್ದು, 34.5kWh ಬ್ಯಾಟರಿ ಪ್ಯಾಕ್ ಹೊಂದಿರುವ ಕಾರು, ಸಂಪೂರ್ಣ ಚಾರ್ಜ್ ನಲ್ಲಿ 375 km ರೇಂಜ್ ನೀಡಲಿದೆ ಹಾಗೂ 39.4kWh ಬ್ಯಾಟರಿ ಪ್ಯಾಕ್ ಹೊಂದಿರುವ ಕಾರು, 456 km ರೇಂಜ್ ನೀಡಲಿದೆ.

ಇದರಲ್ಲಿ ಅಳವಡಿಸಿರುವ ಎಲೆಕ್ಟ್ರಿಕ್ ಮೋಟಾರ್ 150hp ಪವರ್ 310Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು,150 kph ಟಾಪ್ ಸ್ವೀಡ್ ಹೊಂದಿದೆ. ಜೊತೆಗೆ 8.3 ಸೆಕೆಂಡುಗಳಲ್ಲಿ 0-100kph ವೇಗವನ್ನು ಹೊಂದಲಿದೆ.‌

ಈ ಕಾರಿನ ಮತ್ತೊಂದು ವಿಶೇಷತೆಯೆಂದರೆ ಇದು ಫನ್, ಫಾಸ್ಟ್ ಹಾಗೂ ಫಿಯರ್‌ಲೆಸ್ ಎಂಬ ಮೂರು ಡ್ರೇವಿಂಗ್ ಮೋಡ್ ಗಳ ಆಯ್ಕೆಯಿರಲಿದೆ. ಮಹೀಂದ್ರಾ XUV400 ಬ್ಯಾಟರಿ, 50kW DC ಫಾಸ್ಟ್ ಚಾರ್ಜರ್ ನಲ್ಲಿ ಕೇವಲ 50 ನಿಮಿಷದಲ್ಲಿ ಶೇಕಡ 0-80% ಚಾರ್ಜ್ ಆಗಲಿದೆ. 7.2kW ಚಾರ್ಜರ್‌ನಲ್ಲಿ ಶೇಕಡ 0-100% ಚಾರ್ಜ್ 6 ಗಂಟೆ 30 ನಿಮಿಷ ಬೇಕಾಗಿದ್ದು, 3.3kW AC ಚಾರ್ಜರ್‌ನಲ್ಲಿ ಬರೋಬ್ಬರಿ 13 ಗಂಟೆ ಪಡೆದುಕೊಳ್ಳುತ್ತದೆ.

ಇನ್ನು, ಈ ಕಾರು 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಕರ್ಷಕ ಸನ್‌ರೂಫ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಅಡ್ಜಸ್ಟ್ಏಬಲ್ ORVM ಗಳು, ಸ್ಟಾರ್ಟ್/ಸ್ಟಾಪ್ ಬಟನ್ ಸೇರಿದಂತೆ ಹಲವಾರು ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಅಲ್ಲದೆ, ಸುರಕ್ಷತೆಯ ದೃಷ್ಟಿಯಿಂದ ಆರು ಏರ್‌ಬ್ಯಾಗ್ಸ್, ಇಎಸ್‌ಸಿ ರೇರ್ ಪಾರ್ಕಿಂಗ್ ಕ್ಯಾಮೆರಾವನ್ನು ಹೊಂದಿದೆ.

ಇನ್ನೂ, ಮಹೀಂದ್ರಾ XUV400 ಹಾಗೂ ಟಾಟಾ ನೆಕ್ಸಾನ್ ಬಗೆಗೆ ಹೋಲಿಕೆ ಮಾಡುವುದಾದರೆ. ಮಹೀಂದ್ರಾ XUV400 ಹೆಚ್ಚಿನ ರೇಂಜ್ ಹೊಂದಿದೆ. ಆದರೆ, ಬೆಲೆಯು ಅದೇ ರೀತಿಯಲ್ಲಿ ಹೆಚ್ಚಿದ್ದು, ಸದ್ಯ ಡೀಲರ್‌ಶಿಪ್‌ಗಳಲ್ಲಿ ಈ ಕಾರಿನ ಮಾದರಿಯನ್ನು ಪ್ರದರ್ಶನ ಮಾಡಲಾಗುತ್ತಿದೆ. ಈ ಮೂಲಕ ಕಂಪನಿಯು ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಯೋಜಿಸಿದೆ. ಮುಂದಿನ ತಿಂಗಳಿಂದ ವಿತರಣೆಗಳು ಆರಂಭಗವಾಗಲಿದ್ದು, ಮತ್ತಷ್ಟು ಹೊಸ ಖರೀದಿದಾರನ್ನು ಆಕರ್ಷಿಸಲು ಮಹೀಂದ್ರಾ ಕಂಪನಿಗೆ ಸಾಧ್ಯವಾಗಲಿದ್ದು, ಈ ವಾಹನಗಳ ನಡುವೆ ಎಷ್ಟರ ಮಟ್ಟಿಗೆ ತೀವ್ರ ಪೈಪೋಟಿ ನಡೆಯಲಿದೆ ಹಾಗೂ ಯಾವ ವಾಹನ‌ ಗ್ರಾಹಕರನ್ನು ಸೆಳೆಯಲಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *