T20 ಕ್ರಿಕೆಟ್‌ನಲ್ಲಿ ಶತಕ‌ ಸಿಡಿಸಿ ಕೊಹ್ಲಿ ದಾಖಲೆ ಮುರಿದ ಶುಭಮನ್ ಗಿಲ್ – ಒಂದೇ ಶತಕ, ಬರೆದ ದಾಖಲೆಗಳೆಷ್ಟು ಗೊತ್ತಾ…!?

T20 ಕ್ರಿಕೆಟ್‌ನಲ್ಲಿ ಶತಕ‌ ಸಿಡಿಸಿ ಕೊಹ್ಲಿ ದಾಖಲೆ ಮುರಿದ ಶುಭಮನ್ ಗಿಲ್ – ಒಂದೇ ಶತಕ, ಬರೆದ ದಾಖಲೆಗಳೆಷ್ಟು ಗೊತ್ತಾ…!?

ನ್ಯೂಸ್ ಆ್ಯರೋ : ‘ಟಿ20 ಕ್ರಿಕೆಟ್ ಆಡಲು ಶುಭಮನ್‌‌ ಗಿಲ್‌‌ ಅರ್ಹನಲ್ಲ’ ಎಂದವರಿಗೆ ಗಿಲ್ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ತಮ್ಮ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದಾರೆ. ಟೀಂ ಇಂಡಿಯಾದ ಭರವಸೆಯ‌ ಯುವ ಆಟಗಾರ‌ ಎನಿಸಿಕೊಂಡಿರುವ ಗಿಲ್ ಬಾರಿಸಿದ ಶತಕ ಕ್ರಿಕೆಟ್ ಇತಿಹಾಸ ಹಲವು ಇತಿಹಾಸಗಳನ್ನು‌ ಅಳಿಸಿ ಹಾಕಿದೆ.

ಜನವರಿಯಲ್ಲಿ‌ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟಿ20 ಕ್ರಿಕೆಟ್ ಪಾದಾರ್ಪಣೆ ಮಾಡಿದ ಗಿಲ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಆದರೆ ಫೆ.1 ರಂದು ನ್ಯೂಜಿಲೆಂಡ್ ಹಾಗೂ ಟೀಂ‌ ಇಂಡಿಯಾ ನಡುವೆ ನಡೆದ ಮೂರನೇ ಟಿ20‌ ಪಂದ್ಯಾಟ ಎರಡೂ ತಂಡಗಳಿಗೂ ನಿರ್ಣಾಯಕ ಪಂದ್ಯಾಟವಾಗಿತ್ತು. ಇದೇ ಪಂದ್ಯಾದಲ್ಲಿ ಘರ್ಜಿಸಿದ ಯುವ ಬ್ಯಾಟರ್ ಶುಭಮನ್ ಗಿಲ್ ತಾನು ಎದುರಿಸಿದ 63 ಎಸೆತಗಳಲ್ಲಿ 7 ಸಿಕ್ಸರ್ 12 ಬೌಂಡರಿಗಳೊಂದಿಗೆ 126 ರನ್ ಬಾರಿಸಿ ದಾಖಲೆ‌ ನಿರ್ಮಿಸಿದ್ದಾರೆ.

ಇದರೊಂದಿಗೆ ಸುರೇಶ್ ರೈನಾ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸೂರ್ಯ ಕುಮಾರ್ ಯಾದವ್, ದೀಪಕ್ ಹೂಡಾ, ಕೆ.ಎಲ್. ರಾಹುಲ್ ಬಳಿಕ ಟಿ20-ಐ ನಲ್ಲಿ ಶತಕ ಸಿಡಿಸಿದ ಏಕೈಕ ಬ್ಯಾಟರ್ ಎನ್ನುವ ಹೆಗ್ಗಳಿಕೆಗೆ ಗಿಲ್ ಪಾತ್ರವಾಗಿದ್ದಾರೆ.

ಐದನೇ ಗರಿಷ್ಠ ಸ್ಕೋರ್‌ ದಾಖಲಿಸಿದ ಟೀಂ ಇಂಡಿಯಾ
ನ್ಯೂಜಿಲೆಂಡ್ ವಿರುದ್ದದ ಮೂರನೇ ಟಿ20 ಸರಣಿ ಎರಡು ತಂಡಗಳಿಗೂ ‘ಮಾಡು ಇಲ್ಲವೇ ಮಡಿ’ ಪಂದ್ಯಾಟವಾಗಿತ್ತು. ಈ ಪಂದ್ಯದಲ್ಲಿ ಎದುರಾಳಿಗಳಿಗೆ ಅಕ್ಷರಶಃ ಸಿಂಹ ಸ್ವಪ್ನವಾಗಿ ಕಾಡಿದ ಭಾರತದ ಯುವ ಬ್ಯಾಟರ್ ಶುಭಮನ್ ಗಿಲ್ ಭಾರಿಸಿದ 126 ರನ್ ಗಳ ಅಬ್ಬರದ ಶತಕದ ನೆರವಿನಿಂದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 234 ರನ್ ಒಟ್ಟುಗೂಡಿಸುವಲ್ಲಿ ಶಕ್ತವಾಯಿತು. ಇದು ಟಿ20-ಐ‌ ನಲ್ಲಿ ಟೀಂ ಇಂಡಿಯಾ ಗಳಿಸಿದ ಐದನೇ ಗರಿಷ್ಠ ಸ್ಕೋರ್. ಈ ಹಿಂದೆ 2017ರಲ್ಲಿ ಶ್ರೀಲಂಕಾ ವಿರುದ್ಧ 260 ರನ್ ಗಳಿಸಿರುವುದು ಭಾರತದ ಶ್ರೇಷ್ಠ ಪ್ರದರ್ಶನವಾಗಿದೆ.

ಕೊಹ್ಲಿ ದಾಖಲೆ ಬ್ರೇಕ್‌ ಮಾಡಿದ ಗಿಲ್
ಸದ್ಯ, ಶುಭಮನ್ ಗಿಲ್ ಟಿ20-ಐ‌ ನಲ್ಲಿ ಅಜೇಯ 126 ರನ್ ನೆರವಿನಿಂದ ಶತಕ ಸಿಡಿಸುವ ಮೂಲಕ ಟೀಂ ಇಂಡಿಯಾದ ಕಿಂಗ್ ಕೊಹ್ಲಿಯವರ ದಾಖಲೆ ಮುರಿದಿದ್ದಾರೆ. ಈ ಹಿಂದೆ 2022 ಏಷ್ಯಾ ಕಪ್ ಟಿ20 ಕ್ರಿಕೆಟ್‌ನಲ್ಲಿ ವಿರಾಟ್ ಅಜೇಯ 122 ರನ್ ಗಳಿಸಿ ದಾಖಲೆ ಸೃಷ್ಟಿಸಿದ್ದರು.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *