32 ವರ್ಷದ ನಂತರ ಈ ಊರಲ್ಲಿ ನಡೆಯಲಿದೆ ವಿಶೇಷ ಜಾತ್ರೆ – ಆದ್ರೆ ಊರಿಗೆ ಊರೇ ಚಪ್ಪಲಿ ಧರಿಸೋದಿಲ್ಲ, ಯಾಕೆ ಗೊತ್ತಾ…!?

32 ವರ್ಷದ ನಂತರ ಈ ಊರಲ್ಲಿ ನಡೆಯಲಿದೆ ವಿಶೇಷ ಜಾತ್ರೆ – ಆದ್ರೆ ಊರಿಗೆ ಊರೇ ಚಪ್ಪಲಿ ಧರಿಸೋದಿಲ್ಲ, ಯಾಕೆ ಗೊತ್ತಾ…!?

ನ್ಯೂಸ್ ಆ್ಯರೋ : 32 ವರ್ಷಗಳ ನಂತರ ಕೋಟೆನಾಡು ಚಿತ್ರದುರ್ಗದಲ್ಲಿ ವಿಶೇಷ ಜಾತ್ರೆ ಸಂಭ್ರಮ ಮನೆಮಾಡಿದ್ದು, ಈ ಜಾತ್ರೆ ಸಂದರ್ಭದಲ್ಲಿ ಇಡೀ ಊರಿಗೆ ಪಾದರಕ್ಷೆ ನಿಷೇಧಿಸಲಾಗಿದೆ.

ಚಿತ್ರದುರ್ಗದ ಬೊಮ್ಮೇನಹಳ್ಳಿಯಲ್ಲಿ ಗ್ರಾಮದೇವತೆ ಉತ್ಸವ ನಡೆಯುತ್ತಿದೆ. ಇಡೀ ಗ್ರಾಮದ ಸೀಮೆಗೆ ಗಂಗಾಜಲ ಚುಮುಕಿಸಿ ಸರಗಾ ಹಾಕಲಾಗುತ್ತದೆ.

ಸಾಮಾನ್ಯವಾಗಿ ದೇವಾಲಯಗಳಿಗೆ ಹೋಗುವಾಗ ಚಪ್ಪಲಿ ಇಲ್ಲದೆ ಹೋಗಲಾಗುತ್ತದೆ. ಆದರೆ ಈ ಗ್ರಾಮಕ್ಕೆ ಎಂಟ್ರಿ ಕೊಡುವಾಗಲೇ ಚಪ್ಪಲಿ ಇಲ್ಲದೆ ಬರಬೇಕಾಗುತ್ತದೆ. ಅಲ್ಲಿಂದ ಎಲ್ಲಿಗೆ ತೆರಳಬೇಕಾದರೂ ಚಪ್ಪಲಿಯನ್ನು ಕೈಯಲ್ಲಿಯೇ ಹಿಡಿದು ತೆರಳಬೇಕಾಗುತ್ತದೆ.

ಮೂರು ದಶಕಗಳ ನಂತರ ಜಾತ್ರೆ ನಡೆಯುತ್ತಿದ್ದು, ಊರಿಗೇ ಊರೇ ಸಂಭ್ರಮಿಸುತ್ತಿದೆ. ಗ್ರಾಮದ ಮಾರಿಕಾಂಬಾ, ಬಸಾಯ ಪಟ್ಟಣಂ ದೇವಿಯರ ಉತ್ಸವ ನಡೆಯಲಿದೆ. ಮೊದಲ ದಿನ ಗಂಗಾಪೂಜೆ, ಉತ್ಸವ ಮೂರ್ತಿಗಳ ಮೆರವಣಿಗೆ ನಡೆಯಲಿದೆ.

ಇಡೀ ಗ್ರಾಮವನ್ನೇ ಶುದ್ಧಗೊಳಿಸಿ, ಗಂಗಾಜಲ ಹಾಕುವುದರಿಂದ ಇದು ಪರಿಶುದ್ಧ ಎಂದು ಭಾವಿಸಲಾಗುತ್ತದೆ. ಹಾಗಾಗಿ ಇಲ್ಲಿ ಚಪ್ಪಲಿ ಹಾಕುವುದಿಲ್ಲ. ಬೈಕ್, ಕಾರ್ ಓಡಿಸುವವರೂ ಕೂಡ ಚಪ್ಪಲಿ ಇಲ್ಲದೆ ಓಡಾಡಬೇಕಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *