ವಾಹನೋದ್ಯಮದಲ್ಲಿ ಸಂಚಲನ ಮೂಡಿಸುತ್ತಿದೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ – ವೈಶಿಷ್ಟ್ಯಗಳ ಕಣಜ ಈ ದ್ವಿಚಕ್ರ ವಾಹನ

ವಾಹನೋದ್ಯಮದಲ್ಲಿ ಸಂಚಲನ ಮೂಡಿಸುತ್ತಿದೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ – ವೈಶಿಷ್ಟ್ಯಗಳ ಕಣಜ ಈ ದ್ವಿಚಕ್ರ ವಾಹನ

ನ್ಯೂಸ್ ಆ್ಯರೋ : ಜಗತ್ತಿನಲ್ಲಿ ದ್ವಿಚಕ್ರ ವಹಾನಗಳ ಕಾರುಬಾರು ಇಂದು ನಿನ್ನೆಯದಲ್ಲ. ನೂರಾರು ವರ್ಷಗಳಿಂದಲೂ ರಸ್ತೆಯ ಮೇಲೆ ಇವುಗಳು ಹಿಡಿತ ಸಾಧಿಸಿವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ವಾರಕ್ಕೊಂದು ಹೊಸ ರೂಪದ ವಾಹನಗಳು ರಸ್ತೆಗಿಳಿಯುತ್ತಿವೆ. ಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ ನೂತನ ಜನಸ್ನೇಹಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿವೆ. ಸದ್ಯ ಮಾರುಕಟ್ಟೆಗೆ ಹೊಸದೊಂದು ಎಲೆಕ್ಟ್ರಿಕ್ ವಾಹನ‌ ಬಂದಿದ್ದು ವಾಹನ ಪ್ರೀಯರನ್ನು ಸೂಜಿಗಲ್ಲಿನಂತೆ ಇದು ಸೆಳೆಯುತ್ತಿದೆ.

New Ampere Electric Scooter Magnus EX Copyright (C) 'RUSH LANE' Read more at... httpswww.rushlane.comnew-ampere-electric-scooter-magnus-ex-launch-price-12415132.html .

ದ್ವಿಚಕ್ರ ವಾಹನಗಳ ಈ ವಿದ್ಯಮಾನದಲ್ಲಿ ಸದ್ಯ ನಂಬರ್ 1 ಬ್ರಾಂಡ್ ಎನಿಸಿಕೊಂಡಿರುವುದು ಓಲಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನ. ಇತರ ಕಂಪನಿಗಳು ಇದನ್ನು ಹಿಂದಿಕ್ಕಲು ಹಲವು ಕಾರ್ಯತಂತ್ರಗಳನ್ನು ರೂಪಿಸುತ್ತಿವೆ. ಇದೆ ಮಾದರಿಯಲ್ಲಿ ಓಲಾದ ನಂತರ ಎರಡನೇ ಸ್ಥಾನದಲ್ಲಿರುವ ಆಂಪಿಯರ್ ಕಂಪನಿಯು ತನ್ನ ವಾಹನೋದ್ಯಮವನ್ನು ವಿಸ್ತರಿಸಲು ನೂತನ ದ್ವಿಚಕ್ರ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಯೋಜಿಸುತ್ತಿದೆ. ಈ ವಾಹನಗಳು ಪ್ರೀಮಿಯಂ ನಲ್ಲಿರಲಿದ್ದು, ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಸಿಗಲಿದೆ ಎಂದು ಕಂಪೆನಿಯ ಉಪಾಧ್ಯಕ್ಷ ತಿಳಿಸಿದ್ದಾರೆ.

ಸದ್ಯ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ 2023ರ ಆಟೋ ಎಕ್ಸಪೋದಲ್ಲಿ ಈ ಕಂಪನಿ ಆಂಪಿಯರ್ ಎನ್.ಎಕ್ಸ್.ಜಿ, ಆಂಪಿಯರ್ ಎನ್.ಎಕ್ಸ್.ಯು ಒಳಗೊಂಡಂತೆ ಒಟ್ಟಾರೆ ಐದು ಹೊಸ ಉತ್ಪನ್ನಗಳೊಂದಿಗೆ, ಆಂಪಿಯರ್ ಪ್ರೈಮಸ್ ಇ-ಸ್ಕೂಟರ್ ಅನ್ನು ಸಹ ಪ್ರದರ್ಶಿಸಿದೆ.

ಈ ಬಗ್ಗೆ ಆಂಪಿಯರ್ ಕಂಪೆನಿಯು ನಾಗೇಶ್ ಪ್ರತಿಕ್ರಿಯಿಸಿದ್ದು, ‘ನಾವು ಎಲೆಕ್ಟ್ರಿಕ್ ವಾಹನೋದ್ಯಮ ಆರಂಭಿಸಿದಾಗ ನಮ್ಮ ಕಂಪೆನಿಯ ವಾರ್ಷಿಕ ಆದಾಯ 180 ಕೋಟಿ ಇತ್ತು ಆದರೆ ಕಳೆದ ತ್ರೈಮಾಸಿಕದಿಂದ ಆದಾಯಮಟ್ಟ 320 ಕೋಟಿಗೆ ಏರಿಕೆಯಾಗಿದೆ. ಇತ್ತೀಚಿನ ವರ್ಷದಲ್ಲಿ ಮ್ಯಾಗ್ನಸ್ ಬ್ರಾಂಡ್ ಅಡಿ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ 1,00,000 ಯೂನಿಟ್ ಮಾರಾಟವಾಗಿದೆ. ಇದೀಗ ನಮ್ಮ‌ ಕಂಪೆನಿ ಹೊಸ ಉತ್ಪನ್ನಗಳನ್ನು ಹೊರ‌‌ತರುತ್ತಿದ್ದು ಜನರಿಗೆ ಇಷ್ಟವಾಗಬಹುದು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ದಿನಗಳಲ್ಲಿ ಇನ್ನಷ್ಟು ಕಡಿಮೆ ಬೆಲೆಯ ಸ್ಕೂಟರ್‌ಗಳು ಮಾರುಕಟ್ಟೆಗೆ ಪರಿಚಯಿಸುತ್ತೆವೆ. ಇವುಗಳ ಬೆಲೆ 85,000 ರಿಂದ 1 ಲಕ್ಷ ರೂ.ವರೆಗೆ ಇರಲಿದೆ. ಕಂಪನಿಯು ಕಡಿಮೆ ಮತ್ತು ಹೆಚ್ಚಿನ ಬೆಲೆಯ ವಾಹನಗಳನ್ನು ನೂತನ ತಂತ್ರಜ್ಞಾನದೊಂದಿಗೆ ಪರಿಚಯಿಸಲು ಸಿದ್ಧತೆ ನಡೆಸಿದೆ. ಸದ್ಯ ನಮ್ಮ ದೇಶದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರುಕಟ್ಟೆ ಬೆಳೆಯುತ್ತಿದೆ. ಕಳೆದ ವರ್ಷ ಸುಮಾರು 2.5 ಲಕ್ಷ ಯುನಿಟ್‌ಗಳು ಮಾರಾಟವಾಗಿವೆ. ಈ ಅಂಕಿ ಅಂಶವು ಈ ವರ್ಷ ಸುಮಾರು 7 ಲಕ್ಷ ಯೂನಿಟ್‌ಗಳನ್ನು ತಲುಪಲಿದೆ ಇದರೊಂದಿಗೆ ಮುಂಬರುವ ವರ್ಷ ಇದು ಸುಮಾರು 13 ಲಕ್ಷ ಯೂನಿಟ್ ಆಗಲಿದೆ ಎಂದು ಅಂದಾಜಿಸಲಾಗಿದೆ. ಶೇ.13-14ರಷ್ಟು ಮಾರುಕಟ್ಟೆ ಪಾಲನ್ನು ನಮ್ಮ ಕಂಪನಿ ಹೊಂದಿದೆ’ ಎಂದು ಅವರು ಹೇಳಿದರು.

Related post

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ ಪತ್ರ

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ…

ನ್ಯೂಸ್ ಆರೋ: ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು ಸಿಕ್ಕಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರಜ್ಞಾವಂತ ನಾಗರೀಕರು ಎಂಬ ಹೆಸರಿನಲ್ಲಿ…
ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ನ್ಯೂಸ್ ಆರೋ: ಕೆಜಿಎಫ್ ನಂತರ ಹಿಟ್ ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಯಶ್ ಇದೀಗ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಆ ಚಿತ್ರಕ್ಕೆ ಶೂರ್ಪನಖಿಯಾಗಿ ರಕುಲ್ ಕಾಣಿಸಿಕೊಳ್ಳಲಿದ್ದಾರೆ. ಹೌದು,ಶೂರ್ಪನಕಿಯಾಗಿ…
ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌ ದರ ಇಳಿಕೆ ಮಾಡಿದ ಪಾಕ್‌ ಸರ್ಕಾರ

ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌…

ನ್ಯೂಸ್ ಆರೋ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರು ಭಾರತಕ್ಕೆ ಸೇರುತ್ತೇವೆ ಎಂದು ನಡೆಸುತ್ತಿದ್ದ ಪ್ರತಿಭಟನೆಗೆ ಪಾಕಿಸ್ತಾನದ ಸರ್ಕಾರ ಮಣಿದಿದೆ. ಹೌದು, ಜನರ ಪ್ರತಿಭಟನೆ ಬೆನ್ನಲ್ಲೇ ಪಾಕ್‌ ಆಕ್ರಮಿತ ಕಾಶ್ಮೀರದ…

Leave a Reply

Your email address will not be published. Required fields are marked *