
ನೀವು ಬಾಯಿ ಚಪ್ಪರಿಸಿ ತಿನ್ನೋ ಪಾನಿ ಪೂರಿ ನೀರು ಹೇಗೆ ತಯಾರಿಸ್ತಾರೆ ಗೊತ್ತಾ? – ಈ ವೈರಲ್ ವಿಡಿಯೋ ನೋಡಿದ್ರೆ ನೀವು ಪಾನಿಪೂರಿಯನ್ನೇ ಮರೀತೀರಾ…!!!
- ವೈರಲ್ ನ್ಯೂಸ್
- November 8, 2023
- No Comment
- 124
ನ್ಯೂಸ್ ಆ್ಯರೋ : ಸಂಜೆಯ ಹೊತ್ತು ಯಾವ ಬೀದಿ, ಯಾವ ಪೇಟೆಯಲ್ಲಿ ನೋಡಿದರೂ ಪಾನಿ ಪುರಿ ಮಾರುವ ವ್ಯಕ್ತಿಯ ಸುತ್ತ ಹತ್ತಾರು ಜನ ಸೇರಿಸುತ್ತಾರೆ. ಕೆಲವೊಂದು ಕಡೆ ಜನ ಮುಗಿಬಿದ್ದು ಪಾನಿ ಪುರಿ ಸೇವಿಸುತ್ತಾರೆ. ಭಾಗಶಃ ಎಲ್ಲರೂ ಕೂಡ ಈ ತಿನಿಸನ್ನು ಇಷ್ಟ ಪಡುತ್ತಾರೆ. ಖಾರ-ಹುಳಿ ಸೇರಿ ಬಾಯಿಗೊಂದು ಅದ್ಭುತ ರುಚಿ ನೀಡುವ ಈ ತಿನಿಸನ್ನು ಇಷ್ಟ ಪಡದವರೇ ಇಲ್ಲ. ಆದರೆ ಈ ಪಾನಿ ಪುರಿಯೊಂದಿಗೆ ನೀಡುವ ರುಚಿಯಾದ ನೀರು ಹೇಗೆ ತಯಾರಿಸುತ್ತಾರೆ ಎಂಬುದನ್ನು ಎಂದಾದರೂ ನೀವು ಯೋಚಿಸಿದ್ದೀರಾ? ಇಲ್ಲಾ ಎಂದಾದರೆ ಈ ವೈರಲ್ ವಿಡಿಯೋ ನೋಡಿದ ಬಳಿಕ ಇನ್ನು ಮುಂದೆ ಪಾನಿ ಪುರಿ ತಿನ್ಬೇಕಾ, ಬೇಡ್ವಾ ಅಂತ ನಿರ್ಧಾರ ಮಾಡಿ.
ಹೇಗೆ ತಯಾರಾಗುತ್ತೆ Street vendor caught on cam using toilet water to prepare panipuri?
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಪಾನಿಪುರಿಯ ನೀರನ್ನು ಯಾವ ರೀತಿಯಲ್ಲಿ ತಯಾರಿಸಲಾಗುತ್ತದೆ ಎನ್ನುವ ವಿಡಿಯೋ ಇದಾಗಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಪಾನೀಪುರಿ ನೀರನ್ನು ತಯಾರಿಸುತ್ತಿರುವುದನ್ನು ಕಾಣಬಹುದು. ಮೊದಲು ಹಸಿರು ಸೊಪ್ಪು ಮತ್ತು ಮೆಣಸಿನಕಾಯಿಗಳೊಂದಿಗೆ ದಪ್ಪ ಪೇಸ್ಟ್ ಅನ್ನು ತಯಾರಿಸುತ್ತಿದ್ದಾರೆ. ನಂತರ ಆ ಪೇಸ್ಟ್ ಅನ್ನು ಹದ ಮಾಡಲು ಹೆಚ್ಚಿನ ನೀರು ಸೇರಿಸುವುದನ್ನು ಕಾಣಬಹುದು. ನಂತರ ಹುಣಸೆಹಣ್ಣು ಮತ್ತು ನೀರು ಸೇರಿಸಿ ರುಬ್ಬುವುದನ್ನು ಕೂಡಾ ಕಾಣಬಹುದು.
ಇಲ್ಲಿ ಪಾನೀಪುರಿ ನೀರನ್ನು ತಯಾರಿಸುವ ಸಂಪೂರ್ಣ ಪ್ರಕ್ರಿಯೆ ಬರಿಗೈಯ್ಯಲ್ಲಿಯೇ ಸಾಗುತ್ತದೆ. ಈ ಎಲ್ಲಾ ಪೇಸ್ಟ್ ಗಳನ್ನು ಜೊತೆಯಾಗಿ ಮಿಶ್ರಣ ಮಾಡಿ ನಂತರ ಅದಕ್ಕೆ ಟ್ಯಾಪ್ ನೀರನ್ನು ಸೇರಿಸಲಾಗುತ್ತದೆ.
ವಿಡಿಯೋ ಸಖತ್ ವೈರಲ್..!
@yummybites_kt ಎಂಬ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದ್ದು, ವೀಡಿಯೊ ಬಿಡುಗಡೆಯಾದಾಗಿನಿಂದ 1.8 ಮಿಲಿಯನ್ ಬಾರಿ ಈ ವಿಡಯೋ ವೀಕ್ಷಿಸಲ್ಪಟ್ಟಿದೆ. ಪಾನಿ ಪೂರಿ ನೀರನ್ನು ತಯಾರಿಸುವ ಬಗೆಗಿಬ ನೋಡಿ ನೆಟ್ಟುಗರು ತರಹೇವಾರಿ ಕಮೆಂಟ್ ಗಳನ್ನು ಹಾಕುತ್ತಿದ್ದಾರೆ. ಹಿಂದೊಮ್ಮೆ ಪಾನಿಪುರಿ ತಯಾರಿಸುವ ವಿಡಿಯೋ ವೈರಲ್ ಆಗಿತ್ತು. ಇದೀಗ ಪಾನಿಪುರಿಯ ನೀರು ತಯಾರಿಸುವ ವಿಡಿಯೋ ವೈರಲ್ ಆಗುತ್ತಿದೆ.