ಕ್ರಿಕೆಟಿಗನ ಪ್ರೀತಿ ನಂಬಿ 30ನೇ ವಯಸ್ಸಿಗೆ ತಾಯಿಯಾದ ನಟಿ ಇವರೇ ನೋಡಿ..! – ಮದುವೆಯಾಗದೇ ಗರ್ಭಿಣಿಯಾಗಿದ್ದ ಈ ನಟಿ ಯಾರು ಗೊತ್ತಾ?

ಕ್ರಿಕೆಟಿಗನ ಪ್ರೀತಿ ನಂಬಿ 30ನೇ ವಯಸ್ಸಿಗೆ ತಾಯಿಯಾದ ನಟಿ ಇವರೇ ನೋಡಿ..! – ಮದುವೆಯಾಗದೇ ಗರ್ಭಿಣಿಯಾಗಿದ್ದ ಈ ನಟಿ ಯಾರು ಗೊತ್ತಾ?

ನ್ಯೂಸ್ ಆ್ಯರೋ : ಸಿನಿಮಾಗಳಂತೆ ಅಲ್ಲ ನೈಜ ಬದುಕು. ಕೆಲವೊಮ್ಮೆ ನಾವು ಏನು ಅಂದುಕೊಳ್ಳುತ್ತೇವೆಯೋ ಅದಕ್ಕೆ ವಿರುದ್ಧವಾಗಿಯೇ ಆಗುತ್ತಿರುತ್ತದೆ‌. ನಂಬಿ ಬಂದು ಹೆತ್ತವರನ್ನು ದೂರ ಮಾಡಿ ಬದುಕು ಕಟ್ಟಿಕೊಳ್ಳುವ ಆಸೆಯಿಂದ ಕೊನೆಗೆ ಕನಿಷ್ಠ ಪ್ರೀತಿಯೂ ಸಿಗದೆ ಲೈಫ್ ಹಾಳು ಮಾಡಿಕೊಳ್ಳುವ ಯುವತಿಯರ ಸಾಲಿಗೆ ಸೆಲೆಬ್ರೆಟಿಗಳೂ ಸೇರ್ತಾರೆ ಬಿಡಿ. ಈ ಪೈಕಿ ನಟಿಯೊಬ್ಬರು ಕ್ರಿಕೆಟಿಗನ ಪ್ರೀತಿಯ ಬಲೆಗೆ ಬಿದ್ದು, ಮದುವೆಯಾಗದೇ ಗರ್ಭಿಣಿಯಾಗಿ ಮಗುವಿನ ಜನ್ಮ ನೀಡಿದ್ದರು. ಯಾರು ಆ ನಟಿ, ಏನ್‌ ಕಥೆ..? ಇಲ್ಲಿದೆ ನೋಡಿ

ಹಿರಿಯ ನಟಿ ನೀನಾ ಗುಪ್ತಾ ಅವರ ವೈಯಕ್ತಿಕ ಜೀವನ ಬಹಳ ರೋಚಕ. 80ರ ದಶಕದಲ್ಲಿ, ನಟಿ ಎಲ್ಲರಿಗೂ ಆಘಾತ ನೀಡುವ ನಿರ್ಧಾರವನ್ನು ತೆಗೆದುಕೊಂಡಿದ್ದರು. ಅದರ ನಂತರ, ಅವರು ಮದುವೆಯಿಲ್ಲದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಅವರ ಈ ನಿರ್ಧಾರಕ್ಕೆ ಕುಟುಂಬಸ್ಥರು ಕೂಡ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಬಾಲಿವುಡ್‌ನ ಹಿರಿಯ ನಟಿ ನೀನಾ ಗುಪ್ತಾ ಮದುವೆಯಾಗದೇ ಗರ್ಭಿಣಿಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಅದಕ್ಕಾಗಿಯೇ ಅನಿಸುತ್ತೆ ಅವರು ಇಂದಿಗೂ ತಮ್ಮ ನೇರ ಮತ್ತು ಸ್ಪಷ್ಟ ಮಾತುಗಳಿಂದ ಜನಮನದಲ್ಲಿ ಉಳಿದಿದ್ದಾಳೆ.

ನೀನಾ ಗುಪ್ತ ಅಫೇರ್ ಹೊಂದಿದ್ದು ಯಾರ್ ಜೊತೆ ಗೊತ್ತಾ..?

ವೆಸ್ಟ್ ಇಂಡೀಸ್ ಕ್ರಿಕೆಟಿಗ ವಿವಿಯನ್ ರಿಚರ್ಡ್ ಜೊತೆ ನೀನಾ ಗುಪ್ತಾ ಅಫೇರ್ ಹೊಂದಿದ್ದರು. ವಿವಿಯನ್‌ಗೆ ಮುಂಚೆಯೇ ಮದುವೆಯಾಗಿದ್ದ ಕಾರಣ ನೀನಾಳನ್ನು ಮದುವೆಯಾಗಲು ಅವರು ನಿರಾಕರಿಸಿದರು. ವಿವಿಯನ್ ಮದುವೆಗೆ ಬೇಡ ಅಂದ್ರೂ ಸಹ ನೀನಾ ತನ್ನ ಗರ್ಭಾವಸ್ಥೆಯನ್ನು ಮುಂದುವರೆಸಿದ್ದರು. ತಾನು ಗರ್ಭಿಣಿಯಾಗಿದ್ದಾಗಿ ವಿವಿಯನ್‌ಗೂ ಸಹ ತಿಳಿಸಿದ್ದರಂತೆ.

ಇನ್ನು ನೀನಾಗೂ ಸಹ ಈ ಮಗು ಬೇಕಿತ್ತು. ಅದಕ್ಕಾಗಿ ಅವರು ಸಮಾಜದ ನಾಲ್ಕು ಜನರ ಬಗ್ಗೆ ಯೋಚಿಸದೆ ತನ್ನ ಮತ್ತು ತನ್ನ ಭವಿಷ್ಯದ ಮಗುವಿನ ಬಗ್ಗೆ ಯೋಚಿಸಿ 1989 ರಲ್ಲಿ ʼಮಸಾಬಾʼ ಎಂಬ ಹೆಣ್ಣು ಮಗುವಿಗೆ ಜನ್ಮ ನೀಡಿ ಸಿಂಗಲ್ ಪೇರೆಂಟ್ ಆಗಿ ಬೆಳೆಸಿದರು. ಅವರ ಈ ನಿರ್ಧಾರವನ್ನು ಕುಟುಂಬಸ್ಥರು ವಿರೋಧಿಸಿದ್ದರೂ ಸಹ ಅವರ ತಂದೆ ಅವರ ನಿರ್ಧಾರವನ್ನು ಬೆಂಬಲಿಸಿದರು ಎಂದು ನಟಿ ನೀನಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಒಟ್ಟಿನಲ್ಲಿ ಪ್ರಪಂಚ ಎಷ್ಟು ಮುಂದುವರೆದರೇನು ಬಂತು ಫಲ…ಇವತ್ತಿಗೂ ಇಂತಹ ಕಷ್ಟ- ಸವಾಲುಗಳನ್ನು ಮಹಿಳೆಯರು ಎದುರಿಸುತ್ತಿರುವುದು ವಿಪರ್ಯಾಸ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *