ಭೂಮಿಗೆ ಹತ್ತಿರವಾಗಲಿದೆ ಹಸಿರು ಧೂಮಕೇತು – 50,000 ವರ್ಷಗಳ ನಂತರ ನಡೆಯಲಿದೆ ಅಪರೂಪದ ವಿದ್ಯಮಾನ..!!

ಭೂಮಿಗೆ ಹತ್ತಿರವಾಗಲಿದೆ ಹಸಿರು ಧೂಮಕೇತು – 50,000 ವರ್ಷಗಳ ನಂತರ ನಡೆಯಲಿದೆ ಅಪರೂಪದ ವಿದ್ಯಮಾನ..!!

ನ್ಯೂಸ್ ಆ್ಯರೋ : ತಾರಾಮಂಡಲ ಅನ್ನುವುದು ಮನುಷ್ಯನಿಗೆ ಬಗೆಹರಿಸಲು ಆಗದ ಒಂದು ದೈತ್ಯ‌ ಆಗರ. ಹೊಸ ಹೊಸ ವಿದ್ಯಮಾನಗಳು ಗೋಚರಿಸುವಾಗ ನಾವೆಲ್ಲರೂ ಮೂಕ ವಿಸ್ಮಿತರಾಗಿ ನೋಡುತ್ತೇವೆ. ಇದೀಗ, ಅಂತಹದ್ದೊಂದು ವಿದ್ಯಮಾನಕ್ಕೆ ಜಗತ್ತು ಸಾಕ್ಷಿಯಾಗಲಿದೆ.

ಹೌದು, ಬರೊಬ್ಬರಿ 50,000 ವರ್ಷಗಳ ನಂತರ ಹಸಿರು ಧೂಮಕೇತುವೊಂದು ಭೂಮಿಗೆ ಅತ್ಯಂತ ಹತ್ತಿರಲ್ಲಿ ಗೋಚರಿಸಲಿದೆ. ಈ ಬಗ್ಗೆ ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ‌ ಸಂಸ್ಥೆ ನಾಸಾ ಸ್ಪಷ್ಟನೆ ನೀಡಿದೆ‌. ನಾಸಾ ವರದಿಯ ಪ್ರಕಾರ ಈ ಹಸಿರು ಧೂಮಕೇತು ನಿಯಾಂಡರ್ತಾಲ್ ಆದಿ ಮಾನವ ಭೂಮಿಯ ಮೇಲೆ ವಾಸವಿದ್ದ 50 ಸಾವಿರ ವರ್ಷಗಳ ಹಿಂದೆ ಘಟಿಸಿತ್ತು.

ಇದೇ, ಫೆಬ್ರವರಿ1 ರಂದು ಮತ್ತೆ ಈ ಹಸಿರು ಧೂಮಕೇತು ಭೂಮಿಯಿಂದ 26 ಮಿಲಿಯನ್ ಮೈಲುಗಳ ಅಂತರದಲ್ಲಿ ಹಾದು ಹೋಗಲಿದೆ. ಈ ವಿದ್ಯಮಾನ ಧೂಮಕೇತುಗಳ ಬಗೆಗಿನ‌ ಇನ್ನಷ್ಟು ಅಧ್ಯಯನಗಳಿಗೆ ನೆರವಾಗಲಿದೆ ಎಂದು ನಾಸಾ ತಿಳಿಸಿದೆ.

ಈ ಅಪರೂಪದ ಹಸಿರು ಧೂಮಕೇತುವನ್ನು‌ ಕಳೆದ ವರ್ಷ ವಿಜ್ಞಾನಿಗಳು ಪತ್ತೆ ಹಚ್ಚಿದ್ದರು. ಆ ಸಮಯದಲ್ಲಿ ಈ ಧೂಮಕೇತು ಗುರುಕಕ್ಷೆಯಲ್ಲಿತ್ತು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಸದ್ಯ ಧೂಮಕೇತು ಆಕರ್ಷಕವಾಗಿ ಹಸಿರು ಬಣ್ಣದಿಂದ ಹೊಳೆಯುತ್ತಿದ್ದು, ಈ ವಿದ್ಯಮಾನ ಮುಂದುವರೆದರೆ ಸಾಮಾನ್ಯ ದುರ್ಬಿನ್ ಮೂಲಕವು ಇದನ್ನು ವೀಕ್ಷಸಬಹುದಾಗಿದೆ ಎಂದಿದ್ದಾರೆ.

ಈ ಧೂಮಕೇತುಗಳು ಸೂರ್ಯನ ಸುತ್ತ ಸುತ್ತುವ ಘನೀಕೃತ ಅನಿಲಗಳು, ಬಂಡೆಗಳು ಮತ್ತು ಧೂಳಿನಿಂದ ಮಾಡಲ್ಪಟ್ಟ ಕಾಸ್ಮಿಕ್ ಸ್ನೋಬಾಲ್‌ಗಳಾಗಿವೆ. ಗಾತ್ರದಲ್ಲಿ ಚಿಕ್ಕದಾಗಿದ್ದರೂ, ಸೂರ್ಯನ ಹತ್ತಿರ ಬಂದಾಗ ಅವು ಬಿಸಿಯಾಗುತ್ತವೆ ಮತ್ತು ಅನಿಲಗಳು ಮತ್ತು ಧೂಳಿನ ಬೃಹತ್ ಬಾಲವನ್ನು ಸೃಷ್ಟಿಸುತ್ತವೆ ಎಂದು ವಿಜ್ಞಾನಿಗಳು‌ ಮಾಹಿತಿ‌ ನೀಡಿದ್ದಾರೆ‌.

ಸದ್ಯ, ನಾಸಾ ವಿಜ್ಞಾನಿಗಳೊಂದಿಗೆ ಇಡೀ ಭೂಗೋಳ ವಲಯ 50 ವರ್ಷಗಳ‌ ನಂತರ ಘಟಿಸುತ್ತಿರುವ ಈ ಅಪರೂಪದ ವಿದ್ಯಮಾನವನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ‌ ನಿಂತಿದೆ. ಜೊತೆಗೆ‌ ಈ ಅವಧಿಯ ಸಂಶೋಧನೆಯಿಂದಾಗಿ ದೀರ್ಘ ಅವಧಿಯ ಧೂಮಕೇತುಗಳ ರಚನೆ, ಸೂರ್ಯನೊಂದಿಗಿನ ಅವುಗಳ ಸಂಬಂಧ ಸೇರಿದಂತೆ ಇತರೆ ಸಂಗತಿಗಳ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯಲಿದೆ ಎಂದು ನಾಸಾ ಹೇಳಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *