ಟ್ವಿಟರ್ ಸಾಮ್ರಾಜ್ಯಕ್ಕೆ ಹೊಸ ಮಹಿಳಾ ಸಿಇಒ ಎಂಟ್ರಿ – ಎಲಾನ್ ಮಸ್ಕ್ ಇಷ್ಟೆಲ್ಲಾ ಹುಡುಕಾಡಿ ಪಡೆದ ಈ ಮಹಿಳೆ ಯಾರು ಗೊತ್ತಾ?
- ಟೆಕ್ ನ್ಯೂಸ್
- May 17, 2023
- No Comment
- 110
ನ್ಯೂಸ್ ಆ್ಯರೋ : ಕಳೆದ ವರ್ಷ 44 ಶತಕೋಟಿ ಡಾಲರ್ಗೆ ಟ್ವಿಟರ್ ಅನ್ನು ಖರೀದಿಸಿದ್ದ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಕೊನೆಗೂ ಹೊಸ ಸಿಇಒ ಅನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಎನ್ಬಿಸಿ ಯುನಿವರ್ಸಲ್ ಜಾಹೀರಾತು ವಿಭಾಗದ ಮಾಜಿ ಮುಖ್ಯಸ್ಥೆ ಲಿಂಡಾ ಯಾಕರಿನೊ ಟ್ವಿಟ್ಟರ್ನ ಹೊಸ ಸಿಇಒ ಆಗಿ ನೇಮಕವಾಗಿದ್ದಾರೆ.
”ನಾನು ಲಿಂಡಾ ಯಾಕರಿನೋ ಅವರನ್ನು ಟ್ವಿಟ್ಟರ್ನ ಹೊಸ ಸಿಇಒ ಆಗಿ ಸ್ವಾಗತಿಸಲು ಉತ್ಸುಕನಾಗಿದ್ದೇನೆ. ಯಾಕರಿನೊ ಪ್ರಾಥಮಿಕವಾಗಿ ವ್ಯಾಪಾರ ಕಾರ್ಯಾಚರಣೆಗಳ ಮೇಲೆ ಗಮನಹರಿಸಿದರೆ, ನಾನು ಉತ್ಪನ್ನ ವಿನ್ಯಾಸ ಹಾಗೂ ಹೊಸ ತಂತ್ರಜ್ಞಾನದ ಮೇಲೆ ಗಮನಹರಿಸುತ್ತೇನೆ” ಎಂದು ಮಸ್ಕ್ ಹೇಳಿದ್ದಾರೆ. ಯಾಕರಿನೊ ಎನ್ಬಿಸಿಯಲ್ಲಿ ತನ್ನ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.
ಹಲವು ತಿಂಗಳುಗಳ ಹಿಂದೆಯೇ ಎಲೋನ್ ಮಸ್ಕ್ ಟ್ವಿಟ್ಟರ್ಗೆ ಹೊಸ ಸಿಇಒ ಹುಡುಕುತ್ತಿರುವುದಾಗಿ ಹೇಳಿದ್ದರು. ”ಯಾರಾದರೂ ಮೂರ್ಖತನ ಹೊಂದಿದವರು ಟ್ವಿಟರ್ ಸಿಇಒ ಹುದ್ದೆ ವಹಿಸಿಕೊಂಡ ತಕ್ಷಣ ನಾನು ರಾಜೀನಾಮೆ ನೀಡುತ್ತೇನೆ” ಎಂದು ತಮಾಷೆ ಮಾಡಿದ್ದರು.
ಮಸ್ಕ್ ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಂಡ ಬಳಿಕ ಹಲವು ಬದಲಾವಣೆಗಳನ್ನು ತಂದಿದ್ದಾರೆ. ಕಳೆದ ವರ್ಷ ಕಂಪೆನಿಯ ಸುಮಾರು ಶೇ. 80ರಷ್ಟು ಉದ್ಯೋಗಿಗಳನ್ನು ವಜಾ ಮಾಡಿದ್ದರು. ಮಾತ್ರವಲ್ಲದೇ ಉದ್ಯೋಗಿಗಳಿಗೆ ಹೆಚ್ಚುವರಿ ಸಮಯ ಕೆಲಸ ಮಾಡುವಂತೆ ಆದೇಶಿಸಿದ್ದರು. ಇತ್ತೀಚೆಗೆ ಟ್ವಿಟರ್ ಖಾತೆಗಳಲ್ಲಿ ಬಳಕೆದಾರರು ಬ್ಲೂ ಟಿಕ್ ಪಡೆಯಲು ಪಾವತಿಸುವ ಕ್ರಮವನ್ನು ಜಾರಿಗೆ ತರಲಾಗಿದೆ.