ಮುಜುಗರದಿಂದ ಪಾರು ಮಾಡುತ್ತದೆ “ಆ್ಯಕ್ಸಿಡೆಂಟಲ್ ಡಿಲೀಟ್’ ಫೀಚರ್ –
ತಪ್ಪಾಗಿ ಡಿಲೀಟ್ ಫಾರ್ ಮೀ ಕೊಟ್ಟಿದ್ರೂ ಡಿಲೀಟ್ ಫಾರ್ ಎವ್ರಿವನ್ ಅವಕಾಶ ಇದೆ : ಹೇಗೆ ಗೊತ್ತಾ..!?
- ಟೆಕ್ ನ್ಯೂಸ್
- January 1, 2023
- No Comment
- 142
ನ್ಯೂಸ್ ಆ್ಯರೋ : ವಾಟ್ಸಾಪ್ನಲ್ಲಿ ತಪ್ಪಾಗಿ ಯಾರಿಗೋ ಕಳುಹಿಸುವ ಸಂದೇಶವನ್ನು ಮತ್ಯಾವುದೋ ವಾಟ್ಸ್ಆ್ಯಪ್ ಗ್ರೂಪ್ಗೆ ಕಳುಹಿಸಿ ಪೇಚಿಗೆ ಸಿಲುಕುವುದು ಸಾಮಾನ್ಯ.
ಕೂಡಲೇ ನಾವು ಡಿಲೀಟ್ ಮಾಡುವ ಭರದಲ್ಲಿ “ಡಿಲೀಟ್ ಫಾರ್ ಎವ್ರಿವನ್’ ಆಯ್ಕೆಯನ್ನು ಒತ್ತುವ ಬದಲು, “ಡಿಲೀಟ್ ಫಾರ್ ಮಿ’ ತಪ್ಪಾಗಿ ಒತ್ತುತ್ತೇವೆ. ಆಗ ನಿಮಗೆ ಮಾತ್ರ ಮೆಸೇಜ್ ಡಿಲೀಟ್ ಆಗಿ ಉಳಿದವರಿಗೆ ಎಲ್ಲರಿಗೂ ಕಾಣುತ್ತದೆ. ಈ ಸಮಸ್ಯೆಯನ್ನು ಬಗೆಹರಿಸಲು ವಾಟ್ಸಾಪ್ ಮತ್ತೊಂದು ಆಯ್ಕೆಯನ್ನು ನೀಡಿದೆ.
ಈ ಪೀಚರ್ನ ಅನುಸಾರ ನೀವು ಮೆಸೇಜ್ ಡಿಲೀಟ್ ಮಾಡಿದ ಕೂಡಲೇ ನಿಮಗೆ ತಪ್ಪು ಸರಿಪಡಿಸಲು “5 ಸೆಕೆಂಡು’ಗಳ ಕಾಲಾವಕಾಶ ಸಿಗಲಿದೆ. ಮೆಸೇಜ್ ಡಿಲೀಟ್ ಆದ ಜಾಗದಲ್ಲೇ ಒಂದು ಪುಟ್ಟ ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. ಅದರಲ್ಲಿ “ಅನ್ಡೂ'(UNDO) ಎಂಬ ಬಟನ್ ಕಾಣಿಸಿಕೊಳ್ಳುತ್ತದೆ.
ಆ ಬಟನ್ ಕ್ಲಿಕ್ ಮಾಡಿದಾಗ ಆಗಷ್ಟೇ ಡಿಲೀಟ್ ಮಾಡಿದ ಸಂದೇಶ ಕಾಣುತ್ತದೆ. ಇಲ್ಲಿ ಜಾಗರೂಕರಾಗಿ “ಡಿಲೀಟ್ ಫಾರ್ ಎವ್ರಿವನ್’ ಎಂಬ ಆಯ್ಕೆಯನ್ನು ಒತ್ತಬೇಕು.
ನಂತರ ಆ ಗ್ರೂಪ್ನಲ್ಲಿರುವ ಎಲ್ಲರಿಗೂ ಸಂದೇಶ ಡಿಲೀಟ್ ಆಗುತ್ತದೆ. ಈ ಹೊಸ ಫೀಚರ್ಗೆ ವಾಟ್ಸ್ಆ್ಯಪ್ “ಆ್ಯಕ್ಸಿಡೆಂಟಲ್ ಡಿಲೀಟ್’ ಎಂದು ಹೆಸರಿಟ್ಟಿದೆ.