ಇಂತಹ ಸಂಖ್ಯೆಗಳಿಂದ ಆಗಾಗ ಮಿಸ್ ಕಾಲ್ ಬರ್ತಿದ್ಯಾ…? – ಹಾಗಾದ್ರೆ ವಾಟ್ಸಾಪ್ ಬಳಕೆದಾರರೇ ಹುಷಾರ್..!!

ಇಂತಹ ಸಂಖ್ಯೆಗಳಿಂದ ಆಗಾಗ ಮಿಸ್ ಕಾಲ್ ಬರ್ತಿದ್ಯಾ…? – ಹಾಗಾದ್ರೆ ವಾಟ್ಸಾಪ್ ಬಳಕೆದಾರರೇ ಹುಷಾರ್..!!

ನ್ಯೂಸ್ ಆ್ಯರೋ : ತಂತ್ರಜ್ಞಾನ ಮುಂದುವರೆಯುತ್ತಾ ಹೋದಂತೆ ಸೈಬರ್ ಕ್ರೈಮ್ ಪ್ರಕರಣಗಳು ಕೂಡಾ ಹೆಚ್ಚಾಗುತ್ತಲೇ ಇರುತ್ತದೆ. ತಂತ್ರಜ್ಞಾನ ಜಗತ್ತಿನ ಎಲ್ಲಾ ಮಾಹಿತಿಯನ್ನು ಬೆರಳ ತುದಿಗೆ ತಂದಿಡುತ್ತಿದೆ. ಮತ್ತೊಂದೆಡೆ, ನಮ್ಮೆಲ್ಲಾ ಮಾಹಿತಿಗೆ ಕನ್ನ ಹಾಕುವ, ವಂಚನೆ ಎಸಗುವ ಪ್ರಯತ್ನಗಳೂ ನಿತ್ಯ ಸಾಗುತ್ತಿವೆ. ಇದರ ಭಾಗವಾಗಿಯೇ ಇತ್ತೀಚಿನ ದಿನಗಳಲ್ಲಿ ಆನ್‌ಲೈನ್​ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದೆ.

ತಂತ್ರಜ್ಞಾನದ ಮೂಲಕವೇ ಸೈಬರ್​ ಅಪರಾಧಿಗಳು ಜನರನ್ನು ಮೋಸ ಮಾಡಲು ವಿವಿಧ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅದರಲ್ಲೂ ಜನಪ್ರಿಯ ವಾಟ್ಸ್‌ಆ್ಯಪ್​ ಮೂಲಕ ಹೊಸದಾಗಿ ವಂಚನೆ ಪ್ರವೃತ್ತಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್​ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯುರೋ (ಬಿಪಿಆರ್​ಡಿ) ಬಳಕೆದಾರರಿಗೆ ಎಚ್ಚರಿಕೆ ನೀಡಿದೆ.

ಈ ಸಂಖ್ಯೆಗಳಿಂದ ಮಿಸ್‌ ಕಾಲ್‌ ಬರುತ್ತಿದೆಯೇ?

ಬಳಕೆದಾರರಿಗೆ ಅನೇಕ ಬಾರಿ ವಾಟ್ಸ್‌ಆ್ಯಪ್​ನಲ್ಲಿ ಅಪರಿಚಿತ ನಂಬರ್​ನಿಂದ ಮಿಸ್ಡ್​​ಕಾಲ್​ಗಳು ಬರುತ್ತವೆ. ಒಂದೆರಡು ಬಾರಿ ರಿಂಗ್​ ಆದ ಬಳಿಕ ಈ ಕರೆಗಳು ಕಟ್​ ಆಗುತ್ತವೆ. ಇಂಥವು ಹ್ಯಾಕರ್​ಗಳು ಮಾಡುವ ಕರೆಗಳಾಗಿದೆ. ಈ ರೀತಿ ಕರೆ ಮಾಡುವ ಮೂಲಕ ವಾಟ್ಸ್‌ಆ್ಯಪ್​​ ಅನ್ನು ಪತ್ತೆ ಮಾಡಿ, ವಿವಿಧ ಮಾರ್ಗವಾಗಿ ಅವರಿಗೆ ಸೈಬರ್​​ ಬೆದರಿಕೆ ಒಡ್ಡುವ ಪ್ರಯತ್ನ ನಡೆಯುತ್ತಿದೆ.

ಈ ಮಿಸ್​​ ಕಾಲ್​​​ಗಳು ಸಾಮಾನ್ಯವಾಗಿ +254, +63, +1(218) ಈ ಆರಂಭಿಕ ಸಂಖ್ಯೆಗಳಿಂದ ಪ್ರಾರಂಭವಾಗುತ್ತವೆ. ಈ ಸಂಖ್ಯೆಗಳು ವಿಯೆಟ್ನಾಂ, ಕೀನ್ಯಾ, ಇಥಿಯೋಪಿಯಾ ಮತ್ತು ಮಲೇಷ್ಯಾ ದೇಶಗಳಿಂದ ಬರುತ್ತವೆ. ಹೀಗಾಗಿ ಮಿಸ್​ ಕಾಲ್​/ಈ ಸಂಖ್ಯೆಯಿಂದ ಕರೆ ಬಂದಾಗ ಹೆಚ್ಚು ಜಾಗ್ರತೆ ವಹಿಸುವಂತೆ ಬಿಪಿಆರ್​ಡಿ ತಿಳಿಸಿದೆ.

ಕಾಲ್ ಮಾಡಿ ಯಾವೆಲ್ಲ ಕಾರಣ ಕೊಟ್ಟು ವಂಚಿಸ್ತಾರೆ ಗೊತ್ತಾ..?

  1. ಉದ್ಯೋಗದ ಆಮಿಷ: ಸೈಬರ್​ ವಂಚಕರು ಬಹುತೇಕ ಬಾರಿ ಉತ್ತಮ ವೇತನದೊಂದಿಗಿನ ಉದ್ಯೋಗ ಭರವಸೆಯ ಸಂದೇಶಗಳನ್ನು ಕಳುಹಿಸುತ್ತಾರೆ. ಯಾವುದೇ ಡಿಪಿ ಇಲ್ಲದ ವಾಟ್ಸ್‌ಆ್ಯಪ್​ ನಂಬರ್​​ಗಳಿಂದ ಪೂರ್ಣಕಾಲಿಕ, ಅರೆಕಾಲಿಕ, ವರ್ಕ್​ ಫ್ರಮ್​ ಹೋಮ್‌ ಉದ್ಯೋಗದ ಆಮಿಷ ತೋರಿಸುತ್ತಾರೆ. ಇಂತಹ ಸಂದೇಶಗಳಿಗೆ ಅಪ್ಪಿತಪ್ಪಿಯೂ ಪ್ರತಿಕ್ರಿಯಿಸಬೇಡಿ ಎಂದು ಬಿಪಿಆರ್​ಡಿ ಹೇಳಿದೆ.
  2. ಬ್ಯಾಂಕ್​ ಮಾಹಿತಿಗೆ ಕನ್ನ: ವಾಟ್ಸ್‌ಆ್ಯಪ್‌ನಲ್ಲಿ ಸ್ಕ್ರೀನ್​ ಶೇರಿಂಗ್​ ಫೀಚರ್​ ಲಭ್ಯವಿದೆ. ವಿಡಿಯೋ ಕಾಲ್‌ನಲ್ಲಿ ಈ ಆಯ್ಕೆ ಸಿಗುತ್ತದೆ. ಬೇರೆ ವ್ಯಕ್ತಿ ನಿಮ್ಮ ಸ್ಕ್ರೀನ್​ ಹಂಚಿಕೊಳ್ಳುವ ಮೂಲಕ ಮಾಹಿತಿ ಪಡೆಯಬಹುದು. ಸೈಬರ್​​ ಅಪರಾಧಿಗಳು ಅಕೌಂಟ್​ ದಾಖಲಾತಿ ಮತ್ತು ಖಾಸಗಿ ಮಾಹಿತಿಯನ್ನು ಪಡೆಯಬಹುದು. ಇದರ ಹೊರತಾಗಿ ಕೆಲವು ಮಾಹಿತಿ ಕದಿಯುವ ಆ್ಯಪ್​ಗಳನ್ನು ಬಳಕೆದಾರರ ಫೋನ್‌ನಲ್ಲಿ ಅಳವಡಿಸಬಹುದು.
  3. ಟ್ರೇಡಿಂಗ್​ ಸಲಹೆ ನೀಡುವುದಾಗಿ ಮೋಸ ಅನೇಕರು ತಾವು ವ್ಯಾಪಾರದ ಕೌಶಲ್ಯ ಹೊಂದಿದ್ದು, ಇದರಲ್ಲಿ ಲಾಭ ಗಳಿಸಲು ಸಲಹೆ ನೀಡುವುದಾಗಿ ಸಂದೇಶ ಕಳುಹಿಸುತ್ತಾರೆ. ಅನಧಿಕೃತ ಅಪ್ಲಿಕೇಷನ್​ ಲಿಂಕ್​ ಕಳುಹಿಸಿ, ಅದರಲ್ಲಿ ಖಾತೆ ತೆರೆದು ಹಣದ ಹೂಡಿಕೆ ಮಾಡುವಂತೆ ಪ್ರೋತ್ಸಾಹಿಸುತ್ತಾರೆ. ಆರಂಭದಲ್ಲಿ ಬಳಕೆದಾರರಿಗೆ ಲಾಭ ತೋರಿಸಿ, ಮತ್ತಷ್ಟು ಹೂಡಿಕೆ ಮಾಡುವಂತೆ ಪ್ರೇರೇಪಿಸುತ್ತಾರೆ. ಇದನ್ನು ನಂಬಿ ಅನೇಕರು ಹೂಡಿಕೆ ಮಾಡುತ್ತಾರೆ. ಈ ರೀತಿ ಹೂಡಿಕೆ ಮಾಡಿದ ಮಂದಿ ಮತ್ತೆ ತಮ್ಮ ಖಾತೆ ತೆರೆದಾಗ ಮೋಸ ಹೋಗಿರುವುದು ಕಂಡು ಬರುತ್ತದೆ.

ಈ ರೀತಿಯ ಯಾವುದೇ ವಂಚನೆ ಪ್ರಕರಣಗಳ ಕುರಿತು ಹೆಚ್ಚಿನ ಮಾಹಿತಿಗೆ 4123ಗೆ ಕರೆ ಮಾಡಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.

Related post

Loksabha Results : ಗೆಲುವಿನ ಖಾತೆ ತೆರೆದ ಬಿಜೆಪಿ-ಜೆಡಿಎಸ್ ಮೈತ್ರಿಕೂಟ – ಚಾಮರಾಜನಗರ, ಹಾಸನ ಕಾಂಗ್ರೆಸ್ ಅಭ್ಯರ್ಥಿ ಭರ್ಜರಿ ಗೆಲುವು

Loksabha Results : ಗೆಲುವಿನ ಖಾತೆ ತೆರೆದ ಬಿಜೆಪಿ-ಜೆಡಿಎಸ್ ಮೈತ್ರಿಕೂಟ –…

ನ್ಯೂಸ್ ಆ್ಯರೋ : ಲೋಕಸಭಾ ಚುನಾವಣಾ ಮತ ಎಣಿಕೆ ನಡೆಯುತ್ತಿದ್ದು, ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಕೂಟ ಗೆಲುವಿನ ಖಾತೆ ತೆರೆದಿದೆ. ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಅವರು ಒಂದು ಲಕ್ಷಕ್ಕೂ ಅಧಿಕ…
Loksabha Results : ಸರಳ ಬಹುಮತ ಗಳಿಸುವಲ್ಲಿ ಎಡವುತ್ತಾ ಬಿಜೆಪಿ? – ದಕ್ಷಿಣ ಕನ್ನಡ, ಬೆಂ.ಗ್ರಾಮಾಂತರ ಉಡುಪಿಯಲ್ಲಿ ಬಿಜೆಪಿ ಭರ್ಜರಿ ಮುನ್ನಡೆ

Loksabha Results : ಸರಳ ಬಹುಮತ ಗಳಿಸುವಲ್ಲಿ ಎಡವುತ್ತಾ ಬಿಜೆಪಿ? –…

ನ್ಯೂಸ್ ಆ್ಯರೋ : ಲೋಕಸಭಾ ಚುನಾವಣೆಯ ಎಣಿಕೆ ಕಾರ್ಯ ಇನ್ನೂ ಮುಂದುವರಿದಿದ್ದು, ಆಡಳಿತಾರೂಢ ಬಿಜೆಪಿ ಪಕ್ಷ ಸರಳ ಬಹುಮತದ ಕೊರತೆ ಎದುರಿಸುವ ಆತಂಕಕ್ಕೆ ಸಿಲುಕಿದೆ. ಎಲ್ಲಾ ಮತಗಟ್ಟೆ ಸಮೀಕ್ಷೆಗಳನ್ನು…
ದಿನ‌ ಭವಿಷ್ಯ 04-06-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 04-06-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಬಸುರಿಯು ನೆಲದ ಮೇಲೆ ನಡೆದುಕೊಂಡು ಹೋಗುವಾಗ ವಿಶೇಷ ಕಾಳಜಿ ವಹಿಸಬೇಕು. ಇನ್ನೂ ಸಂಬಳ ಪಡೆಯದವರು, ಇಂದು ಅವರು ಹಣಕ್ಕಾಗಿ ತುಂಬಾ ಚಿಂತೆ ಮಾಡಬಹುದು ಮತ್ತು ನಿಮ್ಮ ಸ್ನೇಹಿತರಿಂದ ಸಾಲವನ್ನು…

Leave a Reply

Your email address will not be published. Required fields are marked *