ವೈದ್ಯರಿಂದ ಗುರುತಿಸಲಾಗದ ಕಾಯಿಲೆ ಚಾಟ್ ಜಿಪಿಟಿಯಿಂದ ಪತ್ತೆ – ತಾಯಿಯ ಜಾಣತನದಿಂದ ಮಗನ ನೋವಿಗೆ ಮುಕ್ತಿ..!!

ವೈದ್ಯರಿಂದ ಗುರುತಿಸಲಾಗದ ಕಾಯಿಲೆ ಚಾಟ್ ಜಿಪಿಟಿಯಿಂದ ಪತ್ತೆ – ತಾಯಿಯ ಜಾಣತನದಿಂದ ಮಗನ ನೋವಿಗೆ ಮುಕ್ತಿ..!!

ನ್ಯೂಸ್ ಆ್ಯರೋ : ಮೂರು ವರ್ಷಗಳಿಂದ 17 ವೈದ್ಯರೂ ಪತ್ತೆ ಹಚ್ಚಲು ಸಾಧ್ಯವಾಗದ ಮಗುವಿನ ನೋವಿನ ಸಮಸ್ಯೆಗೆ ಚಾಟ್ ಜಿಪಿಟಿ ಮೂಲಕ ಪರಿಹಾರ ದೊರಕಿದೆ.

ಮೂರು ವರ್ಷಗಳಿಂದ ಹಲ್ಲುನೋವಿನಿಂದ ಬಳಲುತ್ತಿದ್ದ ನಾಲ್ಕು ವರ್ಷದ ಬಾಲಕ ಅಲೆಕ್ಸ್ ನ ಸಮಸ್ಯೆಗೆ ಕಾರಣ ಏನು ಎಂಬುದನ್ನು ಪತ್ತೆ ಹಚ್ಚಲು ಯಾವ ವೈದ್ಯರಿಗೂ ಸಾಧ್ಯವಾಗಲಿಲ್ಲ. ಕೊನೆಗೆ ಆತನ ತಾಯಿ ಕೋರ್ಟ್ನೆ ಚಾಟ್ ಜಿಪಿಟಿ ಯ ಮೊರೆ ಹೋಗಿದ್ದು, ಅಲ್ಲಿ ಎಐ ತಂತ್ರಜ್ಞಾನವು ಅವರ ಸಮಸ್ಯೆಗೆ ಕಾರಣ ಏನೆಂಬುದನ್ನು ತಿಳಿಸಿದೆ. ಇದರಿಂದಾಗಿಯೇ ತಾವು ಸೂಕ್ತ ವೈದ್ಯರನ್ನು ಸಂಪರ್ಕಿಸಿ ಮಗನಿಗೆ ಚಿಕಿತ್ಸೆ ಕೊಡಿಸಲು ಸಾಧ್ಯವಾಯಿತು ಎಂಬುದನ್ನು ಅವರು ವಿವರಿಸಿದ್ದಾರೆ.

ಆರೋಗ್ಯವಾಗಿದ್ದ ಮಗನ ಬೆಳವಣಿಗೆ ಏಕಾಏಕಿ ನಿಂತಿದೆ ಮತ್ತು ಹಲ್ಲುಗಳು ಕರಾಗಲಾರಂಭಿಸಿದೆ. ಇದರಿಂದ ಅಸಾಧ್ಯ ನೋವನ್ನು ಆತ ಅನುಭವಿಸುತ್ತಿದ್ದ. ಇದಕ್ಕಾಗಿ ಅವನಿಗೆ ಪ್ರತಿದಿನ ನೋವು ನಿವಾರಕ ಔಷಧ ನೀಡಲೇಬೇಕಿತ್ತು.

ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಅಲೆಕ್ಸ್ ನೋವುಂಟು ಮಾಡುವ ವಸ್ತುಗಳನ್ನು ಅಗಿಯಲು ಪ್ರಾರಂಭಿಸಿ ಇದಕ್ಕೆ ಪರಿಹಾರ ಪಡೆಯಲು ಕೋರ್ಟ್ನೆ ವೈದ್ಯರ ಮೊರೆ ಹೋಗಿದ್ದಾರೆ. ಮೂರು ವರ್ಷಗಳ ಕಾಲ ಮಗನ ನೋವು ಮತ್ತು ಅವನು ಅನುಭವಿಸುತ್ತಿರುವ ಇತರ ರೋಗಲಕ್ಷಣಗಳಿಗೆ ಅವರಿಗೆ ಪರಿಹಾರ ಸಿಗಲಿಲ್ಲ.

ಹೀಗಾಗಿ ಅವರು ರಾತ್ರಿ ಪೂರ್ತಿ ಕಂಪ್ಯೂಟರ್ ಎದುರು ಕುಳಿತು ಮಗನ ಸಮಸ್ಯೆಗಳ ಬಗ್ಗೆ ಹುಡುಕಲಾರಂಭಿಸಿದರು. ಈ ನಡುವೆ ಅಲೆಕ್ಸ್ ಎತ್ತರಕ್ಕೆ ಬೆಳೆಯುವುದನ್ನು ನಿಲ್ಲಿಸಿದ್ದಾನೆ ಎಂದು ತಿಳಿದು ವೈದ್ಯರನ್ನು ಸಂಪರ್ಕಿಸಿದರು. ಅವರು ಇದು ಕೋವಿಡ್-19 ಪರಿಣಾಮ ಆಗಿರಬಹುದು ಎಂದು ಊಹಿಸಿದರು.

ಅನಂತರ ಸುಮಾರು 17 ವೈದ್ಯರನ್ನು ಭೇಟಿ ಮಾಡಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಕೋರ್ಟ್ನೆ ಅವರು ಮಗನಿಗೆ ಹಲ್ಲುನೋವು ಮತ್ತು ಬೆಳವಣಿಗೆ ಕುಂಠಿತವಾಗಲು ಕಾರಣವೇನು ಎಂಬುದನ್ನು ಚಾಟ್ ಜಿಪಿಟಿ ಸಹಾಯದಿಂದ ಪಡೆಯಲು ನಿರ್ಧರಿಸಿದರು.
ಚಾಟ್ ಜಿಪಿಟಿಯಲ್ಲಿ ರೋಗಲಕ್ಷಣಗಳನ್ನು ಹಂಚಿಕೊಂಡ ಅನಂತರ, ಅಲೆಕ್ಸ್ ಅಪರೂಪದ ನರವೈಜ್ಞಾನಿಕ ಸಮಸ್ಯೆಯಿಂದ ಬಳಲುತ್ತಿರುವುದು ತಿಳಿದುಬಂತು.

ಇದನ್ನು ಟೆಥರ್ಡ್ ಕಾರ್ಡ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಬಳಿಕ ಅವರು ಫೇಸ್‌ಬುಕ್ ಗ್ರೂಪ್ ಗೆ ಸೇರಿ ಇದೇ ರೀತಿಯ ಸಮಸ್ಯೆ ಇರುವವರೊಂದಿಗೆ ಮಾಹಿತಿ ಹಂಚಿಕೊಂಡರು.

ಬಳಿಕ ಅವರು ನರಶಸ್ತ್ರ ಚಿಕಿತ್ಸಕರನ್ನು ಭೇಟಿ ಮಾಡಿ ಮಗ ಟೆಥರ್ಡ್ ಕಾರ್ಡ್ ಸಿಂಡ್ರೋಮ್‌ನಿಂದ ಬಳಲುತ್ತಿದ್ದಾನೆ ಎಂದು ಹೇಳಿದರು. ಬಳಿಕ ವೈದ್ಯರು ಎಂಆರ್ ಐ ಮಾಡಿ ನೋಡಿದಾಗ ಕೋರ್ಟ್ನೆ ಹೇಳಿದ್ದು ದೃಢವಾಯಿತು. ಕೆಲವೇ ವಾರಗಳಲ್ಲಿ ಅಲೆಕ್ಸ್ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಈಗ ಆತ ಸಂಪೂರ್ಣ ಗುಣಮುಖವಾಗಿರುವುದಾಗಿ ಅವರು ಹೇಳಿದ್ದಾರೆ.

ಅಮೇರಿಕನ್ ಅಸೋಸಿಯೇಷನ್ ​​ಆಫ್ ನ್ಯೂರೋಲಾಜಿಕಲ್ ಸರ್ಜನ್ಸ್ ಪ್ರಕಾರ, ಬೆನ್ನುಹುರಿಯಲ್ಲಿರುವ ಅಂಗಾಂಶವು ಲಗತ್ತುಗಳನ್ನು ರೂಪಿಸಿದಾಗ ಟೆಥರ್ಡ್ ಕಾರ್ಡ್ ಸಿಂಡ್ರೋಮ್ ಸಂಭವಿಸುತ್ತದೆ. ಇದು ಬೆನ್ನುಹುರಿಯ ಚಲನೆಯನ್ನು ನಿರ್ಬಂಧಿಸಿ ದೇಹದ ಭಾಗವು ಅಸಹಜವಾಗಿ ಹಿಗ್ಗಿಸುತ್ತದೆ.

ವೈದ್ಯಕೀಯ ಸ್ಥಿತಿಯ ರೋಗನಿರ್ಣಯವನ್ನು ಕಂಡುಹಿಡಿಯಲು ಚಾಟ್ ಜಿಪಿಟಿ ಮೊರೆ ಹೋಗಿರುವುದು ಇದೇ ಮೊದಲ ಉದಾಹರಣೆ. ಮಾರ್ಚ್‌ನಲ್ಲಿ, ಟ್ವಿಟರ್ ಬಳಕೆದಾರರು ತಮ್ಮ ಸಾಕು ನಾಯಿಗೆ ಸರಿಯಾದ ರೋಗನಿರ್ಣಯವನ್ನು ಗುರುತಿಸಲು ವೈದ್ಯರಿಗೆ ಸಾಧ್ಯವಾಗದಿದ್ದರೂ ಎಐ ತಂತ್ರಜ್ಞಾನ ಹೇಗೆ ಸಹಾಯ ಮಾಡಿತ್ತು ಎಂಬುದನ್ನು ಹಂಚಿಕೊಂಡಿದ್ದರು.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *