ಐಫೋನ್ 16 ಬಗ್ಗೆ ಹೊರಬಿತ್ತು ನೋಡಿ ಮತ್ತೊಂದು ಶಾಕಿಂಗ್ ನ್ಯೂಸ್ – ಆ್ಯಪಲ್ ಕಂಪನಿಗೇ ಶಾಕ್ ನೀಡಿತು ಈ ಬೆಳವಣಿಗೆ..!!

ಐಫೋನ್ 16 ಬಗ್ಗೆ ಹೊರಬಿತ್ತು ನೋಡಿ ಮತ್ತೊಂದು ಶಾಕಿಂಗ್ ನ್ಯೂಸ್ – ಆ್ಯಪಲ್ ಕಂಪನಿಗೇ ಶಾಕ್ ನೀಡಿತು ಈ ಬೆಳವಣಿಗೆ..!!

ನ್ಯೂಸ್ ಆ್ಯರೋ : ಐಫೋನ್ ಮೊಬೈಲ್ ಮೇಲೆ ಎಲ್ಲರಿಗೂ ಒಂದು ರೀತಿಯ ಕ್ರೇಜ್, ಖರೀದಿಸಬೇಕೆಂಬ ಮೋಹ. ದುಬಾರಿ ಬೆಲೆಯ ಈ ಮೊಬೈಲ್ ಇದ್ರೆ ಶ್ರೀಮಂತಿಕೆಯ ಸಂಕೇತ ಎನ್ನುವಂತಾಗಿದೆ. ಮೊನ್ನೆ ಮೊನ್ನೆ ತಾನೇ ಐಫೋನ್ 15 ಪ್ರೊ ಮಾರುಕಟ್ಟೆಗೆ ಕಾಲಿಟ್ಟಿದೆ. ಇದೀಗ ಐಫೋನ್ 16 ಬಗ್ಗೆ ಮತ್ತೊಂದು ಶಾಕಿಂಗ್ ಸುದ್ದಿ ಕೇಳಿಬಂದಿದೆ.

ಐಫೋನ್ 16 ಫೀಚರ್ಸ್ ಸೋರಿಕೆ..!

ಆ್ಯಪಲ್ ಕಂಪನಿಯ ಮುಂದಿನ ಫೋನ್ ಐಫೋನ್ 16 ಸರಣಿ ಈ ಫೋನಿನ ತಯಾರಿ ಈಗಷ್ಟೆ ಆರಂಭವಾಗಲಿದೆ. ಹೀಗಿರುವಾಗ ಇದರ ಕೆಲ ಫೀಚರ್ಸ್ ಸೋರಿಕೆಯಾಗಿದೆ. ಐಫೋನ್ 16 ಸರಣಿ ಲಾಂಚ್ ಆಗಲು ಇನ್ನೂ ಸಾಕಷ್ಟು ಸಮಯವಿದ್ದರೂ ಇದೀಗ ಈ ಫೋನ್ ಗೆ ಸಂಬಂಧಿಸಿದ ಸುದ್ದಿಯೊಂದು ಟೆಕ್ ಮಾರುಕಟ್ಟೆಯಲ್ಲಿ ವೈರಲ್ ಆಗುತ್ತಿದೆ.

ಐಫೋನ್ 16 ನ ವೈಶಿಷ್ಟ್ಯಗಳಿಗೆ ಸಂಬಂಧಿಸಿದಂತೆ, ಕೆಲವು ಸೋರಿಕೆಗಳು ಸಖತ್ ಸೌಂಡ್ ಮಾಡುತ್ತಿದೆ. ವಿನ್ಯಾಸ, ಫೀಚರ್ಸ್ ಮತ್ತು ವಿಶೇಷಣಗಳ ಕುರಿತು ಕೆಲವು ಸುದ್ದಿಗಳು ಹರಿದಾಡುತ್ತಿದೆ. ಮುಂದಿನ ಐಫೋನ್ 16 ಸರಣಿಯಲ್ಲಿ ಐಫೋನ್ 16, ಐಫೋನ್ 16 ಪ್ರೊ, ಐಫೋನ್ 16 ಪ್ರೊ ಮ್ಯಾಕ್ಸ್ ಮತ್ತು ಐಫೋನ್ 16 ಪ್ಲಸ್ ಇರಲಿವೆ.

ಐಫೋನ್ 16 ಪ್ರೊ 6.3 ಇಂಚಿನ ಡಿಸ್​ಪ್ಲೇಯನ್ನು ಹೊಂದಿರುತ್ತದೆ, ಪ್ರೊ ಮ್ಯಾಕ್ಸ್ 6.9 ಇಂಚಿನ ಡಿಸ್ ಪ್ಲೇ, ಐಫೋನ್ 16 6.1 ಇಂಚಿನ ಡಿಸ್​ಪ್ಲೇ ಮತ್ತು ಐಫೋನ್ 16 ಪ್ಲಸ್ 6.7 ಇಂಚಿನ ಡಿಸ್​ಪ್ಲೇಯಿಂದ ಕೂಡಿರುತ್ತದೆ ಎಂದು ವರದಿಯಾಗಿದೆ.

ಅಲ್ಲದೇ ಸ್ಯಾಮ್​ಸಂಗ್ ನೀಡಿರುವ OLED ಸ್ಕ್ರೀನ್ ಈ ಸರಣಿಯ ಫೋನ್​ಗಳಲ್ಲಿ ಬಳಸಲಾಗುತ್ತದೆ ಎಂದು ಹೇಳಲಾಗಿದೆ. ಮೈಕ್ರೋ ಎಲ್ಇಡಿ ಡಿಸ್ಪ್ಲೇ ತಂತ್ರಜ್ಞಾನ ಇದರಲ್ಲಿರಲಿದೆ. ಐಫೋನ್ 16 ಸರಣಿಯು 3 ನ್ಯಾನೊಮೀಟರ್ A18 ಚಿಪ್ ಅನ್ನು ನೀಡುತ್ತದೆ. ಕ್ಯಾಮೆರಾಕ್ಕೆ ಸಂಬಂಧಿಸಿದಂತೆ, ಐಫೋನ್ 16 ಪ್ರೊ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ ‘ಟೆಟ್ರಾ-ಪ್ರಿಸ್ಮ್’ ಟೆಲಿಫೋಟೋ ಕ್ಯಾಮೆರಾವನ್ನು ಹೊಂದಿದೆ ಎಂದು ವದಂತಿಗಳಿವೆ.

ಅತ್ಯುತ್ತಮ ಫೋಟೋಗಳನ್ನು ತೆಗೆದುಕೊಳ್ಳಲು ಆಪ್ಟಿಕಲ್ ಜೂಮ್ ಅನ್ನು 3x ನಿಂದ 5x ಗೆ ಹೆಚ್ಚಿಸಲಾಗುತ್ತದಂತೆ. ಐಫೋನ್ 16 ಪ್ರೊ ಸರಣಿಗೆ ಬಳಸಲಾದ 48 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಕಡಿಮೆ ಬೆಳಕಿನಲ್ಲಿಯೂ ಉತ್ತಮ ಗುಣಮಟ್ಟದ ಫೋಟೋಗಳನ್ನು ತೆಗೆಯಬಹುದು ಎಂದು ತೋರುತ್ತದೆ. 2024 ರಲ್ಲಿ ಬಿಡುಗಡೆಯಾಗಲಿರುವ ಐಫೋನ್ 16 ಸರಣಿಯ ಬಗ್ಗೆ ಅಧಿಕೃತ ಪ್ರಕಟಣೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ಐಫೋನ್ ಪ್ರಿಯರು ಕಾತರದಿಂದ ಕಾಯುತ್ತಿರುವಂತಹ ಹೊಸ ಮಾಡೆಲ್ ಮಾರುಕಟ್ಟೆಗೆ ಇನ್ನೇನು ಲಗ್ಗೆಯಿಡಲಿದೆ. ಇದರ ಫೀಚರ್ ಯಾವ ರೀತಿಯ ವೈಶಿಷ್ಟ್ಯತೆಯನ್ನು ಹೊಂದಿದೆ ಎನ್ನುವುದನ್ನು ಕಾದುನೋಡಬೇಕಷ್ಟೆ..!!

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *