ವಾಟ್ಸಾಪ್ ಸ್ಟೇಟಸ್ ಗೆ ನಿಮ್ಮದೇ ವಾಯ್ಸ್ ರೆಕಾರ್ಡ್ ಹಾಕಬಹುದು – ಹೇಗೆ ಗೊತ್ತಾ?

ವಾಟ್ಸಾಪ್ ಸ್ಟೇಟಸ್ ಗೆ ನಿಮ್ಮದೇ ವಾಯ್ಸ್ ರೆಕಾರ್ಡ್ ಹಾಕಬಹುದು – ಹೇಗೆ ಗೊತ್ತಾ?

ನ್ಯೂಸ್ ಆ್ಯರೋ‌ : ಪ್ರಪಂಚದಾದ್ಯಂತ ಕೋಟಿಗಟ್ಟಲೆ ಬಳಕೆದಾರರನ್ನು ಹೊಂದಿರುವ ಅತ್ಯಂತ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ಆಗಾಗ ಹೊಸ ಹೊಸ ಫೀಚರ್ ಪರಿಚಯಿಸಿ ಗ್ರಾಹಕ ಸ್ನೇಹಿ ಎನಿಸಿಕೊಂಡಿದೆ. ವಾಟ್ಸಾಪ್ ಸ್ಟೇಟಸ್ ಗೆ ವಾಯ್ಸ್ ಅಳವಡಿಸುವ ಫೀಚರ್ ಅನ್ನು ಎಲ್ಲಾ ಬಳಕೆದಾರರಿಗೆ ಮುಕ್ತಗೊಳಿಸಿ ಬಹು ಕಾಲದ ಬೇಡಿಕೆಯನ್ನು ವಾಟ್ಸಾಪ್ ಈಡೇರಿಸಿದೆ.

ಬಳಕೆದಾರರು ತಮ್ಮದೇ ವಾಯ್ಸ್ ರೆಕಾರ್ಡ್ ಮಾಡಿ ಸ್ಟೇಟಸ್‌ನಲ್ಲಿ ಹಾಕಬಹುದು. ಆರಂಭಿಕ ಹಂತದಲ್ಲಿ ಬಿಟಾ ವರ್ಶನ್‌ನಲ್ಲಿದ್ದ ಈ ಫೀಚರ್, ಇದೀಗ ಎಲ್ಲಾ ಬಳಕೆದಾರರಿಗೆ ಲಭ್ಯವಿದೆ.

ವಾಯ್ಸ್ ಸ್ಟೇಟಸ್ ಹಾಕುವ ವಿಧಾನ ಹೀಗಿದೆ..

ವಾಟ್ಸಾಪ್ ತೆರೆದು ಸ್ಟೇಟಸ್ ಟ್ಯಾಬ್‌ ಕ್ಲಿಕ್ ಮಾಡಿ. ಬಳಿಕ ಸ್ಟೇಟಸ್ ಟ್ಯಾಬ್‌ನಲ್ಲಿರುವ ಪೆನ್ಸಿಲ್ ಐಕಾನ್ ಕ್ಲಿಕ್ ಮಾಡಿ. ಬಳಿಕ ಇಲ್ಲಿರುವ ಮೈಕ್ರೋಫೋನ್ ಬಟಲ್ ಒತ್ತಿ ಹಿಡಿದು ನಿಮ್ಮ ಧ್ವನಿ ರೆಕಾರ್ಡ್ ಮಾಡಿ. ಮೈಕ್ರೋಫೋನ್ ಬಟನ್ ರಿಲೀಸ್ ಮಾಡಿ, ಸ್ಟೇಟಸ್‌ಗೆ ವಾಯ್ಸ್ ಆ್ಯಡ್ ಮಾಡಿ.

30 ಸೆಕೆಂಡ್‌ ಮಿತಿ

ಗಮನಿಸಬೇಕಾದ ಅಂಶ ಎಂದರೆ ವಾಯ್ಸ್ ಸ್ಟೇಟಸ್‌ನಲ್ಲಿ 30 ಸೆಕೆಂಡ್‌ಗಿಂತ ಹೆಚ್ಚು ದೀರ್ಘವಾಗಿರುವ ವಾಯ್ಸ್ ರೆಕಾರ್ಡ್ ಮಾಡಿ ಹಾಕಲು ಸಾಧ್ಯವಿಲ್ಲ. ಅಂದರೆ ಸ್ಟೇಟಸ್ ಗೆ ಹಾಕುವ ವಾಯ್ಸ್ ನೋಟ್ 30 ಸೆಕೆಂಡ್ ಒಳಗಿರಬೇಕು.

ಇತ್ತೀಚಿಗಿನ ಇತರ ಫೀಚರ್ಸ್ ಹೀಗಿವೆ..

ಇದೀಗ ಬಳಕೆದಾರರು ಗ್ರೂಪ್‌ನಲ್ಲಿರುವ ಎಲ್ಲಾ ಸದಸ್ಯರ ಬದಲು ಆಯ್ದ ಸದಸ್ಯರಿಗೆ ಕಾಲ್ ಮಾಡಬಹುದಾಗಿದೆ. ಮೆಸೇಜನ್ನು ಎಡಿಟ್ ಮಾಡಲು ಅವಕಾಶ ನೀಡಿದೆ. ತಾವು ಕಳುಹಿಸಿದ ಸಂದೇಶವನ್ನು 15 ನಿಮಿಷದೊಳಗೆ ಎಡಿಟ್ ಮಾಡಬಹುದು. ಚಾಟ್ ಲಾಕ್ ಫೀಚರ್ಸ್ ಕೂಡ ಹೊಸದಾಗಿ ಸೇರಿದೆ. ಸಂದೇಶಗಳನ್ನು ಚಾಟ್ ಲಾಕ್ ಫೀಚರ್ ಮೂಲಕ ಪ್ರೈವೇಟ್ ಮಾಡಲು ಸಾಧ್ಯವಿದೆ. ಚಾಟ್ ಲಾಕ್ ಮಾಡಿದ ಸಂದೇಶಗಳು ಯಾರಿಗೂ ಕಾಣಿಸುವುದಿಲ್ಲ. ವಾಟ್ಸಾಪ್ ಒಪನ್ ಆಗಿದ್ದರೂ ಲಾಕ್ ಆಗಿರುವ ಸಂದೇಶಗಳು ಕಾಣಿಸುವುದಿಲ್ಲ. ಫಿಂಗರ್ ಪ್ರಿಂಟ್ ಲಾಕ್ ಮೂಲಕ ಒಪನ್ ಮಾಡಿದರೆ ಲಾಕ್ ಆಗಿರುವ ಮೆಸೇಜ್ ಪ್ರತ್ಯೇಕ ಫೋಲ್ಡರ್‌ನಲ್ಲಿ ಕಾಣಿಸಲಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *