ಮಾನವನ ಮೆದುಳಿಗೆ ಚಿಪ್‌ ಅಳವಡಿಕೆಗೆ ಸಿದ್ಧತೆ‌ – ಟೆಸ್ಲಾ, ಟ್ವಿಟರ್ ಮಾಲಕ ಎಲಾನ್ ಮಸ್ಕ್‌ನಿಂದ ಹೊಸ ಪ್ರಯೋಗ ; ಏನಿದು ಚಿಪ್ ಟೆಕ್ನಾಲಜಿ? ಇದರಿಂದ ಆಗುವ ಅನುಕೂಲಗಳೇನು?

ಮಾನವನ ಮೆದುಳಿಗೆ ಚಿಪ್‌ ಅಳವಡಿಕೆಗೆ ಸಿದ್ಧತೆ‌ – ಟೆಸ್ಲಾ, ಟ್ವಿಟರ್ ಮಾಲಕ ಎಲಾನ್ ಮಸ್ಕ್‌ನಿಂದ ಹೊಸ ಪ್ರಯೋಗ ; ಏನಿದು ಚಿಪ್ ಟೆಕ್ನಾಲಜಿ? ಇದರಿಂದ ಆಗುವ ಅನುಕೂಲಗಳೇನು?

ನ್ಯೂಸ್ ಆ್ಯರೋ : ಮಾನವರ ಮೆದುಳಿಗೆ ಚಿಪ್‌ ಅಳವಡಿಸುವ ಪ್ರಯೋಗಕ್ಕೆ ಎಲಾನ್ ಮಾಸ್ಕ್‌ ಮಾಲೀಕತ್ವದ ನ್ಯೂರೋಲಿಂಕ್‌ ಸಂಸ್ಥೆ ಮುಂದಾಗಿದ್ದು, ಮುಂದಿನ ಆರು ತಿಂಗಳೊಳಗೆ ಈ ಪ್ರಯೋಗ ಪೂರ್ಣಗೊಳ್ಳಲಿದೆ. ಈ ಪ್ರಯೋಗ ಯಶಸ್ವಿಯಾದ ಬಳಿಕ ತಾನೂ ಕೂಡ ಮೆದುಳಿಗೆ ಚಿಪ್ ಅಳವಡಿಸುವುದಾಗಿ ಎಲಾನ್ ಘೋಷಣೆ ಮಾಡಿದ್ದಾರೆ.

ಈ ಪ್ರಯೋಗದಿಂದ ಹುಟ್ಟಿನಿಂದ ಅಂಧರಾಗಿರುವವರು, ಪಾರ್ಶ್ವವಾಯು ಪೀಡಿತರು, ಪಾರ್ಕಿನ್ಸನ್ಸ್‌ ರೋಗದಿಂದ ಬಳಲುತ್ತಿರುವವರಿಗೆ ಇದು ಅನುಕೂಲವಾಗಲಿದೆ. ಅದಲ್ಲದೆ ಮೆದುಳಿನಲ್ಲಿ ನಿಷ್ಕ್ರಿಯವಾಗಿರುವ ಭಾಗವನ್ನು ಚಿಪ್‌ ಸಹಾಯದಿಂದ ಉತ್ತೇಜಿಸುವ ಮೂಲಕ ನರರೋಗ ಸಮಸ್ಯೆಯಿಂದ ಮುಕ್ತಿ ಪಡೆಯಬಹುದಾಗಿದೆ ಹಾಗೂ ಚಲನೆ ಮತ್ತು ಮೌಖಿಕ ಸಂವಹನ ಸಾಧ್ಯವಾಗಲಿದೆ ಎನ್ನಲಾಗಿದೆ.

ಈ ಸಂಬಂಧ ಪ್ರತಿಕ್ರಿಯಿಸಿದ ಎಲಾನ್ ಮಸ್ಕ್, ‘ಪಸ್ತುತ ಚಿಪ್‌ ಮಾರಾಟ ಮಾಡಲು ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣಾ ಇಲಾಖೆಯಿಂದ ಕಂಪನಿಗೆ ಅನುಮತಿ ಇಲ್ಲ. ಆದರೆ ಮಾನವನ ದೇಹಕ್ಕೆ ಚಿಪ್‌ ಅಳವಡಿಸಲು ಅನುಮತಿ ಪಡೆಯುವ ನಿಟ್ಟಿನಲ್ಲಿ ಎಲ್ಲಾ ಅಗತ್ಯ ಕೆಲಸಗಳು ಪೂರ್ಣ ಮಾಡಲಾಗಿದೆ’ ಎಂದಿದ್ದಾರೆ.

ಏನಿದು ಪ್ರಯೋಗ?

ನ್ಯೂರಾಲಿಂಕ್‌ ಸಂಸ್ಥೆ, ಸರ್ಜಿಕಲ್‌ ರೋಬೋಟ್‌ ಎಂಬ ಕೃತಕ ಮೆದುಳಿನ ಚಿಪ್‌ನ್ನು ಅಭಿವೃದ್ಧಿ ಮಾಡಿದೆ. ಈ ಚಿಪ್‌ನ ಹೊರಭಾಗದಲ್ಲಿ ತಲೆಕೂದಲಿಗಿಂತಲೂ 20 ಪಟ್ಟು ಚಿಕ್ಕದಾದ ವಯರ್‌ಗಳು ಇರಲಿದ್ದು, ಅವು ಎಲ್ಲೆಡೆ ಹರಡಿಕೊಂಡು ಮೆದುಳಿಗೆ ಸಂದೇಶ ರವಾನಿಸಲಿದೆ. ಈ ಮೂಲಕ ವ್ಯಕ್ತಿಯು ಮನಸ್ಸಿನಲ್ಲಿ ಅಂದುಕೊಂಡ ವಿಷಯವನ್ನು ಮಾಡಲು ಸಾಧ್ಯವಾಗುತ್ತದೆ.

ಅಂದರೆ ಚಿಪ್‌ ಅಳವಡಿಸಿದ ವ್ಯಕ್ತಿಯೊಬ್ಬ ತನ್ನ ತಲೆಯಲ್ಲಿ ಮೊಬೈಲ್‌ ಆನ್‌ ಮಾಡಬೇಕು ಅಥವಾ ಕರೆ ಮಾಡಬೇಕೆಂದು ಬಯಸಿದರೆ ಆ ಸಂದೇಶ ಚಿಪ್‌ ಮೂಲಕ ನೇರವಾಗಿ ಮೊಬೈಲ್‌ಗೆ ರವಾನೆಯಾಗಿ ಮೊಬೈಲ್‌ ಕಾರ್ಯನಿರ್ವಹಿಸುತ್ತದೆ.

ಚಿಪ್‌ ಅಳವಡಿಕೆಯಿಂದ ಏನೆಲ್ಲ ಪ್ರಯೋಜನಗಳಿವೆ?

  1. ಮೆದುಳಿನಿಂದ ಸಂದೇಶ ರವಾನಿಸುವ ಸಮಸ್ಯೆ ಇರುವವರಿಗೆ ಸಹಾಯಕಾರಿಯಾಗಲಿದೆ.
  2. ಚಿಪ್‌ ಮೂಲಕ ಕೃತಕವಾಗಿ ದೇಹದ ಅಂಗಗಳಿಗೆ ವಿವಿಧ ಸಂದೇಶಗಳ ರವಾನೆ
  3. ಮೆದುಳಿಗೆ ಅಳವಡಿಸುವ ಚಿಪ್‌ ಹೊರಗಿನಿಂದ ನಿಯಂತ್ರಣ ಮಾಡಲು ಸಾಧ್ಯ
  4. ಆಗ ದೃಷ್ಟಿದೋಷ, ನರದೋಷ, ಪಾರ್ಶ್ವವಾಯು ಸಮಸ್ಯೆಗಳಿಗೆ ಪರಿಹಾರ
  5. ಮನಸ್ಸಿನಲ್ಲಿ ಅಂದುಕೊಂಡ ಕೆಲಸವನ್ನು ಕೈ ಬಳಸದೆ ಮಾಡಬಹುದು.
  6. ಬಾಯಿ ತೆರೆಯದೆಯೇ ಯಂತ್ರಗಳ ಜೊತೆ ಮಾತನಾಡಲು ಕೂಡ ಸಾಧ್ಯವಿದೆ

ಈ ಪ್ರಯೋಗ ಯಶಸ್ವಿಯಾದರೆ ಮನುಷ್ಯನ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು‌ ನಂಬಲಾಗಿದ್ದು, ನ್ಯೂರೋಲಿಂಕ್ ಸಂಸ್ಥೆಯ ಹೊಸ ಕಾರ್ಯ ಕುತೂಹಲ ಮೂಡಿಸಿದೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *