YouTube ನಲ್ಲಿ ವೀಡಿಯೋ ವೀಕ್ಷಿಸಿದ್ರೂ ತಿಂಗಳಿಗೆ 200 ಡಾಲರ್ ಗಳಿಸ್ಬೋದು – ನಂಬಿಕೆ ಬರದಿದ್ರೆ ಈ ವರದಿ ಓದಿ..

YouTube ನಲ್ಲಿ ವೀಡಿಯೋ ವೀಕ್ಷಿಸಿದ್ರೂ ತಿಂಗಳಿಗೆ 200 ಡಾಲರ್ ಗಳಿಸ್ಬೋದು – ನಂಬಿಕೆ ಬರದಿದ್ರೆ ಈ ವರದಿ ಓದಿ..

ನ್ಯೂಸ್ ಆ್ಯರೋ : ಯೂಟ್ಯೂಬ್ ಅನ್ನೋದು ಮಾಯಾಬಝಾರ್ ಇದ್ದಂತೆ.‌ ಅಲ್ಲಿ ಎಲ್ಲವೂ ಸಿಗುತ್ತದೆ.‌ ಮೊದಲೆಲ್ಲ ಯೂಟ್ಯೂಬ್‌ ನಲ್ಲಿ ಚಾನಲ್‌ ಮಾಡಿಕೊಂಡು ಅದರಲ್ಲಿ ಉತ್ತಮ ವಿಡಿಯೋಗಳನ್ನು ಅಪ್‌ಲೋಡ್‌ ಮಾಡಿ ಹೆಚ್ಚು ವೀಕ್ಷಣೆ ಪಡೆಯುವ ಮೂಲಕ ಹಣ ಗಳಿಕೆ ಮಾಡುತ್ತಿದ್ದರು. ಆದರೆ, ಇನ್ಮುಂದೆ ವಿಡಿಯೋ ವೀಕ್ಷಣೆ ಮಾಡುವವರಿಗೂ ಹಣ ಸಿಗಲಿದೆ. ಹೀಗಾಗಿ ಯೂಟ್ಯೂಬ್ ಮೂಲಕ ಹಣ ಗಳಿಸಲು ಚಾನೆಲ್ ಹೊಂದಿರಲೇಬೇಕು ಎಂಬ ನಿಯಮ ಇಲ್ಲದಿರುವುದು ಹಲವರ ಅಚ್ಚರಿಗೂ ಕಾರಣವಾಗಿದೆ.

ಸಾಮಾನ್ಯವಾಗಿ ಸೆಲೆಬ್ರಿಟಿ ಎನಿಸಿಕೊಂಡವರು ಹಾಗೂ ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿ ಇರುವವರೂ ಸಹ ಒಂದೊಂದು ಯೂಟ್ಯೂಬ್‌ ಚಾನಲ್‌ ಮಾಡಿಕೊಂಡು ಭಾರೀ ಹಣ ಸಂಪಾದನೆ ಮಾಡುತ್ತಿದ್ದಾರೆ. ಯಾಕೆಂದರೆ ಇವರು ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವುದರಿಂದ ಇವರ ವಿಡಿಯೋ ಹೆಚ್ಚಿನ ವೀಕ್ಷಣೆ ಪಡೆಯುತ್ತವೆ. ಇದರೊಂದಿಗೆ ಹಣ ಸಹ ಅವರಿಗೆ ಸಿಗುತ್ತದೆ. ಆದರೆ,ಇನ್ಮುಂದೆ ನೀವು ಈ ವಿಡಿಯೋಗಳನ್ನೇ ನೋಡಿ ಹಣ ಸಂಪಾದನೆ ಮಾಡಬಹುದು ಎಂದರೆ ನಂಬಲೇಬೇಕು. ನಂಬಿಕೆ ಇಲ್ದೇ ಇದ್ರೆ ಈ ವರದಿ ಓದಿ..

ಯೂಟ್ಯೂಬ್ ವಿಆರ್‌ಎಸ್ ಪ್ರೋಗ್ರಾಂ ಅನ್ನು ಪರಿಚಯಿಸಿದ್ದು, ಇದಕ್ಕೆ ವೀಕ್ಷಕರ ಆದಾಯ ಹಂಚಿಕೆ ಕಾರ್ಯಕ್ರಮ (VRS ) ಎಂದು ಕರೆಯಲಾಗುತ್ತದೆ. ಹಾಗಿದ್ರೆ, ಏನಿದು ಯೂಟ್ಯೂಬ್‌ನ ತಂತ್ರ?, ಈ ವಿಆರ್‌ಎಸ್‌ನಿಂದ ವೀಕ್ಷಕರಿಗೆ ಹಣ ಹೇಗೆ ಬರುತ್ತದೆ ಎಂಬಿತ್ಯಾದಿ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

ಈ ವಿಆರ್‌ಎಸ್‌ ಪ್ರೋಗ್ರಾಂ ಅನ್ನು ಆರಂಭದಲ್ಲಿ ಯುನೈಟೆಡ್ ಸ್ಟೇಟ್ಸ್ನಲ್ಲಿ ಪರಿಚಯಿಸಲಾಗಿದ್ದು, ಈಗ ಯೂಟ್ಯೂಬ್‌ ತನ್ನ ಎರಡನೇ ಹಂತದ ವಿಆರ್‌ಎಸ್‌ ಕಾರ್ಯಕ್ರಮವನ್ನು ಭಾರತದಲ್ಲಿ ಪ್ರಾರಂಭಿಸಿದೆ. ಈ ಬಗ್ಗೆ ಯೂಟ್ಯೂಬ್ ಸಿಇಒ ನೀಲ್ ಮೋಹನ್ ಅಧಿಕೃತ ಹೇಳಿಕೆ ನೀಡಿದ್ದು, ಈ ಯೋಜನೆಯು ಯೂಟ್ಯೂಬ್ ಸಮುದಾಯದ ನಡುವಿನ ಬಾಂಧವ್ಯವನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ.

ಹಣ ಗಳಿಸೋದು‌ ಹೇಗೆ?

ಕೆಲವು ಯೂಟ್ಯೂಬ್‌ ವೀಕ್ಷಕರು ಈಗ ತಿಂಗಳಿಗೆ $200 (16,406ರೂ. ಗಳು) ವರೆಗೂ ಹಣ ಗಳಿಸಬಹುದು ಎಂದು ಹೇಳಲಾಗುತ್ತದೆ.ಆದರೆ, ಇದಕ್ಕೆ ಕೆಲವು ನಿಯಮಗಳಿವೆ. ಅದೇನೆಂದರೆ ವಿಡಿಯೋಗಳು ಪ್ಲೇ ಆಗುತ್ತಿರುವಾಗ ಡಿವೈಸ್‌ ಅನ್ನು ಎಲ್ಲೋ ದೂರದಲ್ಲಿ ಇಟ್ಟು ಆಲಿಸುವುದಲ್ಲ. ಹಾಗೆಯೇ ವೀಕ್ಷಣೆ ಮಾಡುವ ವೇಳೆ ನೀವು 5 ನಿಮಿಷಗಳಿಗಿಂತ ಹೆಚ್ಚು ಕಾಲ ನಿಷ್ಕ್ರಿಯವಾಗಿದ್ದರೆ ಹಣ ಗಳಿಕೆ ಮಾಡಲು ಸಾಧ್ಯವಿರುವುದಿಲ್ಲ.

ವೀಡಿಯೋ ವೀಕ್ಷಣೆ ಮಾಡುವಾಗ ಹೆಚ್ಚಿನ ಜಾಹೀರಾತುಗಳನ್ನು ವೀಕ್ಷಿಸಿದರೆ ಹೆಚ್ಚು ಗಳಿಸಬಹುದಾಗಿದೆ. ಈ ಜಾಹೀರಾತುಗಳನ್ನು ತಪ್ಪಿಸುವುದರಿಂದ ಕಡಿಮೆ ಆದಾಯ ವಿತರಣೆಗೆ ಕಾರಣವಾಗುತ್ತದೆ. ಅದರಲ್ಲೂ ತಂತ್ರಜ್ಞಾನ ಹಾಗೂ ಹಣಕಾಸಿನಂತಹ ಹೆಚ್ಚು ಆದಾಯ ನೀಡುವ ಜಾಹೀರಾತುಗಳಿಂದ ಹೆಚ್ಚಿನ ಹಣವನ್ನು ಗಳಿಸಬಹುದು ಎಂಬುದು ನಿಮ್ಮ ಗಮನಕ್ಕೆ ಇರಲಿ.

ಹಾಗೆಯೇ ಈ ಆದಾಯವನ್ನು ಶಾರ್ಟ್ಸ್‌ ವಿಡಿಯೋ ಹಾಗೂ ದೀರ್ಘ ವಿಡಿಯೋಗಳನ್ನು ನೋಡುವ ಮೂಲಕ ಪಡೆದುಕೊಳ್ಳಬಹುದು. ವಿಷಯ ಏನೆಂದರೆ ನೀವು ಹಣ ಗಳಿಕೆ ಮಾಡುವ ಆಸೆಯಲ್ಲಿ ಯಾವುದೇ ಮೋಸದ ಚಟುವಟಿಕೆಯನ್ನು ಮಾಡಿದರೆ ಅಥವಾ ಅಂತಹ ಕಂಟೆಂಟ್‌ದ ಅನ್ನು ಹ್ಯಾಕ್ ಮಾಡಿದರೆ ತಕ್ಷಣವೇ ಈ ಪ್ರೋಗ್ರಾಂನಿಂದ ನಿಮ್ಮನ್ನು ನಿಷೇಧಿಸಲಾಗುತ್ತದೆ.

ಈ ಯೂಟ್ಯೂಬ್‌ ಜಾಹೀರಾತು ಆದಾಯವನ್ನು ವೀಕ್ಷಕರಿಗೆ 10%, ಕಂಟೆಂಟ್‌ ಕ್ರಿಯೇಟರ್ಸ್‌ಗೆ 45% ಮತ್ತು ಯೂಟ್ಯೂಬ್‌ಗೆ 45% ಹಂಚಿಕೆ ಮಾಡಲಾಗುತ್ತದೆ. ಹೀಗಾಗಿ ಇನ್ಮುಂದೆ ಯೂಟ್ಯೂಬ್‌ ವಿಡಿಯೋ ವೀಕ್ಷಣೆ ಮಾಡಿಕೊಂಡು ಸುಮ್ಮನೆ ಮನೆಯಲ್ಲಿ ಕೂರುವವರು ಸಹ ಹಣ ಸಂಪಾದನೆ ಮಾಡಬಹುದಾಗಿದೆ.

ಇನ್ನು ವೀಕ್ಷಕರು ತಮ್ಮ ಜಾಹೀರಾತು ಆದಾಯದ ಪಾಲನ್ನು ಸ್ವೀಕರಿಸಲು ಕೆವೈಸಿ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಬೇಕಾಗುತ್ತದೆ. ಲಿಂಕ್ ಮಾಡಿದ ಬ್ಯಾಂಕ್ ಖಾತೆಗೆ ಹಣವನ್ನು ಆಟೋಮ್ಯಾಟಿಕ್‌ ಆಗಿ ಜಮಾ ಮಾಡಲಾಗುತ್ತದೆ. ಹಾಗೆಯೇ ಯುಪಿಐ ಐಡಿಗಳನ್ನು ಬಳಸಿಕೊಂಡು ಸಹ ಪಡೆಯಬಹುದಾಗಿದೆ. ಇನ್ನು ಈ ಆದಾಯ ಹಂಚಿಕೆಗೆ ಅರ್ಹತೆ ಪಡೆಯಲು ಪ್ರತಿ ವಿಡಿಯೋಗೆ ಕನಿಷ್ಠ $100 ಜಾಹೀರಾತು ಆದಾಯವನ್ನು ಉತ್ಪಾದಿಸಬೇಕು. ಆದರೆ ಯೂಟ್ಯೂಬ್ ವೀಕ್ಷಿಸಲು ಡಾಟಾ ಮಾತ್ರ ನಿಮ್ಮದೇ ದುಡ್ಡಿನದು ಅನ್ನೋದು ಗಮನಾರ್ಹ, ಫ್ರೀ ವೈಫೈ ಸೌಲಭ್ಯ ಇರೋರು ಒಮ್ಮೆ ಟ್ರೈ ಮಾಡಿ ನೋಡಿ‌.‌..

Related post

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ ಪತ್ರ

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ…

ನ್ಯೂಸ್ ಆರೋ: ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು ಸಿಕ್ಕಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರಜ್ಞಾವಂತ ನಾಗರೀಕರು ಎಂಬ ಹೆಸರಿನಲ್ಲಿ…
ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ನ್ಯೂಸ್ ಆರೋ: ಕೆಜಿಎಫ್ ನಂತರ ಹಿಟ್ ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಯಶ್ ಇದೀಗ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಆ ಚಿತ್ರಕ್ಕೆ ಶೂರ್ಪನಖಿಯಾಗಿ ರಕುಲ್ ಕಾಣಿಸಿಕೊಳ್ಳಲಿದ್ದಾರೆ. ಹೌದು,ಶೂರ್ಪನಕಿಯಾಗಿ…
ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌ ದರ ಇಳಿಕೆ ಮಾಡಿದ ಪಾಕ್‌ ಸರ್ಕಾರ

ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌…

ನ್ಯೂಸ್ ಆರೋ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರು ಭಾರತಕ್ಕೆ ಸೇರುತ್ತೇವೆ ಎಂದು ನಡೆಸುತ್ತಿದ್ದ ಪ್ರತಿಭಟನೆಗೆ ಪಾಕಿಸ್ತಾನದ ಸರ್ಕಾರ ಮಣಿದಿದೆ. ಹೌದು, ಜನರ ಪ್ರತಿಭಟನೆ ಬೆನ್ನಲ್ಲೇ ಪಾಕ್‌ ಆಕ್ರಮಿತ ಕಾಶ್ಮೀರದ…

Leave a Reply

Your email address will not be published. Required fields are marked *