ಅನಧಿಕೃತ ಲಿಂಕ್ ಕ್ಲಿಕ್ ಮಾಡುವ ಮುನ್ನ ಎಚ್ಚರವಿರಲಿ – ಹ್ಯಾಕರ್ಸ್ ಹೇಗೆಲ್ಲಾ ನಿಮ್ಮನ್ನು ವಂಚಿಸುತ್ತಿದ್ದಾರೆ ಗೊತ್ತಾ?

ಅನಧಿಕೃತ ಲಿಂಕ್ ಕ್ಲಿಕ್ ಮಾಡುವ ಮುನ್ನ ಎಚ್ಚರವಿರಲಿ – ಹ್ಯಾಕರ್ಸ್ ಹೇಗೆಲ್ಲಾ ನಿಮ್ಮನ್ನು ವಂಚಿಸುತ್ತಿದ್ದಾರೆ ಗೊತ್ತಾ?

ನ್ಯೂಸ್ ಆ್ಯರೋ : ಸುಲಭವಾಗಿ ಹಣ ಗಳಿಸಿ, ಈ ಲಿಂಕ್ ಕ್ಲಿಕ್ ಮಾಡಿ ಬಹುಮಾನ ಗೆಲ್ಲಿ, ಇಂತಹ ಸಂದೇಶಗಳನ್ನು ಕಳುಹಿಸಿ ಜನರನ್ನು ವಂಚಿಸುವ ಜಾಲ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದೆ. ಇದೀಗ, ‘ಯೂಟ್ಯೂಬ್ ಲಿಂಕ್ ಶೇರ್‌ ಮಾಡುವ ಮೂಲಕ ಹಣಗಳಿಸಿ’ ಎಂಬ ಹೊಸ ಸ್ಕ್ಯಾಮ್ ಆರಂಭವಾಗಿದೆ‌.

ಆಶ್ಚರ್ಯ ಎನಿಸಿದರೂ ಇದು ಸತ್ಯ ಸಂಗತಿ. ವಾಟ್ಸಾಪ್ ಮೂಲಕ ಯೂಟ್ಯೂಬ್ ಲಿಂಕ್ ಶೇರ್ ಮಾಡಿ ಮನೆಯಲ್ಲಿಯೇ ಕುಳಿತು ಹಣ ಗಳಿಸಿ ಎಂಬ ಹೊಸ ವಂಚನೆ ಆರಂಭಗೊಂಡಿದೆ. ಮನೆಯಲ್ಲಿರುವವರನ್ನೇ‌ ಇದಕ್ಕೆ ಬಳಸಿಕೊಳ್ಳುವ ವಂಚಕರು ಸುಲಭವಾಗಿ ಹಣ ಗಳಿಸಲು ಲಿಂಕ್ ಶೇರ್ ಮಾಡಿ ಎನ್ನುತ್ತಾರೆ. ಇಷ್ಟು ಲಿಂಕ್ ಶೇರ್ ಮಾಡಿದ್ರೆ, ಇಷ್ಟು ಹಣ ನಿಮ್ಮ ಖಾತೆಗೆ ಬರುತ್ತದೆ‌ ಎಂದು ನಿಮ್ಮನ್ನು ನಂಬಿಸಿ ಬಿಡುತ್ತಾರೆ. ಅಂತಹವರ ಮಾತು ನಂಬಿದ್ರೆ ನೀವು ಹಳ್ಳಕ್ಕೆ ಬೀಳೋದು ಗ್ಯಾರಂಟಿ.

ವಂಚಕರು ಹೇಗೆ ಯಾಮಾರಿಸ್ತಾರೆ ಗೊತ್ತಾ?

ನಿಮ್ಮ ವಾಟ್ಸಾಪ್ ಗೆ ಯೂಟ್ಯೂಬ್ ಲಿಂಕ್ ಕಳುಹಿಸುವ ವಂಚಕರು ನಿಮಗೆ ಹಣದ ಆಸೆ ತೋರಿಸಿ ಅದನ್ನು ಇತರರಿಗೆ ಶೇರ್ ಮಾಡುವಂತೆ ತಿಳಿಸುತ್ತಾರೆ. ಜೊತೆಗೆ 50 ಲೈಕ್ ಗಳಿಸಿದರೆ 50 ರೂ. ಗಳಿಸಬಹುದು ಎಂದು ನಂಬಿಸುತ್ತಾರೆ. ಅಲ್ಲದೇ‌ ಈ ಮೂಲಕ ಮನೆಯಲ್ಲಿಯೇ‌ ಕುಳಿತು 500 ರೂ. ಗಳಿಸಬಹುದು ಎಂದು ಆಸೆ ತೋರಿಸುತ್ತಾರೆ, ಇದರಿಂದ ಈಗಾಗಲೇ ಸಾಕಷ್ಟು ಜನ ವಂಚನೆಗೆ ಒಳಗಾಗಿದ್ದಾರೆ ಎನ್ನಲಾಗಿದೆ.

ಅಮಾಯಕರನ್ನು ಹಣದ ಆಸೆ ತೋರಿಸಿ ವಂಚಿಸುವ ಈ ಕ್ರಿಮಿಗಳು, ನೀವು ಲಿಂಕ್ ಶೇರ್ ಮಾಡಿದ ನಂತರ ಹಣ ಹಾಕಲು ನಿಮ್ಮ ಬ್ಯಾಂಕ್ ಡೀಟೈಲ್ಸ್ ಕೇಳುತ್ತಾರೆ. ನೀವು ಅವರನ್ನು‌ ನಂಬಿ ಬ್ಯಾಂಕ್ ಖಾತೆ ಕಳುಹಿಸಿದರೆ. ವಂಚಕರು ಸುಲಭವಾಗಿ ನಿಮ್ಮ ಖಾತೆಯಲ್ಲಿರುವ ಹಣವನ್ನು‌ ನುಂಗಿ‌ ನೀರು ಕುಡಿದು ಬಿಡುತ್ತಾರೆ. ಕೆಲವರು ನಿಮ್ಮ ವಿಶ್ವಾಸ ಗಳಿಸಲು ಸ್ವಲ್ಪ ಹಣವನ್ನು ನಿಮ್ಮ ಖಾತೆಗೆ ಕಳುಹಿಸಲೂ‌ ತಯಾರಿರುತ್ತಾರೆ. ನಂತರ ಅಪ್ಲಿಕೇಶನ್ ಒಂದನ್ನು ಇನ್ ಸ್ಟಾಲ್ ಮಾಡುವಂತೆ ತಿಳಿಸುತ್ತಾರೆ. ನೀವು ಹೀಗೆ ಮಾಡಿದರೆ, ನಿಮ್ಮ ಸ್ಮಾರ್ಟ್ಫೋನ್ ಟ್ರೋಜನ್ ಗೆ ಒಳಗಾಗುತ್ತದೆ‌. ನಂತರ ಪರಿಶೀಲನೆಗಾಗಿ 1 ರೂ. ಕಳುಹಿಸುವಂತೆ ತಿಳಿಸುತ್ತಾರೆ‌. ನೀವು ಹಣ ಕಳುಹಿಸಿದರೆ ನಿಮ್ಮ ಎಲ್ಲಾ ಡೇಟಾಗಳನ್ನು ಅವರು ಕದ್ದು ವಂಚಿಸುತ್ತಾರೆ‌.

ಇಂತಹದ್ದೊಂದು ವಂಚಕರ ಜಾಲ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು, ವಂಚನೆಗೊಳಗಾದ ಅಮಾಯಕರು ದೂರು ದಾಖಲಿಸುತ್ತಿದ್ದಾರೆ. ವಿಡಿಯೋ ಲೈಕ್ ಮಾಡಿ ಹಣ ಗಳಿಸಿ, ವಿಡಿಯೋ ಶೇರ್ ಮಾಡಿ ಹಣ ಗಳಿಸಿ ಎಂಬ ಮಾಹಿತಿಯನ್ನು ಯಾವುದೇ ನಿರ್ಧಿಷ್ಟ ಮಾಹಿತಿಯಿರದೆ ನೀವು ಬಳಸಬೇಡಿ. ಜೊತೆಗೆ ಈ ಮಾಹಿತಿಗಳನ್ನು ಸಾಧ್ಯವಾದಷ್ಟು ಹಂಚಿಕೊಂಡು ಜಾಗೃತಿ ಮೂಡಿಸಿ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *