ಪಾಕ್ ಆಕ್ರಮಿತ ಕಾಶ್ಮೀರ ಭಾರತಲ್ಲೇ ಇಲ್ವಾ…!! – ವಾಟ್ಸಾಪ್ ಸಂಸ್ಥೆ ಭಾರತೀಯರ ಬಳಿ ಕ್ಷಮೆ ಕೇಳಿದ್ದೇಕೆ…!?

ಪಾಕ್ ಆಕ್ರಮಿತ ಕಾಶ್ಮೀರ ಭಾರತಲ್ಲೇ ಇಲ್ವಾ…!! – ವಾಟ್ಸಾಪ್ ಸಂಸ್ಥೆ ಭಾರತೀಯರ ಬಳಿ ಕ್ಷಮೆ ಕೇಳಿದ್ದೇಕೆ…!?

ನ್ಯೂಸ್ ಆ್ಯರೋ : ತಪ್ಪಾದ ಭಾರತದ ನಕ್ಷೆಯುಳ್ಳ ವಿಡಿಯೋವನ್ನು ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡ ವಾಟ್ಸ್​ಆ್ಯಪ್​ಗೆ ಕೇಂದ್ರ ಸರ್ಕಾರ ಬಿಸಿ ಮುಟ್ಟಿಸಿದೆ. ಕೇಂದ್ರದ ಎಚ್ಚರಿಕೆಯ ಬಳಿಕ ತಾನು ಮಾಡಿದ ತಪ್ಪನ್ನು ಸರಿಪಡಿಸಿಕೊಂಡ ಮೈಕ್ರೋಬ್ಲಾಗಿಂಗ್​ ಸಂಸ್ಥೆಯು ಟ್ವೀಟ್​ ಅಳಿಸಿದ್ದು ದೇಶದ ಬಳಿ ಕ್ಷಮೆ ಕೋರಿದೆ.

ಅಷ್ಟಕ್ಕೂ ಆಗಿದ್ದೇನು..?

ಹೊಸ ವರ್ಷದ ಆಚರಣೆಗೆ ಮುನ್ನ ವಾಟ್ಸ್ ಆ್ಯಪ್ ತನ್ನ ಟ್ವಿಟರ್ ಖಾತೆಯಲ್ಲಿ ಭಾರತದ ಭೂಪಟದ ಚಿತ್ರ ಇರುವ ಪೋಸ್ಟ್ ಅನ್ನು ಟ್ವಿಟ್ ಮಾಡಿತ್ತು. ಆದರೆ ಅದರಲ್ಲಿ ಭಾರತದ ಭಾಗವಾಗಿರುವ ಪಾಕ್ ಆಕ್ರಮಿತ ಕಾಶ್ಮೀರವನ್ನು ಬೇರ್ಪಡಿಸಲಾಗಿತ್ತು. ಇದನ್ನು ಗಮನಿಸಿದ ಕೇಂದ್ರ ಐಟಿ ಸಚಿವ ರಾಜೀವ್ ಚಂದ್ರಶೇಖರ್ ಗರಂ ಆಗಿದ್ದು, ಇದು ಕಾನೂನುಬಾಹಿರವಾಗಿದ್ದರಿಂದ ಸಚಿವರು ವಾಟ್ಸ್ ಆ್ಯಪ್‌ಗೆ ಎಚ್ಚರಿಸಿದ್ದರು.

ವಾಟ್ಸ್ ಆ್ಯಪ್‌ಗೆ ತಾಕೀತು ಮಾಡಿದ ಸಚಿವರು

ಈ ಬಗ್ಗೆ ಸಂಸ್ಥೆಗೆ ಟ್ವೀಟ್​ ಮೂಲಕವೇ ಟಾಂಗ್ ನೀಡಿದ ಸಚಿವರು, ‘ಭಾರತದಲ್ಲಿ ವ್ಯಾಪಾರ ಮಾಡುವ ಅಥವಾ ಮುಂದುವರಿಸಲು ಬಯಸುವ ಎಲ್ಲಾ ಸಾಮಾಜಿಕ ಮಾಧ್ಯಮಗಳು ದೇಶದ ಸರಿಯಾದ ನಕ್ಷೆಯನ್ನು ಬಳಸಬೇಕು’ ಎಂದು ತಾಕೀತು ಮಾಡಿದ್ದರು.

ವಾಟ್ಸ್ ಆ್ಯಪ್‌ ಕ್ಷಮೆ ಯಾಚನೆ

ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ವಾಟ್ಸ್ ಆ್ಯಪ್, ಪ್ರಮಾದವಶಾತ್ ಇಂಥ ತಪ್ಪಾಗಿದ್ದು, ಕೂಡಲೇ ಸರಿಪಡಿಸುವುದಾಗಿ ಕೇಂದ್ರ ಸಚಿವರಿಗೆ ತಿಳಿಸಿದ್ದು, ಕ್ಷಮೆ ಯಾಚಿಸಿದೆ. ಇಂಥ ತಪ್ಪುಗಳು ಭವಿಷ್ಯದಲ್ಲಿ ಮರುಕಳಿಸದಂತೆ ಎಚ್ಚರ ವಹಿಸುವುದಾಗಿಯೂ ತಿಳಿಸಿದೆ.

ಜೂಮ್​ ಆ್ಯಪ್​ ಯಿಂದಲೂ ಆಗಿತ್ತು ಪ್ರಮಾದ

ಇನ್ನೂ ಕೆಲ ದಿನಗಳ ಹಿಂದೆಯಷ್ಟೇ ಭಾರತದ ತಪ್ಪಾದ ನಕ್ಷೆಯನ್ನು ಜೂಮ್​ ಆ್ಯಪ್​ ಪ್ರದರ್ಶಿಸಿದ್ದಕ್ಕೆ ಕಂಪನಿಯ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎರಿಕ್ ಯುವಾನ್​ಗೆ ಸಚಿವ ರಾಜೀವ್​ ಚಂದ್ರಶೇಖರ್​ ಅವರು ಎಚ್ಚರಿಕೆ ನೀಡಿದ್ದರು. ತಕ್ಷಣವೇ ಜೂಮ್​ ಕಂಪನಿ ತಪ್ಪು ಸರಿ ಮಾಡಿಕೊಂಡಿತ್ತು. ನೀವು ಬಳಸುತ್ತಿರುವ ಭಾರತದ ನಕಾಶೆಯನ್ನು ಒಮ್ಮೆ ಸರಿ ಇದೆಯಾ ಎಂಬುದನ್ನು ಪರಿಶೀಲಿಸಿಕೊಳ್ಳಿ ಎಂದು ಸಚಿವರು ಕಂಪನಿಗೆ ಡಿಸೆಂಬರ್​ 28 ರಂದು ಟ್ವೀಟ್​ ಮಾಡಿ ಸೂಚಿಸಿದ್ದರು. ಎಚ್ಚೆತ್ತುಕೊಂಡ ಕಂಪನಿ ಪೋಸ್ಟ್​ ಅಳಿಸಿ ಹಾಕಿತ್ತು.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *