ಭೂಮಿಗೆ ಬೀಳಲಿದೆ 38 ವರ್ಷದ ಹಳೇ ಉಪಗ್ರಹ: ಕೆಲವು ತುಣುಕುಗಳು ಬೀಳಲಿದ್ದು, ಅದರ ಪರಿಣಾಮಗಳೇನು?

ಭೂಮಿಗೆ ಬೀಳಲಿದೆ 38 ವರ್ಷದ ಹಳೇ ಉಪಗ್ರಹ: ಕೆಲವು ತುಣುಕುಗಳು ಬೀಳಲಿದ್ದು, ಅದರ ಪರಿಣಾಮಗಳೇನು?

ನ್ಯೂಸ್‌ಆ್ಯರೋ: 38 ವರ್ಷ ಹಳೆಯದಾದ ನಾಸಾ ಉಪಗ್ರಹವೊಂದು ಈ ಭಾನುವಾರ ಆಗಸದಿಂದ ಭೂಮಿಗೆ ಬೀಳಲಿದ್ದು, ಯಾವುದೇ ಅಪಾಯವಿಲ್ಲ ಎಂದು ನಾಸಾ‌ ಹೇಳಿದೆ.

2,450 ಕೆ.ಜಿ ತೂಕದ ಉಪಗ್ರಹವು ಭೂಮಿಯ ವಾತಾವರಣ ಪ್ರವೇಶಿಸುತ್ತಲೇ ಬಹುಪಾಲು ಉರಿದುಹೋಗಲಿದೆ. ಆದರೂ ಕೆಲವೊಂದು ತುಣುಕುಗಳು ಭೂಮಿಗೆ ಪ್ರವೇಶಿಸಲಿದ್ದು, ಇದರಿಂದ ಅಪಾಯವೇನಿಲ್ಲ ಎಂದು ತಿಳಿದುಬಂದಿದೆ

ಇನ್ನೂ ಅವಶೇಷಗಳು ಭೂಮಿಗೆ ಬೀಳುತ್ತಿರುವುದರಿಂದ 9,400 ಜನರಲ್ಲಿ ಯಾರಿಗಾದರೂ ಒಬ್ಬರಿಗೆ ತೊಂದರೆಯಾಗಬಹುದು ಎಂದು ನಾಸಾ ತಿಳಿಸಿದೆ. ರಕ್ಷಣಾ ಇಲಾಖೆಯ ಪ್ರಕಾರ ಉಪಗ್ರಹವು ಭಾನುವಾರ ಸಂಜೆ 6.40ಕ್ಕೆ ಭೂಮಿಗೆ ಬೀಳಲಿದೆ ಎನ್ನಲಾಗಿದೆ. ಆದರೆ, ಸೋಮವಾರ 1 ಗಂಟೆಗೆ (ಮುಂಜಾನೆ) ಉಪಗ್ರಹ ಬೀಳಬಹುದು ಎಂದು ಕ್ಯಾಲಿಫೋರ್ನಿಯಾ ಮೂಲದ ‘ಏರೋಸ್ಪೇಸ್ ಕಾರ್ಪೊರೇಷನ್’ ಹೇಳಿದೆ.

ಇನ್ನೂ ಉಪಗ್ರಹ ಆಫ್ರಿಕಾ, ಏಷ್ಯಾ, ಮಧ್ಯಪ್ರಾಚ್ಯ, ಉತ್ತರ ಮತ್ತು ದಕ್ಷಿಣ ಅಮೆರಿಕದ ಪಶ್ಚಿಮ ಭಾಗಗಳನ್ನು ಇದು ಹಾದುಹೋಗಬಹುದು ಎಂದು ಅಂದಾಜಿಸಲಾಗಿದೆ.

ಇಆರ್‌ಬಿಎಸ್‌ ಎಂದು ಕರೆಯಲಾಗುವ ‘ಅರ್ತ್‌ ರೇಡಿಯೇಷನ್‌ ಬಜೆಟ್‌ ಸ್ಯಾಟಿಲೆಟ್‌’ ಅನ್ನು 1984 ರಲ್ಲಿ ಬಾಹ್ಯಾಕಾಶ ನೌಕೆ ಚಾಲೆಂಜರ್‌ ಮೂಲಕ ನಭಕ್ಕೆ ಹಾರಿಸಲಾಗಿತ್ತು. ಅದರ ನಿರೀಕ್ಷಿತ ಜೀವಿತಾವಧಿಯು ಎರಡು ವರ್ಷಗಳಷ್ಟೇ ಆಗಿದ್ದವು. ಆದರೆ, 2005ರಲ್ಲಿ ನಿಷ್ಕ್ರಿಯವಾದ ಉಪಗ್ರಹ, ಅಲ್ಲಿಯ ವರೆಗೂ ಓಝೋನ್ ಮತ್ತು ವಾತಾವರಣದ ಇತರ ಮಾಪನಗಳನ್ನು ಮಾಡುತ್ತಲೇ ಇತ್ತು.

ಅಮೆರಿಕದ ಮೊದಲ ಮಹಿಳಾ ಗಗನಯಾನಿ ಸ್ಯಾಲಿ ರೈಡ್ ಅವರು ಚಾಲೆಂಜರ್‌ ನೌಕೆಯ ‘ರೋಬೋಟ್ ಆರ್ಮ್’ ಎಂಬ ಸಾಧನ ಬಳಸಿ ಇಆರ್‌ಬಿಎಸ್‌ ಅನ್ನು ಕಕ್ಷೆಗೆ ಬಿಡುಗಡೆ ಮಾಡಿದ್ದರು. ಅದೇ ಕಾರ್ಯಾಚರಣೆಯಲ್ಲಿ ಅಮೆರಿಕದ ಮಹಿಳಾ ಗಗನಯಾನಿ ಕ್ಯಾಥರಿನ್ ಸುಲ್ಲಿವನ್ ಅವರು ಬಾಹ್ಯಾಕಾಶ ನಡಿಗೆಯನ್ನು ಕೈಗೊಂಡಿದ್ದರು. ಇಬ್ಬರು ಮಹಿಳಾ ಗಗನಯಾತ್ರಿಗಳು ಒಟ್ಟಿಗೆ ಬಾಹ್ಯಾಕಾಶಕ್ಕೆ ಹಾರಿದ್ದು ಅದೇ ಮೊದಲ ಬಾರಿಯೂ ಆಗಿತ್ತು.

2012 ರಲ್ಲಿ ನಿಧನರಾಗಿದ್ದ ಸ್ಯಾಲಿ ರೈಡ್‌ ಅವರಿಗೆ ಅದು ಎರಡನೇ ಮತ್ತು ಅಂತಿಮ ಬಾಹ್ಯಾಕಾಶ ಯಾನವಾಗಿತ್ತು.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *