ಒಂದೂ ಟೆಸ್ಟ್ ಪಂದ್ಯವಾಡದೇ ಮತ್ತೆ ಎರಡನೇ ಸ್ಥಾನಕ್ಕೆ ಕುಸಿದ ಟೀಂ ಇಂಡಿಯಾ – ಅಭಿಮಾನಿಗಳ ಸಂಭ್ರಮಕ್ಕೆ ಬ್ರೇಕ್ ಹಾಕಿದ ಐಸಿಸಿ ಎಡವಟ್ಟು…!!

ಒಂದೂ ಟೆಸ್ಟ್ ಪಂದ್ಯವಾಡದೇ ಮತ್ತೆ ಎರಡನೇ ಸ್ಥಾನಕ್ಕೆ ಕುಸಿದ ಟೀಂ ಇಂಡಿಯಾ – ಅಭಿಮಾನಿಗಳ ಸಂಭ್ರಮಕ್ಕೆ ಬ್ರೇಕ್ ಹಾಕಿದ ಐಸಿಸಿ ಎಡವಟ್ಟು…!!

ನ್ಯೂಸ್ ಆ್ಯರೋ‌ : ಭಾರತ ಕ್ರಿಕೆಟ್‌ ತಂಡ ಬುಧವಾರ ಟೆಸ್ಟ್‌ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಮೂಲಕ, ಮೊದಲ ಬಾರಿಗೆ ಏಕಕಾಲದಲ್ಲಿ ಎಲ್ಲಾ ಮೂರೂ ಮಾದರಿಯಲ್ಲಿ ವಿಶ್ವ ನಂ.1 ಸ್ಥಾನ ಹೊಂದಿದ ಸಾಧನೆಗೈದು ಸಂಭ್ರಮಿಸಿತ್ತು. ಮಧ್ಯಾಹ್ನ 1.30ರ ವೇಳೆಗೆ ಪರಿಷ್ಕತ ರ‍್ಯಾಂಕಿಂಗ್‌ ಪಟ್ಟಿಯನ್ನು ಐಸಿಸಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿತ್ತು.

ಆದರೆ ಐಸಿಸಿ ರ‍್ಯಾಂಕಿಂಗ್ ಪದ್ಧತಿ ನಿರ್ವಹಿಸುವ ತಂಡದ ಅವಾಂತರದಿಂದಾಗಿ ಭಾರತ ತಂಡ 6 ಗಂಟೆಗಳ ಕಾಲ ನಂ. 1 ಪಟ್ಟದಲ್ಲಿ ನೆಲೆಸುವಂತಾಯಿತು. ಐಸಿಸಿ ವೆಬ್​ಸೈಟ್​ನಲ್ಲಿರುವ ರ‍್ಯಾಂಕಿಂಗ್ ಪಟ್ಟಿಯಲ್ಲಿ ಈ ದೋಷ ಕಾಣಿಸಿತ್ತು. ಸಾಮಾನ್ಯವಾಗಿ ಟೆಸ್ಟ್ ರ‍್ಯಾಂಕಿಂಗ್ ಪ್ರತಿ ಸರಣಿಯ ಬಳಿಕ ಪರಿಷ್ಕೃತಗೊಳ್ಳುತ್ತದೆ. ಆದರೆ ಬುಧವಾರ ಮಾತ್ರ, ಸರಣಿಯ ಮೊದಲ ಪಂದ್ಯದ ಬಳಿಕವೇ ‘ಅಪ್​ಡೇಟ್’ ಆಗಿತ್ತು. ಸಂಜೆಯ ವೇಳೆಗೆ ಐಸಿಸಿ ಈ ದೋಷ ಸರಿಪಡಿಸಿಕೊಂಡಿತು.

ಆಸ್ಪ್ರೇಲಿಯಾ ವಿರುದ್ಧ ಕಳೆದ ವಾರ ನಾಗ್ಪುರದಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ ಭಾರತ ಇನ್ನಿಂಗ್‌್ಸ ಹಾಗೂ 132 ರನ್‌ಗಳ ಬೃಹತ್‌ ಗೆಲುವು ಸಾಧಿಸಿತ್ತು. ಇದರೊಂದಿಗೆ ತಂಡದ ರೇಟಿಂಗ್‌ ಅಂಕವೂ ಹೆಚ್ಚಿತು. ಐಸಿಸಿ ಮೊದಲು ಪ್ರಕಟಿಸಿದ ಪಟ್ಟಿಯಲ್ಲಿ ಭಾರತ 115 ರೇಟಿಂಗ್‌ ಅಂಕ ಹೊಂದಿದ್ದರೆ, ಆಸ್ಪ್ರೇಲಿಯಾ 111 ಅಂಕ ಗಳಿಸಿತ್ತು. ಆದರೆ ಬದಲಾದ ಪಟ್ಟಿಯಲ್ಲಿ ಆಸ್ಪ್ರೇಲಿಯಾದ ರೇಟಿಂಗ್‌ ಅಂಕ 126ಕ್ಕೆ ಏರಿಕೆಯಾಗಿದ್ದು, ಭಾರತ 115 ಅಂಕಗಳನ್ನು ಹೊಂದಿದೆ. ಆದರೆ ಭಾರತಕ್ಕೆ ಈಗಲೂ 2-0, 3-1 ಅಥವಾ ಇದಕ್ಕಿಂತ ಹೆಚ್ಚಿನ ಅಂತರದಿಂದ ಸರಣಿ ಗೆದ್ದರೆ ನಂ. 1 ಪಟ್ಟಕ್ಕೇರುವ ಅವಕಾಶವಿದೆ.

ಆದರೆ ಭಾರತ ತನ್ನ ಐತಿಹಾಸಿಕ ಸಂತೋಷವನ್ನು ಕೆಲವೇ ಗಂಟೆಗಳಲ್ಲಿ ಕಳೆದುಕೊಂಡಿದ್ದು‌ ದುರಂತ. ಭಾರತ ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಮೂರೂ ಮಾದರಿಗಳಲ್ಲಿ ವಿಶ್ವದ ನಂ. 1 ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು‌ ಸಹಜವಾಗಿಯೇ ‌ಅಭಿಮಾನಿಗಳ‌ ಹರ್ಷಕ್ಕೆ ಕಾರಣವಾಗಿತ್ತು.

Related post

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷತುಂಬಾ ಚಿಂತೆ ಮಾನಸಿಕ ಶಾಂತಿಗೆ ಭಂಗ ತರಬಹುದು. ಆತಂಕ, ಉದ್ವೇಗದ ಪ್ರತೀ ತುಣುಕೂ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಇದನ್ನು ತಡೆಯಿರಿ. ಬಯಸದೆ ಇರುವ ಯಾವುದೇ ಅತಿಥಿ…
Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…
ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಒಂದು ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದ್ದು ಇದು ನಿಮ್ಮನ್ನಷ್ಟೇ…

Leave a Reply

Your email address will not be published. Required fields are marked *