
ಕೈಯಲ್ಲಿ ಬಿಯರ್ ಬಾಟಲ್, ಟ್ರೋಫಿ ಮೇಲೆ ಕಾಲಿಟ್ಟು ಫೋಟೋಗೆ ಪೋಸ್ ನೀಡಿದ ಮಿಚೆಲ್ ಮಾರ್ಷ್ – ಅಹಂಕಾರ ತೋರಿದ ಆಲ್ ರೌಂಡರ್ ಮೈಚಳಿ ಬಿಡಿಸಿದ ಇಂಡಿಯನ್ಸ್….!
- ಕ್ರೀಡಾ ಸುದ್ದಿ
- November 20, 2023
- No Comment
- 78
ನ್ಯೂಸ್ ಆ್ಯರೋ : ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿಯಲ್ಲಿ ಭಾರತ ತಂಡವನ್ನು ಆಸ್ಟ್ರೇಲಿಯಾ ಮಣಿಸಿದೆ. ಸೋಲುಂಡ ಟೀಂ ಇಂಡಿಯಾ ದುಃಖದಲ್ಲಿ ಮುಳುಗಿದೆ. ಕಾಂಗರೂ ಪಡೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಸತತ ಆರನೇ ಬಾರಿ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ಭಾರತವನ್ನು ಸೋಲಿಸಿ ಭರ್ಜರಿ ಸಂಭ್ರಮದಲ್ಲಿದೆ.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ನಲ್ಲಿ ಭಾರತ ವಿರುದ್ಧ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಮೂರೂ ವಿಭಾಗಗಳಲ್ಲಿ ಅದ್ಭುತ ಪ್ರದರ್ಶನ ತೋರಿ ಸಾಧನೆ ಮಾಡಿದೆ. ಟ್ರೋಫಿ ಗೆದ್ದ ಬಳಿಕ ಆಸ್ಟ್ರೇಲಿಯಾ ಪಡೆಯ ಸಂಭ್ರಮಾಚರಣೆ ಮಾತ್ರ ತಾರಕ್ಕೇರಿದೆ. ಕೆಲ ಆಟಗಾರರು ಟ್ರೋಫಿ ಜೊತೆ ಫೋಟೋಗೆ ಫೋಸ್ ಕೊಟ್ಟಿದ್ದಾರೆ. ಆದರೆ ಆಸೀಸ್ ಆಟಗಾರ ಮಿಚೆಲ್ ಮಾರ್ಷ್ ಕೈಯಲ್ಲಿ ಬಿಯರ್ ಬಾಟಲಿ ಹಿಡಿದು ಟ್ರೋಫಿ ಮೇಲೆಯೇ ಕಾಲುಗಳನ್ನಿಟ್ಟು ಫೋಟೋ ತೆಗೆಸಿಕೊಂಡಿದ್ದಾರೆ. ಇವರ ಈ ಫೋಸ್ ನೀಡಿದ ಭಾರತೀಯರು ಮಾತ್ರ ಸಖತ್ ಗರಂ ಆಗಿದ್ದಾರೆ.
ಫೋಟೋದಲ್ಲಿ ಏನಿದೆ..?
ಮಿಚೆಲ್ ಮಾರ್ಷ್ ಅವರು ಕೈಯಲ್ಲಿ ಬಿಯರ್ ಬಾಟಲ್ ಹಿಡಿದುಕೊಂಡು ವಿಶ್ವಕಪ್ ಟ್ರೋಫಿಯ ಮೇಲೆ ಎರಡೂ ಕಾಲುಗಳನ್ನಿಟ್ಟು ಸೋಫಾದ ಮೇಲೆ ವಿಶ್ರಾಂತಿ ಮಾಡುವುದನ್ನು ಕಾಣಬಹುದು. ಈ ಫೋಟೋವನ್ನು ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಅವರು ಇನ್ಸ್ಟ್ರಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಮಾರ್ಷ್ ಅವರ ಈ ನಡೆಗೆ ಭಾರೀ ವಿರೋಧ ವ್ಯಕ್ತವಾಗಿದೆ.
ಟ್ರೋಫಿ ಮೇಲೆ ಕಾಲಿಟ್ಟ ಮಿಚೆಲ್ ಮಾರ್ಷ್ ಬಗ್ಗೆ ನೆಟ್ಟಿಗರ ಕಾಮೆಂಟ್..
‘ಅದು ವಿಶ್ವಕಪ್, ಸ್ವಲ್ಪ ಗೌರವ ಕೊಡಿ’ ಎಂದು ಬಳಕೆದಾರರು ಕಮೆಂಟ್ ಹಾಕಿದ್ದಾರೆ. ‘ ವಿಶ್ವಕಪ್ ಟ್ರೋಫಿಗೆ ಸ್ವಲ್ಪ ಗೌರವ ತೋರಿಸಿ, ಈ ಟ್ರೋಫಿಯ ಮೌಲ್ಯದ ಬಗ್ಗೆ ಭಾರತೀಯ ಅಭಿಮಾನಿಗಳು ಅಥವಾ ಟೀಂ ಇಂಡಿಯಾವನ್ನು ಕೇಳಿ’ ಎಂದು ಮತ್ತೊಬ್ಬರು ಹೇಳಿದ್ದಾರೆ. ಇನ್ನೂ ಕೆಲವರು ಸಚಿನ್ ತೆಂಡೂಲ್ಕರ್ ಟ್ರೋಫಿಗೆ ಗೌರವ ನೀಡುವ ಫೋಟೋ ಹಂಚಿಕೊಂಡು ಮಾರ್ಷ್ ಗೆ ತಿರುಗೇಟು ನೀಡುತ್ತಿದ್ದಾರೆ.
ಆಸ್ಟ್ರೇಲಿಯಾ ವಿಶ್ವಕಪ್ ಟ್ರೋಫಿ ವಶಪಡಿಸಿಕೊಂಡ ಕೆಲವೇ ಗಂಟೆಗಳ ನಂತರ ಈ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಭಾರತ ವಿರುದ್ಧ ಗೆದ್ದು ಹೊಟೇಲ್ ಗೆ ತೆರಳಿದ ಬಳಿಕ ಈ ಫೋಟೋ ತೆಗೆಯಲಾಗಿದೆ ಎನ್ನಲಾಗ್ತಿದೆ.