
K.L.Rahul : ಟೀಂ ಇಂಡಿಯಾದಲ್ಲಿ ಆಡಿದ್ರೂ ರಾಹುಲ್ ತಾಯಿಗೆ ಸಂತೋಷ ಆಗಿಲ್ವಂತೆ..! – ತಾಯಿಯ ಖುಷಿಯ ಕ್ಷಣ ಯಾವುದೆಂದು ಹೇಳಿಕೊಂಡ ರಾಹುಲ್..
- ಕ್ರೀಡಾ ಸುದ್ದಿ
- November 9, 2023
- No Comment
- 92
ನ್ಯೂಸ್ ಆ್ಯರೋ : ಎಲ್ಲ ತಂದೆ ತಾಯಿ ಆಸೆ ಪಡುವಂತೆ ಭಾರತೀಯ ಕ್ರಿಕೆಟ್ ತಂಡದ ಕೆ.ಎಲ್. ರಾಹುಲ್ ಅವರ ತಾಯಿಗೂ ಒಂದು ಆಸೆ ಇತ್ತು. ಅದು ಏನು ಎಂಬುದನ್ನು ಅವರೀಗ ಹಂಚಿಕೊಂಡಿದ್ದಾರೆ.
ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಜೇಯ 97 ರನ್ ಗಳಿಸಿದ್ದ ಕೆ.ಎಲ್. ರಾಹುಲ್ ಬಳಿಕ ಅಷ್ಟಾಗಿ ಗಮನ ಸೆಳೆಯದೇ ಇದ್ದರೂ ಬಳಿಕ ಬಾಲಿವುಡ್ ನಟ ಸುನಿಲ್ ಶೆಟ್ಟಿಯ ಅಳಿಯನಾಗಿ ಹೆಚ್ಚು ಸುದ್ದಿಯಲ್ಲಿದ್ದರು. ಇದೀಗ ಅವರು ತಮ್ಮ ತಾಯಿಯ ಕುರಿತಾಗಿ ಮಾತನಾಡಿರುವ ಹಳೆಯ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಮಂಗಳೂರು ಮೂಲದವರಾದ ಕೆ.ಎಲ್. ರಾಹುಲ್ ಅವರ ತಾಯಿ ರಾಜೇಶ್ವರಿ ಲೋಕೇಶ್ ಇತಿಹಾಸ ಉಪನ್ಯಾಸಕರಾಗಿದ್ದಾರೆ. ತಾಯಿಗೆ ನಾನು ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದು ಹೆಚ್ಚು ಖುಷಿ ಕೊಟ್ಟಿರಲಿಲ್ಲ. ಅವರಿಗೆ ಖುಷಿ ಕೊಟ್ಟಿದ್ದು ನನಗೆ ಆರ್‌ಬಿಐನಲ್ಲಿ ಕೆಲಸ ಸಿಕ್ಕಿದ್ದು. ಮಗನಿಗೆ ಕೇಂದ್ರ ಸರ್ಕಾರದ ಕೆಲಸ ಸಿಕ್ಕಿಬಿಟ್ಟಿತು ಎನ್ನುವ ಖುಷಿಯೇ ಅವರಿಗೆ ಹೆಚ್ಚಾಗಿತ್ತು. ಇದು ಅವರ ಬದುಕಿನ ಅತ್ಯಂತ ಸಂತೋಷದ ಕ್ಷಣ.
ಆರ್‌ಬಿಐ ಕೆಲಸ ಸಿಗುವ ಮೊದಲು ನಾನು ನಾಲ್ಕು ವರ್ಷ ರಾಷ್ಟ್ರೀಯ ತಂಡಕ್ಕೆ ಕ್ರಿಕೆಟ್ ಆಡಿದ್ದೆ. ಆದರೆ, ಇದು ಅಮ್ಮನಿಗೆ ಖುಷಿ ಕೊಟ್ಟಿರಲಿಲ್ಲ. ಆದರೆ, ಆರ್‌ಬಿಐನಲ್ಲಿ ಕೆಲಸ ಸಿಕ್ಕಾಗ ಮಗ ಜೀವನದಲ್ಲಿ ಸೆಟಲ್ ಆದ ಎನ್ನುವ ಸಂತೋಷ ಅವರಲ್ಲಿತ್ತು ಎಂದು ರಾಹುಲ್ ಹೇಳಿದ್ದಾರೆ.