
ಭಾರತ v/s ಆಸ್ಟ್ರೇಲಿಯಾ ಫೈನಲ್ ಪಂದ್ಯಕ್ಕೆ ಪ್ರಧಾನಿ ಮೋದಿ ಸೇರಿದಂತೆ ಗಣ್ಯಾತಿಗಣ್ಯರು ಭಾಗಿ – ಯಾರಿಗೆಲ್ಲಾ ಆಹ್ವಾನ ಗೊತ್ತಾ..?
- ಕ್ರೀಡಾ ಸುದ್ದಿ
- November 17, 2023
- No Comment
- 113
ನ್ಯೂಸ್ ಆ್ಯರೋ : ಕ್ರಿಕೆಟ್ ಅಂದ್ರೆ ಇಷ್ಟವಿಲ್ಲದವರು ಯಾರು ಹೇಳಿ..? ಕ್ರಿಕೆಟ್ ಐಪಿಎಲ್ ನ್ನಂತೂ ಊಟ, ನಿದ್ದೆ ಬಿಟ್ಟು ನೋಡೋರಿದ್ದಾರೆ. ಕ್ರಿಕೆಟ್ ಗೆ ಹುಡುಗೀರೂ ಕೂಡ ಫ್ಯಾನ್ಸ್ ಅಂದ್ರೆ ತಪ್ಪಲ್ಲ ಬಿಡಿ.
ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ 2023ರ ಐಸಿಸಿ ವಿಶ್ವಕಪ್ ಪ್ರಶಸ್ತಿಗಾಗಿ ಭಾನುವಾರ ನವೆಂಬರ್ 19ರಂದು ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಸೆಣಸಾಟ ನಡೆಸಲಿದೆ.
ಪಂದ್ಯಕ್ಕೆ ಯಾರಿಗೆಲ್ಲ ಇದೆ ಆಹ್ವಾನ..?
ಪ್ರಧಾನಿ ನರೇಂದ್ರ ಮೋದಿ, ಖ್ಯಾತ ನಟ ರಜಿನಿಕಾಂತ್ ಸೇರಿದಂತೆ ಇತರ ಗಣ್ಯರು ಪಂದ್ಯಕ್ಕೆ ಆಗಮಿಸುವ ಸಾಧ್ಯತೆ ಇದೆ. ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಆಲ್ಬನಿಸ್ ಅವರನ್ನು ಕೂಡಾ ಆಹ್ವಾನಿಸಲಾಗಿದೆ. ಅವರು ಫೈನಲ್ ಪಂದ್ಯದ ದಿನ ಬಂದಿಳಿಯುವ ಸಾಧ್ಯತೆ ಇದೆ.
ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ ಭಾನುವಾರ ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿಯವರು ಕ್ರೀಡಾಂಗಣಕ್ಕೆ ಆಗಮಿಸಲಿದ್ದಾರೆ. ಈ ಮಾಹಿತಿ ಗುಜರಾತ್ ಪೊಲೀಸ್ ಮೂಲದಿಂದ ಬಂದಿದೆ. ಇನ್ನು ಭಾರತದ ಇಬ್ಬರು ವಿಶ್ವಕಪ್ ವಿಜೇತ ನಾಯಕರಾದ ಕಪಿಲ್ ದೇವ್ ಮತ್ತು ಎಂಎಸ್ ಧೋನಿ ಸೇರಿದಂತೆ ಈವರೆಗೆ ಏಕದಿನ ವಿಶ್ವಕಪ್ ಗೆದ್ದ ನಾಯಕರನ್ನೂ ಕೂಡಾ ಆಹ್ವಾನಿಸಲಾಗಿದೆ.
ಹಾಗೆಯೇ ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್ ಮತ್ತಿತ್ತರ ಮಾಜಿ ಕ್ರಿಕೆಟಿಗರು ಕೂಡಾ ನರೇಂದ್ರ ಮೋದಿ ಸ್ಟೇಡಿಯಂಗೆ ಆಗಮಿಸುವ ನಿರೀಕ್ಷೆಯಿದೆ.
ಫೈನಲ್ ಪಂದ್ಯದಲ್ಲಿ ಮನರಂಜನೆಯ ಭಾಗವಾಗಿ ಏನೆಲ್ಲಾ ಇರಲಿದೆ..?
ಖಲಾಸಿ ಖ್ಯಾತಿಯ ಗಾಯಕರಾದ ದುವಾ ಲಿಪಾ ಮತ್ತು ಆದಿತ್ಯ ಗಾಧವಿ ಅವರು ಕೆಲವು ಜನಪ್ರಿಯ ಹಾಡುಗಳನ್ನು ಹಾಡಿದರೆ ಸಂಗೀತ ನಿರ್ದೇಶಕ ಪ್ರೀತಮ್ ಚಕ್ರವರ್ತಿ ಅವರು ಕೆಲವು ಬಾಲಿವುಡ್ ಚಾರ್ಟ್ ಬಸ್ಟರ್ ಗಳನ್ನು ಪ್ರದರ್ಶಿಸಲಿದ್ದಾರೆ.
ಭಾರತೀಯ ವಾಯುಪಡೆಯ ಸೂರ್ಯ ಕಿರಣ್ ತಂಡ ಕೂಡಾ ವಿಶ್ವಕಪ್ ಫೈನಲ್‌ಗೆ ಏರ್ ಶೋ ಪ್ರದರ್ಶನ ನೀಡಲಿದೆ.
ಈ ಬಾರಿ ಟ್ರೋಫಿಗಾಗಿ ಸೆಣಸಾಡುವ ಪಂದ್ಯದಲ್ಲಿ ಯಾರು ಯಾರನ್ನು ಸೋಲಿಸಲಿದ್ದಾರೆ ಎಂಬುದನ್ನು ಎದುರು ನೋಡಲಿದೆ. ಇದೆಲ್ಲದರ ಹೊರತಾಗಿ ಪಂದ್ಯದಲ್ಲಿ ಭಾರತೀಯ ಕ್ರಿಕೆಟಿಗರ ನಿಕಟ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಕೂಡಾ ಆಗಮಿಸಲಿದ್ದಾರೆ.