ಬಂಟ್ವಾಳ : ಕಬಡ್ಡಿ ಅಂಗಳದಲ್ಲೂ ಸಂಸ್ಕಾರ ಮರೆಯದ ಯುವಕ – ಅಯ್ಯಪ್ಪ ವ್ರತಧಾರಿಯನ್ನು ಕಾಲಿನಿಂದ ತುಳಿದ ಬಳಿಕ ಕೈಯಿಂದ ನಮಸ್ಕರಿಸಿದ ರೈಡರ್ ; ವಿಡಿಯೋ ವೈರಲ್…

ಬಂಟ್ವಾಳ : ಕಬಡ್ಡಿ ಅಂಗಳದಲ್ಲೂ ಸಂಸ್ಕಾರ ಮರೆಯದ ಯುವಕ – ಅಯ್ಯಪ್ಪ ವ್ರತಧಾರಿಯನ್ನು ಕಾಲಿನಿಂದ ತುಳಿದ ಬಳಿಕ ಕೈಯಿಂದ ನಮಸ್ಕರಿಸಿದ ರೈಡರ್ ; ವಿಡಿಯೋ ವೈರಲ್…

ನ್ಯೂಸ್ ಆ್ಯರೋ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೆಲಿಂಜದಲ್ಲಿ ಇತ್ತೀಚಿಗೆ ಹಮ್ಮಿಕೊಳ್ಳಲಾದ ಕಬಡ್ಡಿ ಪಂದ್ಯಾಟದಲ್ಲಿ ಎದುರಾಳಿ ತಂಡದಲ್ಲಿದ್ದ ಅಯ್ಯಪ್ಪ ಮಾಲಾಧಾರಿಯೊಬ್ಬರನ್ನು ಕಾಲಿನಿಂದ ಮೆಟ್ಟಿದ್ದಕ್ಕಾಗಿ ಕೈನೀಡಿ ನಮಸ್ಕರಿಸಿದ ಆಟಗಾರನೊಬ್ಬನ ಸಂಸ್ಕಾರಯುತ ನಡೆಗೆ ಸಾರ್ವಜನಿಕ ವಲಯದಿಂದ ಸಾಕಷ್ಟು ಪ್ರಶಂಸೆ ಕೇಳಿ ಬರುತ್ತಿದೆ.

‘ಜನವರಿ ತಿಂಗಳು ಅಯ್ಯಪ್ಪನಿಗೆ ಮೀಸಲು’ ಎಂಬಂತೆ ಈ ಮಾಸದಲ್ಲಿ ಲಕ್ಷಾಂತರ ಅಯ್ಯಪ್ಪ ಸ್ವಾಮಿ ಭಕ್ತರು ಮಾಲೆ ಹಾಕಿ ಕಠಿಣ ವ್ರತ ಆಚರಿಸುತ್ತಾರೆ. ವ್ರತದೊಂದಿಗೆ ಸಾಕಷ್ಟು ಮಾಲಾಧಾರಿಗಳು ಕೆಲಸ, ಕ್ರೀಡೆಗಳಲ್ಲಿ ಭಾಗವಹಿಸುತ್ತಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೆಲಿಂಜ ಶ್ರೀ ಉಳ್ಳಾಲ್ತಿ ದೈವಸ್ಥಾನದ ವಠಾರದಲ್ಲಿ ಕಳೆದ ಜನವರಿ 1ರಂದು ಕೇಸರಿ ಫ್ರೆಂಡ್ಸ್ ಕೆಲಿಂಜ ಇದರ ಆಶ್ರಯದಲ್ಲಿ ಯುವರತ್ನ‌ ಟ್ರೋಫಿ ಕಬಡ್ಡಿ ಪಂದ್ಯಾಟ ಆಯೋಜಿಸಲಾಗಿತ್ತು.

ಸೆಮಿಫೈನಲ್ ನಲ್ಲಿ ಎದುರಾದ ಎರಡು ತಂಡಗಳಲ್ಲಿ ಒಂದು ತಂಡದಲ್ಲಿ ಅಯ್ಯಪ್ಪ ಮಾಲಾಧಾರಿಯೊಬ್ಬರು ಭಾಗವಹಿಸಿದ್ದರು. ಎದುರಾಳಿ ತಂಡದ ಆಟಗಾರ ರೈಡ್ ಗೆಂದು ಬಂದವನೇ ಅಯ್ಯಪ್ಪ ಮಾಲಾಧಾರಿಯನ್ನು ಶೂ ಧರಿಸಿದ್ದ ಕಾಲಿನಿಂದ ಔಟ್ ಮಾಡುವುದಕ್ಕಾಗಿ ಟೋ ಟಚ್ ಮಾಡಿಬಿಟ್ಟಿದ್ದ.

ಆದರೆ ಆ ಮರು ಕ್ಷಣವೇ ಆತನ ಸಂಸ್ಕಾರ ಭಾವ ಎಚ್ಚರಗೊಂಡಿತು ಅದಕ್ಕಾಗಿ ಆತ ಅಯ್ಯಪ್ಪ ಮಾಲಾಧಾರಿಗೆ ಕೈ ನೀಡಿ ನಮಸ್ಕರಿಸಿದ. ಸಂಸ್ಕಾರ ಮರೆತವರಿಗೂ ಸಂಸ್ಕಾರ ನೆನಪಿಸುವಂತಿದ್ದ ಆ ಯುವಕನ ನಡೆಗೆ ಇಡೀ ಕಬಡ್ಡಿ ಕ್ರೀಡಾಂಗಣವೇ ಪಂದ್ಯಾಟದ ನಂತರ ಮೆಚ್ಚುಗೆ ಸೂಚಿಸಿತು. ಜೊತೆಗೆ ಸದ್ಯ ಈ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್ ವೈರಲ್ ಆಗುತ್ತಿದೆ. ಮುಟ್ಟಿ ನಮಸ್ಕರಿಸಿದ ಯುವಕ ಕಿರಣ್ ಬೆಳ್ಳಾರೆ ಎಂದು ತಿಳಿದುಬಂದಿದೆ.

ಪ್ರಸ್ತುತ ಕಾಲಘಟ್ಟದಲ್ಲಿ ಯುವ ಜನರಿಗೆ ದೇವರ ಮೇಲಿನ ಭಕ್ತಿ, ಸಂಸ್ಕೃತಿ – ಆಚಾರಗಳ ಮೇಲಿನ ಗೌರವ ಕಡಿಮೆಯಾಗುತ್ತಿದೆ. ಆ ಕಾರಣವೇ ದೈವ ನಿಂದನೆ, ಧಾರ್ಮಿಕ ಕಲಹಗಳಂತ ಹಲವಾರು ಸುದ್ದಿಗಳು ನಿರಂತರವಾಗಿ ಕೇಳುತ್ತಲೇ ಇರುತ್ತವೆ. ಆದರೆ ಮೊನ್ನೆಯಷ್ಟೆ ಭಾರತೀಯ ಮಣ್ಣಿನ ದೇಸಿ ಕ್ರೀಡೆ ಕಬಡ್ಡಿಯಲ್ಲಿ ನಡೆದ ಘಟನೆಯಂತು ಪ್ರತಿಯೊಬ್ಬ ಯುವಕರಿಗೂ ಸ್ಪೂರ್ತಿಯಾಗುವಂತಹದ್ದು, ಅಡಗಿರುವ ಸಂಸ್ಕಾರವನ್ನು ಬಡಿದೆಚ್ಚರಿಸುವಂತಹದ್ದು..!!

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *