ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ ಯಾವಾಗ ಅನ್ನೋ ಗೊಂದಲ ಇದ್ಯಾ…? – ಇಂದಾ ಅಥವಾ ನಾಳೆಯಾ? ಇಲ್ಲಿದೆ ನೋಡಿ ಸ್ಪಷ್ಟ ಮಾಹಿತಿ….

ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ ಯಾವಾಗ ಅನ್ನೋ ಗೊಂದಲ ಇದ್ಯಾ…? – ಇಂದಾ ಅಥವಾ ನಾಳೆಯಾ? ಇಲ್ಲಿದೆ ನೋಡಿ ಸ್ಪಷ್ಟ ಮಾಹಿತಿ….

ನ್ಯೂಸ್ ಆ್ಯರೋ : ಸಾಮಾನ್ಯವಾಗಿ ಹಿಂದೂಗಳಿಗೆ ದೀಪಾವಳಿ, ಯುಗಾದಿ, ನವರಾತ್ರಿ ಹಬ್ಬಗಳು ಹೇಗೋ ಮಕರ ಸಂಕ್ರಮಣವನ್ನು ಕೂಡಾ ಅತ್ಯಂತ ಅರ್ಥಪೂರ್ಣವಾಗಿ ಆಚರಿಸುತ್ತಾರೆ. ಪ್ರತಿ ವರ್ಷ ಜನವರಿ 14 ರಂದು ಮಕರ ಸಂಕ್ರಾಂತಿ ಬರುತ್ತದೆ. ಆದರೆ, ಈ ವರ್ಷದ ದಿನಾಂಕದ ಬಗ್ಗೆ ಜನರಲ್ಲಿ ಸಾಕಷ್ಟು ಗೊಂದಲಗಳಿವೆ. ಕೆಲವರು ಮಕರ ಸಂಕ್ರಾಂತಿ ಜನವರಿ 14ರಂದು ಎಂದು ಹೇಳಿದರೆ, ಇನ್ನೂ ಕೆಲವರು 15ರಂದು ಎನ್ನುತ್ತಾರೆ.

ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿದಾಗ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯನ್ನು ದೇಶದ ವಿವಿಧ ರಾಜ್ಯಗಳಲ್ಲಿ ಒಂದೊಂದು ವಿಧವಾಗಿ ಆಚರಣೆ ಮಾಡಲಾಗುತ್ತದೆ. ಉತ್ತರಾಯಣ, ಪೊಂಗಲ್, ಸಂಕ್ರಾಂತಿ ಮುಂತಾದ ಹಲವು ಹೆಸರುಗಳಿಂದ ಈ ಹಬ್ಬವನ್ನು ಕರೆಯಲಾಗುತ್ತದೆ. ಪ್ರತಿ ವರ್ಷ ಜನವರಿ 14 ರಂದು ಮಕರ ಸಂಕ್ರಾಂತಿ ಬರುತ್ತದೆ.

ಆದರೆ, ಈ ವರ್ಷದ ದಿನಾಂಕದ ಬಗ್ಗೆ ಜನರಲ್ಲಿ ಸಾಕಷ್ಟು ಗೊಂದಲಗಳಿವೆ. ಕೆಲವರು ಮಕರ ಸಂಕ್ರಾಂತಿ ಜನವರಿ 14ರಂದು ಎಂದು ಹೇಳಿದರೆ, ಇನ್ನೂ ಕೆಲವರು 15ರಂದು ಎನ್ನುತ್ತಾರೆ.
ಮಕರ ಸಂಕ್ರಾಂತಿಯು ಹಿಂದೂ ಸುಗ್ಗಿಯ ಹಬ್ಬವಾಗಿದ್ದು, ಇದನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ.

ಮುಖ್ಯವಾಗಿ ಸಂಕ್ರಾಂತಿ ಎಂದರೆ ಸೂರ್ಯನ ಚಲನೆ, ಮಕರ ಸಂಕ್ರಾಂತಿ ಎಂದರೆ ವರ್ಷದಲ್ಲಿ ಬರುವ ಎಲ್ಲಾ 12 ಸಂಕ್ರಾಂತಿಗಳಲ್ಲಿ ಪ್ರಮುಖವಾಗಿದೆ. ಮಕರ ಸಂಕ್ರಾಂತಿ ಸಾಮಾನ್ಯವಾಗಿ ಪ್ರತಿ ವರ್ಷ ಜನವರಿ 14 ರಂದು ಬರುತ್ತದೆ.

ದೃಕ್ ಪಂಚಾಂಗ ಏನ್ ಹೇಳುತ್ತೆ ಗೊತ್ತಾ…?

ದೃಕ್ ಪಂಚಾಂಗದ ಪ್ರಕಾರ, ಈ ವರ್ಷ ಜನವರಿ 14 ರಂದು ನಡೆಯುವ ಸಂಕ್ರಾಂತಿ ಹಬ್ಬವನ್ನು ಜನವರಿ 15 ರಂದು ಆಚರಿಸಲಾಗುತ್ತದೆ. ಸಂಕ್ರಾಂತಿ ತಿಥಿಯು ಜನವರಿ 15 ರಂದು ಬೆಳಿಗ್ಗೆ 2:45 ರಿಂದ ಪ್ರಾರಂಭವಾಗುತ್ತದೆ.

ಇನ್ನು ಮಕರ ಸಂಕ್ರಾಂತಿ ಪುಣ್ಯಕಾಲವು ಬೆಳಿಗ್ಗೆ 7:15 ರಿಂದ ರಾತ್ರಿ 8:07 ರವರೆಗೆ 10 ಗಂಟೆ 31 ನಿಮಿಷಗಳವರೆಗೆ ಇರುತ್ತದೆ. ಮಕರ ಸಂಕ್ರಾಂತಿ ಮಹಾ ಪುಣ್ಯಕಾಲ 7:15 ಕ್ಕೆ ಪ್ರಾರಂಭವಾಗಿ, 1 ಗಂಟೆ 45 ನಿಮಿಷಗಳ ಕಾಲ ಅಂದರೆ 9.00 ಕ್ಕೆ ಮುಕ್ತಾಯಗೊಳ್ಳುತ್ತದೆ. ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸುವ ಪ್ರದೇಶದ ಆಧಾರದ ಮೇಲೆ ಹಲವಾರು ಹೆಸರುಗಳಿಂದ ಕರೆಯಲಾಗುತ್ತದೆ.

ಉತ್ತರ ಭಾರತದ ಹಿಂದೂಗಳು ಮತ್ತು ಸಿಖ್ಖರು ಇದನ್ನು ಮಾಘಿ ಎಂದು ಕರೆಯುತ್ತಾರೆ, ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಇದನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಮಧ್ಯ ಭಾರತದಲ್ಲಿ, ಇದನ್ನು ಸುಕಾರತ್ ಎಂದು ಕರೆಯಲಾಗುತ್ತದೆ, ಅಸ್ಸಾಮಿಗಳು ಇದನ್ನು ಮಾಗ್ ಬಿಹು ಎಂದು ಕರೆಯುತ್ತಾರೆ.

ಪೂರ್ವ ಉತ್ತರ ಪ್ರದೇಶದಲ್ಲಿ ಇದನ್ನು ಖಿಚಡಿ ಎಂದು ಕರೆಯಲಾಗುತ್ತದೆ. ಗುಜರಾತ್ ಮತ್ತು ರಾಜಸ್ಥಾನದಲ್ಲಿ ಇದನ್ನು ಉತ್ತರಾಯಣ ಎಂದು ಕರೆಯಲಾಗುತ್ತದೆ ಮತ್ತು ತಮಿಳುನಾಡಿನಲ್ಲಿ ಇದನ್ನು ತೈ ಪೊಂಗಲ್ ಅಥವಾ ಪೊಂಗಲ್ ಎಂದು ಕರೆಯಲಾಗುತ್ತದೆ.

ಮಕರ ಜ್ಯೋತಿ ದರ್ಶನ ಯಾವಾಗ?

ಶಬರಿಮಲೆ ದೇವಸ್ಥಾನದ ಮೂಲಗಳ ಪ್ರಕಾರ ನಾಳೆ ಅಂದರೆ ಜನವರಿ 15ರಂದು ಪೊನ್ನಂಬಲ ಮೇಡುವಿನಲ್ಲಿ ಮಕರ ಜ್ಯೋತಿ ದರ್ಶನವಾಗಲಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *