ಭಗವಾನ್ ವಿಷ್ಣುವಿನ ವಿಶೇಷ ಅನುಗ್ರಹ ಪಡೆಯಬೇಕೇ…? – ಹಾಗಾದ್ರೆ ತಪ್ಪದೇ ಕಾರ್ತಿಕ ಮಾಸದಲ್ಲಿ ಈ ಕೆಲಸವನ್ನು ಮಾಡಿ..

ಭಗವಾನ್ ವಿಷ್ಣುವಿನ ವಿಶೇಷ ಅನುಗ್ರಹ ಪಡೆಯಬೇಕೇ…? – ಹಾಗಾದ್ರೆ ತಪ್ಪದೇ ಕಾರ್ತಿಕ ಮಾಸದಲ್ಲಿ ಈ ಕೆಲಸವನ್ನು ಮಾಡಿ..

ನ್ಯೂಸ್ ಆ್ಯರೋ : ಕಾರ್ತಿಕ ಮಾಸವು ನ.14ರಿಂದ ಆರಂಭವಾಗಿದ್ದು, ಈ ಮಾಸದಲ್ಲಿ ಧರ್ಮಕಾರ್ಯಕ್ಕೆ ಹೆಚ್ಚಿನ ಮಹತ್ವವಿದೆ. ದೀಪಾವಳಿ ಸೇರಿದಂತೆ ಹಲವು ಪ್ರಮುಖ ಹಬ್ಬಗಳೊಂದಿಗೆ ಈ ಮಾಸವನ್ನು ಸ್ವಾಗತಿಸಲಾಗುತ್ತದೆ. ಕಾರ್ತಿಕ ಮಾಸವು ಅತ್ಯಂತ ಪವಿತ್ರವಾದ ಮಾಸವಾಗಿದೆ. ಸ್ಕಂದ ಪುರಾಣದಲ್ಲಿ, ಕಾರ್ತಿಕ ಮಾಸವನ್ನು ಎಲ್ಲಾ ತಿಂಗಳುಗಳಲ್ಲಿ ಅತ್ಯುತ್ತಮವೆಂದು ಕರೆಯಲಾಗುತ್ತದೆ.

ಕಾರ್ತಿಕ ಮಾಸವು ವರ್ಷದ ಎಂಟನೇ ತಿಂಗಳು. ಸನಾತನ ಧರ್ಮದಲ್ಲಿ ಈ ಮಾಸವನ್ನು ಚಾತುರ್ಮಾಸದ ಕೊನೆಯ ತಿಂಗಳು ಎಂದು ಪರಿಗಣಿಸಲಾಗಿದೆ. ಭಗವಾನ್ ವಿಷ್ಣು, ಲಕ್ಷ್ಮಿ ದೇವಿ ಮತ್ತು ತುಳಸಿಯನ್ನು ಪೂಜಿಸಲು ಈ ತಿಂಗಳು ಅತ್ಯುತ್ತಮ ತಿಂಗಳು ಎಂದು ಪರಿಗಣಿಸಲಾಗಿದೆ. ಈ ಮಾಸದಲ್ಲಿ ಭಕ್ತನು ವಿಶೇಷವಾಗಿ ವಿಷ್ಣುವಿನ ಆಶೀರ್ವಾದವನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ.

ಕಾರ್ತಿಕ ಮಾಸದಲ್ಲಿ ಶಿಸ್ತನ್ನು ಪಾಲಿಸುವವರ ಮತ್ತು ಉತ್ತಮ ಕೆಲಸ ಮಾಡುವವರ ಎಲ್ಲ ತೊಂದರೆಗಳನ್ನು ಶ್ರೀ ಹರಿ ದೂರ ಮಾಡುತ್ತಾನೆ. ಕಾರ್ತಿಕ ಮಾಸದಲ್ಲಿ ಈ ನಾಲ್ಕು ಕೆಲಸಗಳನ್ನು ಮಾಡುವವರಿಗೆ ಭಗವಾನ್ ವಿಷ್ಣುವಿನ ವಿಶೇಷ ಅನುಗ್ರಹವಿದೆ ಎಂದು ನಂಬಲಾಗಿದೆ. ಈ 4 ಕಾರ್ಯಗಳು ಯಾವುವು? ತಿಳಿಯೋಣ.

ಸ್ನಾನ
ಈ ಬಗ್ಗೆ ವಿವರಣೆಯು ಪುರಾಣಗಳು ಮತ್ತು ಧಾರ್ಮಿಕ ಗ್ರಂಥಗಳಲ್ಲಿ ಕಂಡುಬರುತ್ತದೆ. ಇದರಲ್ಲಿ ಹಿಂದೂ ಕ್ಯಾಲೆಂಡರ್‌ನ ಕಾರ್ತಿಕ ಮಾಸದಲ್ಲಿ ಪವಿತ್ರ ನದಿಯಲ್ಲಿ ಸ್ನಾನ ಮಾಡುವುದು ಅದೃಷ್ಟವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗಿದೆ. ಕಾರ್ತಿಕ ಮಾಸದಲ್ಲಿ ಯಮುನಾ ನದಿಗೆ ವಿಶೇಷ ಪೂಜೆ ಮಾಡಲಾಗುತ್ತದೆ.

ಇದರೊಂದಿಗೆ ಕಾರ್ತಿಕ ಮಾಸದ ಯಮದ್ವಿತೀಯ ದಿನದಂದು ಯಮುನಾದಲ್ಲಿ ಸ್ನಾನ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಏಕೆಂದರೆ ಈ ದಿನ ಯಮನ ಸಹೋದರಿ ಯಮುನೆಗೆ ವಿಶೇಷವಾದುದಾಗಿದೆ. ಭಾಯಿ ದೂಜ್ ಕಾರಣಕ್ಕೆ ಆಕೆಯ ಅಣ್ಣ ಮನೆಗೆ ಬಂದು ಆತಿಥ್ಯ ಸ್ವೀಕರಿಸುವ ಸಂತೋಷದಲ್ಲಿರುವ ಆಕೆ, ಅಂದು ತನ್ನಲ್ಲಿ ಸ್ನಾನ ಮಾಡುವವರ ಒಳಿತಿಗಾಗಿ ಹರಸುತ್ತಾಳೆ.

ತುಳಸಿ ಪೂಜೆ
ಕಾರ್ತಿಕ ಮಾಸದಲ್ಲಿ ತುಳಸಿ ಪೂಜೆಯ ವಿಶೇಷ ಧಾರ್ಮಿಕ ಮಹತ್ವವನ್ನು ಹೇಳಲಾಗಿದೆ. ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ತುಳಸಿ ವಿವಾಹವನ್ನು ಮಾಡಲಾಗುತ್ತದೆ. ಈ ಮಾಸ ಪೂರ್ತಿ ತುಳಸಿಯನ್ನು ಪೂಜಿಸುವುದರಿಂದ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಸಿಗುತ್ತದೆ ಎಂದು ನಂಬಲಾಗಿದೆ. ಜೊತೆಗೆ ಭಯದಿಂದ ಮುಕ್ತಿ ಸಿಗುತ್ತದೆ.

ದೀಪದಾನ
ಧಾರ್ಮಿಕ ನಂಬಿಕೆಯ ಪ್ರಕಾರ, ಕಾರ್ತಿಕ ಮಾಸದ ಪ್ರತಿ ಸಂಜೆ ಸಮಯದಲ್ಲಿ, ಪವಿತ್ರ ನದಿ ಅಥವಾ ತುಳಸಿ ಬಳಿ ದೀಪವನ್ನು ದಾನ ಮಾಡಬೇಕು. ದೀಪವನ್ನು ದಾನ ಮಾಡುವುದರಿಂದ ಜೀವನದಲ್ಲಿ ಸಕಾರಾತ್ಮಕತೆ ಬರುತ್ತದೆ. ದೇವರ ಆಶೀರ್ವಾದವೂ ಸಿಗುತ್ತದೆ.

ಈ ಬಗ್ಗೆ ಸ್ವತಃ ವಿಷ್ಣುವೇ ಬ್ರಹ್ಮನಿಗೆ ಹೇಳಿದ್ದು, ಬ್ರಹ್ಮನು ನಾರದರಿಗೂ, ನಾರದನು ಮಹಾರಾಜ ಪ್ರತ್ಯುವಿಗೆ ಹೇಳಿದ ಬಗ್ಗೆ ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಗಳಿವೆ. ದಲ್ಲದೆ, ಈ ಮಾಸದಲ್ಲಿ ದೀಪವನ್ನು ದಾನ ಮಾಡಬೇಕು. ಹೀಗೆ ದೀಪದಾನ ಮಾಡುವಾಗ ಯಾವುದೇ ಕಾರಣಕ್ಕೂ ಒಂಟಿ ದೀಪ ಕೊಡಬೇಡಿ. ಜೋಡಿ ದೀಪದಲ್ಲಿ ಅರಿಶಿನ ಕುಂಕುಮ ಹಾಕಿ ಸ್ವಲ್ಪ ತುಪ್ಪ ಹಾಕಿ ದಾನ ನೀಡಿ.

ನೆಲ್ಲಿಕಾಯಿ ಪೂಜೆ
ಆಯುರ್ವೇದದಲ್ಲಿ, ನೆಲ್ಲಿಕಾಯಿಯನ್ನು ಪ್ರಬಲ ಔಷಧವೆಂದು ಪರಿಗಣಿಸಲಾಗುತ್ತದೆ. ಕಾರ್ತಿಕ ಮಾಸದಲ್ಲಿ ಈ ಅಮೃತ ಮರಕ್ಕೆ ವಿಶೇಷ ಪೂಜೆ ಮಾಡಲಾಗುತ್ತದೆ. ಅತ್ಯುತ್ತಮ ಔಷಧಿಯಾಗಿರುವ ಆಮ್ಲಾ ಧಾರ್ಮಿಕ ಮಹತ್ವವನ್ನು ಹೊಂದಿದೆ. ಲಕ್ಷ್ಮಿಯು ಆಮ್ಲಾ ಮರವನ್ನು ಶಿವ ಮತ್ತು ವಿಷ್ಣುವಿನ ಸಂಕೇತವಾಗಿ ಪೂಜಿಸುತ್ತಾಳೆ ಎಂದು ನಂಬಲಾಗಿದೆ.

Related post

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ ಸೂಪರ್

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ…

ನ್ಯೂಸ್ ಆರೋ: ಆರೋಗ್ಯಕ್ಕೆ ಹಿತ ಎನಿಸುವ ಹಾಗೂ ರುಚಿಕಟ್ಟಾದ ರೆಸಿಪಿಯೊಂದನ್ನು ನಾವಿಂದು ಹೇಳಿಕೊಡುತ್ತೇವೆ. ಈ ಗೋಧಿ ಉಸ್ಲಿ ರೆಸಿಪಿಯನ್ನು ನೀವು ಬೇಕೆಂದರೆ ಸ್ನ್ಯಾಕ್ಸ್ ಆಗಿಯೂ ಬೆಳಗ್ಗಿನ ಉಪಾಹಾರವಾಗಿಯೂ ಮಾಡಿ…
ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ ಆಯ್ಕೆ

ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ…

ನ್ಯೂಸ್ ಆರೋ: ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯು ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಒಟ್ಟು 2 ಪ್ರಾಜೆಕ್ಟ್​ ಅಸೋಸಿಯೇಟ್-I ಹುದ್ದೆ ಖಾಲಿ ಇದ್ದು, ಅರ್ಹ…
ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ನ್ಯೂಸ್ ಆ್ಯರೋ : ಇಂದು  4ನೇ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯುತ್ತಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿ ಹಲವೆಡೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಇದೀಗ ಸಾಮಾನ್ಯರಂತೆಯೇ ಸರತಿ…

Leave a Reply

Your email address will not be published. Required fields are marked *