ನಿಮ್ಮ ದಾಂಪತ್ಯದಲ್ಲಿ ದೈಹಿಕ ಸ್ಪರ್ಶವನ್ನು ಹೆಚ್ಚಿಸಲು ಏನು ಮಾಡಬೇಕು? – ಸುಖೀ ದಾಂಪತ್ಯ ಜೀವನಕ್ಕೆ ಇಲ್ಲಿದೆ ಅತ್ಯಮೂಲ್ಯ ಸಲಹೆಗಳು‌..

ನಿಮ್ಮ ದಾಂಪತ್ಯದಲ್ಲಿ ದೈಹಿಕ ಸ್ಪರ್ಶವನ್ನು ಹೆಚ್ಚಿಸಲು ಏನು ಮಾಡಬೇಕು? – ಸುಖೀ ದಾಂಪತ್ಯ ಜೀವನಕ್ಕೆ ಇಲ್ಲಿದೆ ಅತ್ಯಮೂಲ್ಯ ಸಲಹೆಗಳು‌..

ನ್ಯೂಸ್ ಆ್ಯರೋ : ದಂಪತಿಗಳೆಂದ ಮೇಲೆ ದೈಹಿಕ ಸ್ಪರ್ಶವೂ ಆರಾಮದಾಯಕ, ತೀವ್ರ ಮತ್ತು ಕಾಮ ಪ್ರಚೋದಕವಾಗಿದೆ. ಪ್ರತಿ ಯಶಸ್ವಿ ವಿವಾಹದ ಹಿಂದೆ ದೈಹಿಕ ಸ್ಪರ್ಶ ಇದ್ದೇ ಇರುತ್ತದೆ. ದೈಹಿಕ ಅನಿವಾರ್ಯತೆಯೂ ದಾಂಪತ್ಯದಲ್ಲಿ ಸಂತೋಷ ಮತ್ತು ತೃಪ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ಪ್ರೀತಿ, ವಿಶ್ವಾಸ ಮತ್ತು ಭದ್ರತೆಯು ದಾಂಪತ್ಯದಲ್ಲಿ ಪ್ರಮುಖ ಸ್ತಂಭಗಳಾಗಿ ನಿಂತರೆ, ಲೈಂಗಿಕತೆ ಮತ್ತು ದೈಹಿಕ ಅನ್ಯೋನ್ಯತೆಗಳು ಅದಕ್ಕಿಂತ ಹೆಚ್ಚಿನದಾಗಿದೆ.

ದಾಂಪತ್ಯದಲ್ಲಿ ಯಾವಾಗಲೂ ಖುಷಿ ಎನ್ನುವುದು ಇರಬೇಕು. ಆದರೆ ಕೆಲವೊಮ್ಮೆ ಖುಷಿ ಕಡಿಮೆಯಾಗಲೂಬಹುದು. ಈ ರೀತಿಯ ಸಂದರ್ಭದಲ್ಲಿ, ದೈಹಿಕ ಉತ್ಸಾಹವನ್ನು ಮರಳಿ ಪಡೆದುಕೊಳ್ಳಲು ಕೆಲವು ಸಲಹೆಗಳನ್ನು ಇಲ್ಲಿ ತಿಳಿಸಲಾಗಿದೆ.

ಮುದ್ದಾಡುವುದು ಕಡ್ಡಾಯ

ವಿವಾಹಿತ ದಂಪತಿಗಳು ಲೈಂಗಿಕತೆಯ ನಂತರ ಮುದ್ದಾಡುವುದನ್ನು ಮರೆತುಬಿಡುತ್ತಾರೆ. ಆದರೆ ಮುದ್ದಾಡುವುದರಿಂದ ಅನೇಕ ರೀತಿಯ ಪ್ರಯೋಜನೆಗಳು ದೊರೆಯುತ್ತದೆ ಎನ್ನುವುದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಈ ರೀತಿ ಮುದ್ದಾಡುವಾಗ ದೇಹದಲ್ಲಿ ಹೆಚ್ಚಿನ ಗುಣಮಟ್ಟದ ಆಕ್ಸಿಟೋಸಿನ್ ಬಿಡುಗಡೆಯಾಗುತ್ತದೆ. ಅದು ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವಿನ ಪ್ರೀತಿಯ ಅಂಶವನ್ನು ಹೆಚ್ಚಿಸುತ್ತದೆ. ಅಲ್ಲದೆ ಈ ರೀತಿ ನೀವು ಮಾಡುವುದರಿಂದ ಇದು ನಿಮ್ಮ ಒತ್ತಡವನ್ನು ಕಡಿಮೆ ಮಾಡಿ ನಿರಾಳತೆಯನ್ನು ನೀಡುತ್ತದೆ.

ಇದರಿಂದ ನಿಮ್ಮ ಒತ್ತಡ ಕಡಿಮೆಯಾಗಿ ಮಾನಸಿಕ ನೆಮ್ಮದಿ ಹೆಚ್ಚಾಗುತ್ತದೆ. ಆದ್ದರಿಂದ ಲೈಂಗಿಕತೆಯ ನಂತರ ನಿಮ್ಮ ಸಂಗಾತಿಯನ್ನು ಮುದ್ದಾಡುವುದನ್ನು ಮರೆಯಬೇಡಿ. ಇದರಿಂದ ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವಿನ ಪ್ರೀತಿ ಹೆಚ್ಚಾಗುತ್ತದೆ ಮತ್ತು ಉತ್ತಮ ಬಾಂಧವ್ಯ ಬೆಳೆಯುತ್ತದೆ. ನಿಮ್ಮ ಒತ್ತಡದ ಪ್ರಮಾಣವು ಇದರಿಂದ ಕಡಿಮೆಯಾಗುತ್ತದೆ.

ನಿಮ್ಮ ಫೋನನ್ನು ಸ್ವಿಚ್ ಆಫ್ ಮಾಡಿ

ಪ್ರತಿ ಹೆಣ್ಣು ತನ್ನ ಪತಿಯಾದವ ಉತ್ತಮ ಏಕಾಂತದ ಸಮಯವನ್ನು ಹೊಂದಬೇಕೆಂದು ಬಯಸುತ್ತಾರೆ. ದಂಪತಿಗಳು ಪರಸ್ಪರ ಆತ್ಮೀಯ ಕ್ಷಣಗಳನ್ನು ಹಂಚಿಕೊಳ್ಳಲು ಮರೆತು ಹೋಗಲು ನಿಮ್ಮ ಫೋನ್ ಒಂದು ಬಹುಮುಖ್ಯ ಕಾರಣವಾಗಿದೆ ಎಂದರೆ ತಪ್ಪಾಗುವುದಿಲ್ಲ. ದಂಪತಿಗಳು ಇಬ್ಬರು ಮಲಗಿದ ನಂತರ ನಿಮ್ಮ ಫೋನ್ಗಳನ್ನು ಸ್ವಿಚ್ ಆಫ್ ಮಾಡಿಕೊಳ್ಳುವುದು ಉತ್ತಮ. ಇದರಿಂದ ಹಾಸಿಗೆಯಲ್ಲಿ ನೀವು ಉತ್ತಮವಾದ ದೈಹಿಕ ಅನ್ಯೋನ್ಯತೆಯನ್ನು ಪುನರ್ನಿರ್ಮಾಣ ಮಾಡಬಹುದು. ಅಲ್ಲದೆ ಕೆಲವೊಮ್ಮೆ ದಂಪತಿಗಳಿಬ್ಬರ ನಡುವೆ ಜಗಳ ಉಂಟಾಗುವುದು ಫೋನಿನಿಂದಲೇ ಆಗಿದೆ.

ಆದ್ದರಿಂದಲೇ ನಿಮ್ಮ ಸಂಗಾತಿಯ ಜೊತೆ ಉತ್ತಮ ಸಂಬಂಧವನ್ನು ಹೊಂದುವ ಸಮಯದಲ್ಲಿ ಎಂಬ ಫೋನಿನ ಬಳಕೆಯನ್ನು ನೀವು ಮಾಡದಿರುವುದು ಉತ್ತಮ. ಒಂದು ವೇಳೆ ಫೋನ್ ಬಳಸುವ ಪರಿಸ್ಥಿತಿ ಎದುರಾದರೆ ನಿಮ್ಮ ಸಂಗಾತಿಯ ಜೊತೆ ನಿಮ್ಮ ಸಮಸ್ಯೆಯನ್ನು ತಿಳಿಸಿ ಅನಂತರದಲ್ಲಿ ಬಳಸುವ ಪ್ರಯತ್ನ ಮಾಡಿ.ಈ ರೀತಿ ಮಾಡುವುದರಿಂದ ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಯಾವುದೇ ರೀತಿಯ ಮನಸ್ತಾಪ ಉಂಟಾಗುವುದಿಲ್ಲ.

ನಿಧಾನವಾದ ರೀತಿಯಲ್ಲಿ ಮಸಾಜ್ ಮಾಡಿ

ನಿಧಾನವಾದ ಇಂದ್ರಿಯ ಮಸಾಜ್ ಮಾಡುವುದು ನಿಮ್ಮ ಮತ್ತು ನಿಮ್ಮ ಸಂಗಾತಿಯನ್ನು ಎಲ್ಲಾ ರೀತಿಯಲ್ಲಿಯೂ ಪ್ರಚೋದನೆಗೆ ಒಳಪಡಿಸುತ್ತದೆ. ಇದಕ್ಕಾಗಿ ನಿಮಗೆ ಬೇಕಾಗಿರುವುದು ಪರಿಮಳಯುಕ್ತವಾದ ಮೇಣದಬತ್ತಿಗಳು, ಮಂದ ಬೆಳಕು, ದೇಹದ ಎಣ್ಣೆ ಮತ್ತು ಉತ್ತಮವಾದ ಮನಸ್ಸು. ನಿಮ್ಮ ಸಂಗಾತಿಯ ಒತ್ತಡವನ್ನು ನಿವಾರಿಸಲು ಮತ್ತು ಶಾಂತಿಯನ್ನು ಪಡೆದುಕೊಳ್ಳಲು ಇದು ಉತ್ತಮವಾದ ಮಾರ್ಗವಾಗಿದೆ.

ಈ ರೀತಿ ಮಾಡುವುದರಿಂದ ನಿಮ್ಮಿಬ್ಬರ ನಡುವಿನ ಲೈಂಗಿಕ ಒತ್ತಡವನ್ನು ಧನಾತ್ಮಕವಾಗಿ ತೀವ್ರವಾಗಿ ಹೆಚ್ಚಿಸುತ್ತದೆ. ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವಿನ ಬಾಂಧವ್ಯ ಹೆಚ್ಚಾಗಬೇಕು ಎಂದಾದರೆ ಈ ರೀತಿಯ ಸಂದರ್ಭಗಳನ್ನು ಹೆಚ್ಚಿನ ಬಾರಿ ಪುನರಾವರ್ತಿಸಿ. ಇದು ನಿಮ್ಮ ಎಲ್ಲಾ ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡುತ್ತದೆ.

ನಿಮ್ಮ ಸಂಗಾತಿಯೊಂದಿಗೆ ಉತ್ತಮ ರೀತಿಯಲ್ಲಿ ಮಲಗುವ ಅಭ್ಯಾಸ ಇರಲಿ

ನಿಮ್ಮ ಸಂಗಾತಿಯೊಂದಿಗೆ ಉತ್ತಮ ರೀತಿಯಲ್ಲಿ ಮಲಗಿಕೊಳ್ಳುವ ಅಭ್ಯಾಸ ನಿಮ್ಮ ನಡುವೆ ಉತ್ತಮ ಸಂಬಂಧವನ್ನು ಎರ್ಪಡುವಂತೆ ಮಾಡುತ್ತದೆ. ಇದು ಕೆಲವರಿಗೆ ವಿಚಿತ್ರವೆನಿಸಿದರೂ ತಮ್ಮ ವಿವಾಹದಲ್ಲಿ ನಿಕಟ ಸಂಪರ್ಕವನ್ನು ಕಳೆದುಕೊಂಡ ಇತರ ದಂಪತಿಗಳಿಗೆ ಇದು ಉತ್ತಮವಾದ ಪರಿಹಾರ ಎಂದರೆ ತಪ್ಪಾಗುವುದಿಲ್ಲ. ನಿಮ್ಮ ಸಂಗಾತಿಯೊಂದಿಗೆ ಉತ್ತಮ ರೀತಿಯಲ್ಲಿ ಮಲಗುವ ಮೂಲಕ ನಿಮ್ಮ ಎಲ್ಲಾ ಭಾವನೆಗಳನ್ನು ನೀವು ಅವರೊಂದಿಗೆ ಹೇಳಿಕೊಳ್ಳುವುದರಿಂದ ಅತ್ಯಂತ ಶುದ್ಧವಾದ ರೀತಿಯಲ್ಲಿ ಅವರ ಜೊತೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ.

ಅಂದರೆ ಈ ರೀತಿಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುವ ಸಮಯದಲ್ಲಿ ನಿಮ್ಮ ಎಲ್ಲಾ ಭಾವನೆಗಳನ್ನು ನೀವು ಹೊರಹಾಕಲು ಸಾಧ್ಯವಾಗುತ್ತದೆ. ಇದರಿಂದ ನಿಮ್ಮಿಬ್ಬರ ಸಾಂಗತ್ಯ ಹೆಚ್ಚಾಗುತ್ತದೆ ಮತ್ತು ನಿಮ್ಮ ಸಂಬಂಧವು ಉತ್ತಮ ರೀತಿಯಲ್ಲಿ ಇರುತ್ತದೆ. ಇಂತಹ ಸಮಯದಲ್ಲಿ ಯಾವುದೇ ರೀತಿಯ ಮನಸ್ತಾಪಗಳು ಇದ್ದರೂ ಅದನ್ನು ನೀವು ಕಳೆದುಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ನಿಮ್ಮ ದಾಂಪತ್ಯದ ಸಂಬಂಧ ಮತ್ತಷ್ಟು ಹೆಚ್ಚಾಗುತ್ತದೆ.

ನಿಮ್ಮ ಕಲ್ಪನೆಗೆ ಅನಿಸಿದ್ದನ್ನು ಮಾಡಲು ಹಿಂಜರಿಯದಿರಿ

ನಿಮ್ಮ ಮನಸ್ಸಿನ ಹಿಂದೆ ನೀವು ಯಾವಾಗಲೂ ಹೊಂದಿರುವ ಲೈಂಗಿಕ ಕಲ್ಪನೆಗಳನ್ನು ಪ್ರಯತ್ನಿಸಲು ಹಿಂಜರಿಯದಿರಿ. ನಿಮ್ಮ ಎಲ್ಲಾ ರೀತಿಯ ಕಲ್ಪನೆಗಳನ್ನು ಪ್ರಯೋಗ ಮಾಡುವ ಮೂಲಕ ನಿಮ್ಮ ಸಂಗಾತಿಯ ಭಾವನೆಗಳಿಗೆ ಪ್ರತಿಕ್ರಿಯಿಸಲು ಪ್ರಯತ್ನ ಮಾಡಿ. ಈ ರೀತಿಯ ಪ್ರಯತ್ನ ಮಾಡುವುದರಿಂದ ನಿಮ್ಮ ಮತ್ತು ನಿಮ್ಮ ಸಂಗಾತಿಯ ಕಲ್ಪನೆಗಳನ್ನು ನಿಜ ಮಾಡಿದಂತೆ ಅನಿಸುತ್ತದೆ. ಇದರಿಂದ ನಿಮ್ಮ ಸಂಗಾತಿ ಮತ್ತು ನಿಮ್ಮ ನಡುವೆ ಇರುವಂತಹ ಬಾಂಧವ್ಯ ಹೆಚ್ಚಾಗುತ್ತದೆ. ಇದರ ಜೊತೆಗೆ ಲೈಂಗಿಕ ಸಮಯದಲ್ಲಿ ನಿಮ್ಮ ಸಂಗಾತಿಯು ಅವರ ಮನಸ್ಸಿನ ಎಲ್ಲಾ ಭಾವನೆಗಳನ್ನು ಮನಬಿಚ್ಚಿ ಹೇಳಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ. ಆದ್ದರಿಂದ ಲೈಂಗಿಕತೆಯ ವಿಷಯದಲ್ಲಿ ನಿಮ್ಮ ಕಲ್ಪನೆಗೆ ಅನ್ನಿಸಿದ್ದನ್ನು ಮಾಡಲೂ ಹಿಂಜರಿಯದಿರಿ.

ದಾಂಪತ್ಯ ಎನ್ನುವುದು ಒಂದು ಸುಂದರವಾದ ಅನುಭವ. ಆದರೆ ದಂಪತಿಗಳಿಬ್ಬರ ನಡುವೆ ಎಲ್ಲಾ ಸಮಯದಲ್ಲಿಯೂ ಒಂದೇ ರೀತಿಯ ಸಂಬಂಧ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಕೆಲವರ ವಿಷಯದಲ್ಲಿ ಅವರ ದಾಂಪತ್ಯದ ಮೊದಲನೇ ದಿನದಿಂದ ಎಲ್ಲಾ ದಿನಗಳವರೆಗೆ ಅದೇ ರೀತಿಯ ಭಾವನೆ ಇರುತ್ತದೆ. ಆದರೆ ಇನ್ನೂ ಕೆಲವರು ಜೀವನದಲ್ಲಿ ಅವರ ಸಂಬಂಧದಲ್ಲಿ ಕೆಲವು ರೀತಿಯ ಬಿರುಕು ಉಂಟಾಗುವ ಸಾಧ್ಯತೆ ಇರುತ್ತದೆ. ಅಂತಹ ಸಮಯದಲ್ಲಿ ಸಂಬಂಧವನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಪ್ರತಿಯೊಬ್ಬರು ಮಾಡುತ್ತಾರೆ. ಈ ರೀತಿಯ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಎದುರಾದಾಗ ದೈಹಿಕ ಸ್ಪರ್ಶವನ್ನು ಹೆಚ್ಚಿಸಿಕೊಳ್ಳುವ ಮೂಲಕ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ನೀವು ಪರಿಹಾರವನ್ನು ಕಂಡುಕೊಳ್ಳಬಹುದು. ದೈಹಿಕ ಸ್ಪರ್ಶವೂ ದಂಪತಿಗಳಿಬ್ಬರ ನಡುವಿನ ಪ್ರೀತಿಯನ್ನು ಹೆಚ್ಚಿಸುತ್ತದೆ. ಇದು ದಂಪತಿಗಳ ನಡುವಿನ ಪ್ರೀತಿ, ವಿಶ್ವಾಸ, ಬಾಂಧವ್ಯ ಮತ್ತು ನಂಬಿಕೆಯನ್ನು ಹೆಚ್ಚಿಸುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ.

Related post

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ ಸೂಪರ್

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ…

ನ್ಯೂಸ್ ಆರೋ: ಆರೋಗ್ಯಕ್ಕೆ ಹಿತ ಎನಿಸುವ ಹಾಗೂ ರುಚಿಕಟ್ಟಾದ ರೆಸಿಪಿಯೊಂದನ್ನು ನಾವಿಂದು ಹೇಳಿಕೊಡುತ್ತೇವೆ. ಈ ಗೋಧಿ ಉಸ್ಲಿ ರೆಸಿಪಿಯನ್ನು ನೀವು ಬೇಕೆಂದರೆ ಸ್ನ್ಯಾಕ್ಸ್ ಆಗಿಯೂ ಬೆಳಗ್ಗಿನ ಉಪಾಹಾರವಾಗಿಯೂ ಮಾಡಿ…
ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ ಆಯ್ಕೆ

ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ…

ನ್ಯೂಸ್ ಆರೋ: ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯು ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಒಟ್ಟು 2 ಪ್ರಾಜೆಕ್ಟ್​ ಅಸೋಸಿಯೇಟ್-I ಹುದ್ದೆ ಖಾಲಿ ಇದ್ದು, ಅರ್ಹ…
ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ನ್ಯೂಸ್ ಆ್ಯರೋ : ಇಂದು  4ನೇ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯುತ್ತಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿ ಹಲವೆಡೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಇದೀಗ ಸಾಮಾನ್ಯರಂತೆಯೇ ಸರತಿ…

Leave a Reply

Your email address will not be published. Required fields are marked *