ಹಿಂದೂ ಧರ್ಮದ ಪ್ರಕಾರ ಪತಿಯ ಎಡಭಾಗದಲ್ಲೇ ಪತ್ನಿ ಮಲಗಬೇಕು – ಪುರಾಣದಲ್ಲಿ ಉಲ್ಲೇಖಿಸಲಾದ ಕಾರಣವೇನು?

ಹಿಂದೂ ಧರ್ಮದ ಪ್ರಕಾರ ಪತಿಯ ಎಡಭಾಗದಲ್ಲೇ ಪತ್ನಿ ಮಲಗಬೇಕು – ಪುರಾಣದಲ್ಲಿ ಉಲ್ಲೇಖಿಸಲಾದ ಕಾರಣವೇನು?

ನ್ಯೂಸ್ ಆ್ಯರೋ‌ : ಹಿಂದೂ ಧರ್ಮದ ಪ್ರಕಾರ ಪ್ರತಿ ಕಾರ್ಯ ಮಾಡುವಾಗಲೂ ಕೆಲವೊಂದು ಸಂಪ್ರದಾಯ, ನಂಬಿಕೆಯನ್ನು ಪಾಲಿಸಬೇಕಾಗುತ್ತದೆ. ಅದರಂತೆ ಪತ್ನಿ ಯಾವಾಗಲೂ ಪತಿಯ ಎಡಭಾಗದಲ್ಲಿ ಮಲಗಬೇಕು ಎಂದು ಹೇಳಲಾಗುತ್ತದೆ. ಅದಕ್ಕಿರುವ ಕಾರಣ ತಿಳಿದುಕೊಳ್ಳೋಣ.

ಅರ್ಧಾಂಗಿ ಕಾನ್ಸೆಪ್ಟ್ ಜೊತೆ ಥಳುಕು

ಪುರಾಣದ ಪ್ರಕಾರ ಶಿವ ಅರ್ಧನಾರೀಶ್ವರನಾಗಿ ಕಾಣಿಸಿಕೊಂಡಾಗ ಅವನ ಪತ್ನಿಯಾದ ಪಾರ್ವತಿ ಎಡಬದಿಯಲ್ಲಿ ಕಾಣಿಸಿಕೊಂಡಿದ್ದಳು. ಹೀಗಾಗಿ ಗಂಡನ ಎಡ ಭಾಗ ಪತ್ನಿಯದ್ದು ಎನ್ನಲಾಗುತ್ತದೆ. ಇದೇ ಕಾರಣಕ್ಕೆ ಶುಭ ಕಾರ್ಯ ನಡೆಸುವ ಸಂದರ್ಭದಲ್ಲಿ ಪತ್ನಿಯನ್ನು ಎಡಭಾಗದಲ್ಲಿ ಕೂರಿಸಲಾಗುತ್ತದೆ.

ಅಲ್ಲದೆ ಪತ್ನಿ ಪತಿಯ ಎಡಭಾಗದಲ್ಲಿ ಮಲಗುವುದರಿಂದ ಮನೆಯಲ್ಲಿ ಸುಖ, ಸಂತೋಷ, ನೆಮ್ಮದಿ ನೆಲೆಸುವ ಜೊತೆಗೆ ವೈವಾಹಿಕ ಜೀವನ ಆನಂದದಿಂದ ಕೂಡಿರುತ್ತದೆ ಎನ್ನುವ ನಂಬಿಕೆ ಇದೆ.

ಪತ್ನಿ ಪತಿಯ ಎಡಗಡೆ ಮಲಗುವುದರಿಂದ ಗ್ರಹಗಳಿಂದಲೂ ದಾಂಪತ್ಯ ಜೀವನದ ಮೇಲೆ ಯಾವುದೇ ರೀತಿಯ ಕೆಟ್ಟ ಪರಿಣಾಮ ಬೀರುವುದಿಲ್ಲ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಜೊತೆಗೆ ಇದಕ್ಕೆ ಇನ್ನೊಂದು ಪುರಾಣದ ಕಥೆ ಇದೆ. ಸತ್ಯವಾನ್ ಸಾವಿತ್ರಿ ಕಥೆಯಲ್ಲಿ ಯಮರಾಜ ಸತ್ಯವಾನ್ ನ ಪ್ರಾಣ ತೆಗೆದುಕೊಂಡು ಹೋಗಲು ಎಡಬದಿಯಲ್ಲಿ ಬಂದಾಗ ಅಲ್ಲಿದ್ದ ಸಾವಿತ್ರಿ ಬೇಡಿಕೊಂಡು ಪತಿಯನ್ನು ರಕ್ಷಿಸಿದ್ದಳು. ಹೀಗಾಗಿ ಎಡ ಬದಿ ಮಲಗುವುದರಿಂದ ಪತಿಗೆ ರಕ್ಷೆ ಸಿಗುತ್ತದೆ ಎನ್ನಲಾಗುತ್ತಿದೆ.

ಬಲಗಡೆ ಸ್ಥಾನ

ಹಾಗಾದರೆ ಪತ್ನಿಗೆ ಬಲಗಡೆಯಲ್ಲಿ ಸ್ಥಾನ ದೊರೆಯುವುದೇ ಇಲ್ಲವೇ? ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಹಾಗೇನೂ ಇಲ್ಲ. ಕೆಲವೊಂದು ಆಚರಣೆಗಳಲ್ಲಿ ಪತ್ನಿ ಪತಿಯ ಬಲಗಡೆಯೇ ಇರಬೇಕಾಗುತ್ತದೆಯಂತೆ. ಕನ್ಯಾದಾನ, ವಿವಾಹ, ಯಜ್ಞ, ನಾಮಕರಣ, ಅನ್ನ ಪ್ರಾಶನದ ಸಮಯದಲ್ಲಿ ಪತ್ನಿಯ ಸ್ಥಾನ ಬಲಗಡೆಯಲ್ಲಿರುತ್ತದೆ ಎಂದು ಶಾಸ್ತ್ರ ಹೇಳುತ್ತದೆ.

Related post

ದಿನ‌ ಭವಿಷ್ಯ 13-05-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 13-05-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಅತ್ಯಂತ ಪ್ರೀತಿಯ ಕನಸು ನನಸಾಗುತ್ತದೆ. ಆದರೆ ತುಂಬಾ ಸಂತೋಷ ಸ್ವಲ್ಪ ಸಮಸ್ಯೆಗಳನ್ನು ಉಂಟುಮಾಡಬಹುದಾದ್ದರಿಂದ ನಿಮ್ಮ ಉತ್ಸಾಹವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ. ನೀವು ಸಾಲ ತೆಗೆದುಕೊಳ್ಳಲು ಹೊರಟಿದ್ದರೆ ಮತ್ತು ಈ ಕೆಲಸದಲ್ಲಿ…

ಅಕ್ರಮ ಭ್ರೂಣ ಹತ್ಯೆ ಹಗರಣ; ವೈದ್ಯರ ವಿರುದ್ಧದ ಪ್ರಕರಣ ರದ್ದು ಸಾಧ್ಯವಿಲ್ಲ…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ವ್ಯಾಪಿಸಿರುವ ಅಕ್ರಮ ಭ್ರೂಣ ಹತ್ಯೆ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದೆ. “ಪ್ರಕರಣ…
ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಹೆಚ್ಚು ಆಶಾವಾದಿಗಳಾಗಿರಲು ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ಇದು ವಿಶ್ವಾಸ ಮತ್ತು ನಮ್ಯತೆಯನ್ನು ಹೆಚ್ಚಿಸುತ್ತದಾದರೂ ಅದೇ ಸಮಯದಲ್ಲಿ ಭಯ, ದ್ವೇಷ, ಅಸೂಯೆ, ಸೇಡಿನಂಥ ನಕಾರಾತ್ಮಕ ಭಾವನೆಗಳನ್ನು ಹಿಂದೆ ಬಿಡಲು ಸಿದ್ಧವಾಗಿ.…

Leave a Reply

Your email address will not be published. Required fields are marked *