ಉತ್ತಮ ಸಂಗಾತಿಯಾಗುತ್ತಾರೆ ಈ ರಾಶಿಯ ಹುಡುಗಿಯರು – ನಿಮ್ಮ ಪ್ರೇಯಸಿಯ ರಾಶಿ ಇದೆಯೇ ಚೆಕ್ ಮಾಡಿ…

ಉತ್ತಮ ಸಂಗಾತಿಯಾಗುತ್ತಾರೆ ಈ ರಾಶಿಯ ಹುಡುಗಿಯರು – ನಿಮ್ಮ ಪ್ರೇಯಸಿಯ ರಾಶಿ ಇದೆಯೇ ಚೆಕ್ ಮಾಡಿ…

ನ್ಯೂಸ್ ಆ್ಯರೋ : ನಮ್ಮ ರಾಶಿ ಮತ್ತು ಜನ್ಮ ನಕ್ಷತ್ರಗಳು ನಮ್ಮ ವ್ಯಕ್ತಿತ್ವದ ಬಗ್ಗೆ ಹಲವು ಮಾಹಿತಿಗಳನ್ನು ನೀಡುತ್ತದೆ. ರಾಶಿಯ ಮೂಲಕವೂ ಒಬ್ಬ ವ್ಯಕ್ತಿಯ ಗುಣಲಕ್ಷಣ ಹೀಗಿರಬಹುದು ಎಂದು ಕೆಲವರು ಹೇಳುತ್ತಾರೆ. ಅಂದರೆ, ರಾಶಿಯ ಆಧಾರದಲ್ಲಿ ವ್ಯಕ್ತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು. ಅದರ ಆಧಾರದ ಮೇಲೆ ನಮ್ಮ ನಿರ್ಧಾರಗಳನ್ನು ಕೈಗೊಳ್ಳಬಹುದಾಗಿದೆ. ಜೋತಿಷ್ಯ ಶಾಸ್ತ್ರದ ಸಹಾಯ ಪಡೆದು ಇಂತಹ ವಿವರಗಳನ್ನು ನಾವು ತಿಳಿದುಕೊಳ್ಳಬಹುದಾಗಿದೆ. ಮತ್ತೊಬ್ಬರನ್ನು ಇನ್ನಷ್ಟು ಚೆನ್ನಾಗಿ ತಿಳಿಯಬಹುದು.

ನಾವು ನಮ್ಮ ಜೀವನದ ಬಹುಪಾಲು ಕಾಲವನ್ನು ಜತೆಯಾಗಿ ಕಳೆಯುವ ನಮ್ಮ ಬಾಳಸಂಗಾತಿಯ ಆಯ್ಕೆಯಲ್ಲಿಯೂ ಅಷ್ಟೆ. ಬಹಳಷ್ಟು ಯೋಚನೆಯನ್ನು ಮಾಡುತ್ತೇವೆ. ಜೀವನಪೂರ್ತಿ ಜತೆಯಾಗಿರಬೇಕಾದ ಹುಡುಗಿಯ ಆಯ್ಕೆ ನಿರ್ಧಾರ ಕೈಗೊಳ್ಳುವುದು ಸುಲಭವೇನೂ ಅಲ್ಲ. ಮದುವೆ ಒಂದು ಬಹುಮುಖ್ಯ ಘಟ್ಟ. ಹೀಗಾಗಿ ಬಾಳಸಂಗಾತಿ ಹುಡುಕುವಾಗ ರಾಶಿ ಚಿಹ್ನೆಗಳನ್ನು ಅರ್ಥಮಾಡಿಕೊಳ್ಳುವುದರ ಮೂಲಕವೂ ಸರಿಯಾದ ಜೋಡಿ ಹೊಂದಿಸಿಕೊಳ್ಳಬಹುದು.

ಮೀನಾ

ಈ ರಾಶಿಯ ಹುಡುಗಿಯರು ಹೆಚ್ಚಾಗಿ ಸೂಕ್ಷ್ಮ ಮನಸಿನವರಾಗಿರುತ್ತಾರೆ. ಬಹಳ ಕಾಳಜಿ ಉಳ್ಳವರಾಗಿರುತ್ತಾರೆ. ಅವರಿಗೆ ಮತ್ತೊಬ್ಬರ ಬಗ್ಗೆ ಹೆಚ್ಚು ಕಾಳಜಿ ಇರುತ್ತದೆ. ಕಷ್ಟದ ಸಂದರ್ಭದಲ್ಲಿ ಅವರು ಜತೆಗಾರರ ಕೈಬಿಡುವುದಿಲ್ಲ. ಈ ರಾಶಿಯವರು ತಮ್ಮ ಬಾಳಸಂಗಾತಿಗೆ ಸಂತೋಷವನ್ನೇ ನೀಡಲು ಪ್ರಯತ್ನಿಸುತ್ತಾರೆ ಮತ್ತು ಖುಷಿಯನ್ನೇ ನೀಡುತ್ತಿರುತ್ತಾರೆ. ಅರ್ಥಮಾಡಿಕೊಳ್ಳುತ್ತಾರೆ. ಭಾವನಾತ್ಮಕವಾಗಿ ಗಟ್ಟಿ ನಂಟು, ಪ್ರೀತಿ ಹೊಂದಿರುತ್ತಾರೆ.

ಕಟಕ:

ಈ ರಾಶಿಯ ಯುವತಿಯರಿಗೆ ತಮ್ಮ ಬಾಳಸಂಗಾತಿಯ ಬಗ್ಗೆ ಖಂಡಿತಾ ಕಾಳಜಿ ಇರುತ್ತದೆ. ಆದರೆ, ಅವರು ತಮ್ಮ ಜೀವನವನ್ನು ಹೇಗೆ ನೋಡಿಕೊಳ್ಳಬೇಕು ಎಂಬುದೂ ಚೆನ್ನಾಗಿ ತಿಳಿದಿರುತ್ತದೆ. ತಮ್ಮ ಜತೆಗಾರನ ಬಗ್ಗೆ ಪ್ರೀತಿ ಮತ್ತು ಸದಾ ಜತೆಗಿರಬೇಕು ಎನ್ನುವ ಭಾವ ಅವರಲ್ಲಿರುತ್ತದೆ. ಅವರು ಪ್ರಾಮಾಣಿಕರು ಮತ್ತು ಸಮರ್ಪಕ ಪ್ರೀತಿಯ ಹುಡುಕಾಟದಲ್ಲಿ ಇರುತ್ತಾರೆ. ಈ ರಾಶಿಯವರು ಏನೇ ಆದರೂ ತಮ್ಮ ಜತೆಗಾರನ ಪರವಾಗಿ ಇರುತ್ತಾರೆ.

ತುಲಾ

ಈ ರಾಶಿಯವರು ದಾಂಪತ್ಯ ಜೀವನಕ್ಕೆ ಸಮತೋಲನ ಹಾಗೂ ಸ್ಥಿರತೆ ತಂದುಕೊಡುತ್ತಾರೆ. ಬಹಳ ಪ್ರಬುದ್ಧರಾಗಿ ವರ್ತಿಸುತ್ತಾರೆ. ಕಷ್ಟದ ಸನ್ನಿವೇಶಗಳನ್ನು ಸಮರ್ಥವಾಗಿ ಎದುರಿಸುತ್ತಾರೆ. ಯಾವುದೇ ದೂರು ಹೇಳಿ ಸುಮ್ಮನೇ ಜತೆಗಾರರನ್ನು ಬಿಟ್ಟು ಹೋಗುವುದಿಲ್ಲ. ಪ್ರಾಮಾಣಿಕ ಆದರೆ ಗಟ್ಟಿ ಮನಸಿನವರೂ ಆಗಿರುತ್ತಾರೆ. ಚಿಂತಿಸುವುದರ ಬದಲಾಗಿ ಪರಿಹಾರ ಮಾರ್ಗಗಳನ್ನು ಹೆಚ್ಚು ಆಲೋಚಿಸುತ್ತಾರೆ.

ಕುಂಭ

ಈ ರಾಶಿಯ ಹುಡುಗಿಯರು ಬಹಳ ಗಟ್ಟಿಮನಸ್ಸಿನವರು ಆಗಿರುತ್ತಾರೆ. ತಮ್ಮ ಬಗ್ಗೆ ತುಂಬಾ ಆತ್ಮವಿಶ್ವಾಸ ಹೊಂದಿರುತ್ತಾರೆ. ಮಾನಸಿಕವಾಗಿ ಸದೃಢರಾಗಿ ಇರುತ್ತಾರೆ. ನೀರಿನಂತೆ ಯಾವುದೇ ಸನ್ನಿವೇಶಗಳಿಗೂ ಹೊಂದಿಕೊಳ್ಳಬಲ್ಲ ಮನಸಿರುತ್ತದೆ. ಆದರೆ, ಅವರಲ್ಲಿಯೂ ಬಹಳ ಹಾಸ್ಯಪ್ರಜ್ಞೆ ಇರುತ್ತದೆ. ಅಂದರೆ, ಪ್ರೀತಿ, ಪರಸ್ಪರ ಅರ್ಥ ಮಾಡಿಕೊಂಡು ಜೊತೆಗೆ ಹಾಸ್ಯದ ಲೇಪನವೂ ಇರುತ್ತದೆ.

Related post

ಅಕ್ಟೋಬರ್‌ನಲ್ಲಿ ಹಣಕಾಸಿನ ನಿಯಮಗಳಲ್ಲಿ ಭಾರೀ ಬದಲಾವಣೆ – ₹ 2000 ನೋಟು ರದ್ದು, ಹೊಸ ಟಿಸಿಎಸ್ ನಿಯಮ ಜಾರಿ

ಅಕ್ಟೋಬರ್‌ನಲ್ಲಿ ಹಣಕಾಸಿನ ನಿಯಮಗಳಲ್ಲಿ ಭಾರೀ ಬದಲಾವಣೆ – ₹ 2000 ನೋಟು…

ನ್ಯೂಸ್‌ ಆ್ಯರೋ : ತಿಂಗಳಿಗೊಮ್ಮೆ ಹಣಕಾಸಿನ ವ್ಯವಹಾರಗಳ ನಿಯಮಗಳಲ್ಲಿ ಬದಲಾವಣೆ ಆಗುವುದು ಸಹಜ ಪ್ರಕ್ರಿಯೆ. ಇದೀಗ ಅಕ್ಟೋಬರ್‌ ತಿಂಗಳು ಪ್ರಾರಂಭಕ್ಕೆ ಕೆಲ ದಿನವಿರುವಾಗಲೇ ಹಣಕಾಸಿಗೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ…
ಏನೂ ಕೆಲಸ ಮಾಡದೇ ಈ ತಾತ ವರ್ಷಕ್ಕೆ 6.5 ಲಕ್ಷ ದುಡೀತಾರೆ..!! – ಕೋಟ್ಯಾಂತರ ರೂಪಾಯಿ ಒಡೆಯ ಈ ತಾತ ಮಾಡೋದೇನು?

ಏನೂ ಕೆಲಸ ಮಾಡದೇ ಈ ತಾತ ವರ್ಷಕ್ಕೆ 6.5 ಲಕ್ಷ ದುಡೀತಾರೆ..!!…

ನ್ಯೂಸ್ ಆ್ಯರೋ : ಎಷ್ಟು ದುಡಿದರೂ ವರ್ಷಕ್ಕೆ 5- 6 ಲಕ್ಷ ಸಂಪಾದಿಸೋದೇ ಕಷ್ಟ ಎನ್ನುವವರ ಮಧ್ಯೆ ಏನೂ ಕೆಲಸವಿಲ್ಲದ ವೃದ್ಧರೊಬ್ಬರು 10 ಕೋಟಿ ರೂ. ಆದಾಯ ಗಳಿಸಿದ್ದಾರೆ.…
ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – ಆರೋಗ್ಯದ ಮೇಲೆ ಕಾಳಜಿ ಇರುವವರು ಈ ವರದಿ ಓದಿ..

ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – ಆರೋಗ್ಯದ…

ನ್ಯೂಸ್ ಆ್ಯರೋ : ಕರಿಬೇವಿನ ಎಲೆಗಳನ್ನು ಭಾರತೀಯ ಅಡುಗೆಮನೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಅದರಲ್ಲೂ ದಕ್ಷಿಣ ಭಾರತದ ಬಹುತೇಕ ಖಾದ್ಯಗಳಲ್ಲಿ ಕರಿಬೇವು ಮುಖ್ಯ. ಕರಿಬೇವಿನ ಎಲೆಗಳು ಯಾವುದೇ ಆಹಾರದ ರುಚಿಯನ್ನು…

Leave a Reply

Your email address will not be published. Required fields are marked *