ಮುಟ್ಟು ನಿಂತ ಮೇಲೆ ಹೆಣ್ಣಿಗೆ ಲೈಂಗಿಕಾಸಕ್ತಿ ಹೆಚ್ಚಾಗುತ್ತದೆ – ಇದಕ್ಕೆ ಕಾರಣ ಏನು ಗೊತ್ತಾ?

ಮುಟ್ಟು ನಿಂತ ಮೇಲೆ ಹೆಣ್ಣಿಗೆ ಲೈಂಗಿಕಾಸಕ್ತಿ ಹೆಚ್ಚಾಗುತ್ತದೆ – ಇದಕ್ಕೆ ಕಾರಣ ಏನು ಗೊತ್ತಾ?

ನ್ಯೂಸ್ ಆ್ಯರೋ : ಸೆಕ್ಸ್ ಅಥವಾ ಲೈಂಗಿಕಾಸಕ್ತಿ ಮನುಷ್ಯ ದೇಹದ ಸಹಜ ಬಯಕೆ. ಆದರೆ ಒಂದಿಷ್ಟು ಜನ, ಪುರುಷರಿಗೆ ಲೈಂಗಿಕ ಬಯಕೆಗಳು ಹೆಚ್ಚು ಎಂದು ನಂಬುತ್ತಾರೆ. ಆದರೆ ಇದು ಸುಳ್ಳು ಎಂದು ಅಧ್ಯಯನಗಳು ವರದಿ ಮಾಡಿವೆ. ಅದರ ಪ್ರಕಾರ ನೋಡುವುದಾದರೆ ಮಹಿಳೆಯರಿಗೆ ಪುರುಷರಿಗಿಂತಲೂ ಹೆಚ್ಚಿನ ಲೈಂಗಿಕಾಸಕ್ತಿ ಇರುತ್ತದೆ, ಅವರು ಹೆಚ್ಚು ಪ್ರಚೋದನೆಗೆ ಒಳಗಾಗುತ್ತಾರೆ. ಆದರೆ ತಮ್ಮ ಲೈಂಗಿಕ ಬಯಕೆಗಳನ್ನು ಹೆಚ್ಚು ಮರೆಮಾಚುತ್ತಾರೆ ಎನ್ನಲಾಗಿದೆ. ಇದಿಷ್ಟೇ ಅಲ್ಲದೆ ಮುಟ್ಟು ನಿಂತ ನಂತರ ಮಹಿಳೆಯರ ಲೈಂಗಿಕ ಬಯಕೆಗಳು ಹೆಚ್ಚಾಗುತ್ತದೆ. ಇದಕ್ಕೆ ಕೆಲವು ಕಾರಣಗಳನ್ನು ಕೂಡ ಈ ಕೆಳಗೆ ವರದಿ ಮಾಡಲಾಗಿದೆ.

1.ಹ್ಯಾಪಿ ಹಾರ್ಮೋನ್ಸ್ ಬಿಡುಗಡೆ!

ಯಾವಾಗಲು ಹೊಸ ಅನುಭವ ರೋಮಾಂಚನಗೊಳಿಸುತ್ತದೆ. ಅದೇ ರೀತಿ‌ ದೈಹಿಕ ಸಂಬಂಧಕ್ಕೆ ಒಳಗಾದ ವ್ಯಕ್ತಿಯ ದೇಹದಲ್ಲಿನ ಹಾರ್ಮೋನ್ ಗಳು ಬದಲಾಗುತ್ತವೆ. ಸಂಗಾತಿಯೊಂದಿಗಿನ ಮೊದಲ ಲೈಂಗಿಕ ಸಂಬಂಧದ ನಂತರ ಈ ಆಸಕ್ತಿ ಹೆಚ್ಚಾಗುವುದಕ್ಕೆ ಕಾರಣ ದೇಹದಲ್ಲಿ‌ ಉಂಟಾಗುವ ಹಾರ್ಮೋನ್ಸ್. ಇದರಿಂದಾಗಿ ದೇಹದಲ್ಲಿ ಬಯಕೆಗಳು ಹೆಚ್ಚಿ, ಲೈಂಗಿಕ ಸಂಬಂಧದಲ್ಲಿ ಆಸಕ್ತಿ ದುಪ್ಪಟ್ಟಾಗುತ್ತದೆ.

2.ಆಹಾರವೂ ಕಾರಣ!

ನಾವು ದಿನನಿತ್ಯ ಸೇವಿಸುವ ಆಹಾರವೂ ಕೂಡ ನಮ್ಮ ಕಾಮಾಸಕ್ತಿಯ ಮೇಲೆ ಪ್ರಭಾವ ಬೀರುತ್ತದೆ. ಲೈಂಗಿಕ ಬಯಕೆಗಳನ್ನು‌ ಕಡಿಮೆ ಮಾಡಲು ಆಹಾರವಿದ್ದಂತೆ, ಹೆಚ್ಚು ಮಾಡುವುದಕ್ಕೂ ಕೆಲವು ಆಹಾರಗಳಿವೆ. ಅವಕಾಡೋ, ಬಾದಾಮಿ, ಮಾವಿನಹಣ್ಣು, ನುಗ್ಗೆಕಾಯಿ, ಈರುಳ್ಳಿ ಇತ್ಯಾದಿ ಆಹಾರಗಳು ದೇಹವನ್ನು ಬಿಸಿಯಾಗಿರಿಸುತ್ತದೆ. ದೇಹ ಹೆಚ್ಚು ಬಿಸಿಯಾಗಿದ್ದಾಗ ಮನುಷ್ಯನಲ್ಲಿ‌ ಲೈಂಗಿಕ ಆಸಕ್ತಿ ಹೆಚ್ಚುತ್ತದೆ ಎಂದು ವರದಿಗಳು‌ ಹೇಳುತ್ತವೆ.

3.ಮಾದಕವಸ್ತುಗಳ ಸೇವನೆ!

ಮಾದಕ ವಸ್ತುಗಳಾದ ಮಧ್ಯಪಾನ, ಡ್ರಗ್ಸ್, ಗಾಂಜಾಗಳನ್ನು ಸೇವಿಸುವವರಲ್ಲಿ ಕಾಮಾಸಕ್ತಿ ಹೆಚ್ಚಿರುತ್ತದೆ. ಆಲ್ಕೋಹಾಲ್ ಸೇವಿಸುವವರಲ್ಲಿ ಬಯಕೆಗಳು ಹೆಚ್ಚಿರುತ್ತದೆ. ಆದರೆ ಇಂತಹ ಮಾದಕವಸ್ತುಗಳ‌‌ ಸೇವನೆಯಿಂದ ನಿಮ್ಮ ಲೈಂಗಿಕ ಜೀವನ‌ ಹಾಗೂ ಸುಖ ನಿಧಾನವಾಗಿ ಕಡಿಮೆಯಾಗುತ್ತದೆ.

4.ಮುಟ್ಟು ನಿಂತ‌ ಮಹಿಳೆಯರಲ್ಲಿ!

ಮಹಿಳೆಯರಲ್ಲಿ ಮುಟ್ಟು ನಿಂತ ಬಳಿಕ ಯೋನಿ ಶುಷ್ಕವಾಗುವ ಕಾರಣ ಲೈಂಗಿಕಾಸಕ್ತಿ ಕಡಿಮೆಯಾಗುತ್ತದೆ. ಆದರೆ ಮುಟ್ಟಿನ‌ ನಂತರ ಕೆಲ ಮಹಿಳೆಯರ ಲೈಂಗಿಕ ಬಯಕೆಗಳು ಹೆಚ್ಚಾಗುತ್ತದೆ. ಮುಟ್ಟಿನ ನಂತರ ಗರ್ಭದಾರಣೆಯ ಭಯವಿಲ್ಲದ ಕಾರಣ ಹೆಚ್ಚಿನ‌ ಮಹಿಳೆಯರು ಈ ಸಮಯದಲ್ಲಿ ತಮ್ಮ ಲೈಂಗಿಕ ಚಟುವಟಿಕೆಗಳನ್ನು ಹೆಚ್ವಿಸುತ್ತಾರೆ. ಈ ಸಮಯದಲ್ಲಿ ದೇಹದಲ್ಲಿ ಹೆಚ್ಚಿನ ಹ್ಯಾಪಿ ಹಾರ್ಮೋನ್ ಗಳು ಉತ್ಪಾದನೆಯಿಂದಾಗಿ ಮಹಿಳೆಯ ಲೈಂಗಿಕಾಸಕ್ತಿ ಹೆಚ್ಚುತ್ತದೆ.

ಇದರೊಂದಿಗೆ ಮುಟ್ಟಿನ ಸಮಯದಲ್ಲಿ ಆರಾಮವಾಗಿರುವ ಮತ್ತು ಮಾತ್ರೆಗಳನ್ನು ಸೇವಿಸುವ ಮಹಿಳೆಯರಲ್ಲೂ ಇದನ್ನು ಕಾಣಬಹುದು. ಸಮ್ಮತಿಯ ಮೇರೆಗೆ ಲೈಂಗಿಕತೆಯಲ್ಲಿ ತೊಡಗುವುದು, ಲೈಂಗಿಕಾಸಕ್ತಿ ತೋರಿಸುವುದು ತಪ್ಪಲ್ಲ. ಆದರೆ ಲೈಂಗಿಕ ಕಾಮನೆಗಳ ಮೇಲೆ ನಿಯಂತ್ರಣವಿರಬೇಕು. ಕೆಲವು ಆಹಾರ, ವ್ಯಾಯಾಮ, ಯೋಗದ ಮೂಲಕ ದೇಹದ ಲೈಂಗಿಕ ಬಯಕೆಗಳನ್ನು ನಿಯಂತ್ರಣದಲ್ಲಿಡಬೇಕು. ಅತಿಯಾದ ಲೈಂಗಿಕ ಬಯಕೆ ಹಾಗೂ ಲೈಂಗಿಕ ಕ್ರಿಯೆ ದೇಹ ಮತ್ತು ಮನಸ್ಸಿನ ಹಾದಿ ತಪ್ಪಿಸುತ್ತದೆ ಎಂಬುದನ್ನು ಮರೆಯಬಾರದು.

Related post

ಅಕ್ರಮ ಭ್ರೂಣ ಹತ್ಯೆ ಹಗರಣ; ವೈದ್ಯರ ವಿರುದ್ಧದ ಪ್ರಕರಣ ರದ್ದು ಸಾಧ್ಯವಿಲ್ಲ…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ವ್ಯಾಪಿಸಿರುವ ಅಕ್ರಮ ಭ್ರೂಣ ಹತ್ಯೆ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದೆ. “ಪ್ರಕರಣ…
ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಹೆಚ್ಚು ಆಶಾವಾದಿಗಳಾಗಿರಲು ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ಇದು ವಿಶ್ವಾಸ ಮತ್ತು ನಮ್ಯತೆಯನ್ನು ಹೆಚ್ಚಿಸುತ್ತದಾದರೂ ಅದೇ ಸಮಯದಲ್ಲಿ ಭಯ, ದ್ವೇಷ, ಅಸೂಯೆ, ಸೇಡಿನಂಥ ನಕಾರಾತ್ಮಕ ಭಾವನೆಗಳನ್ನು ಹಿಂದೆ ಬಿಡಲು ಸಿದ್ಧವಾಗಿ.…
ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ…

ನ್ಯೂಸ್ ಆ್ಯರೋ : ಬರದಿಂದ ಕಂಗೆಟ್ಟಿರುವ ರಾಜ್ಯದ ರೈತರಿಗೆ ಹವಾಮಾನ ಇಲಾಖೆ ಸಿಹಿಸುದ್ದಿ ನೀಡಿದೆ. ರಾಜ್ಯಾದ್ಯಂತ ಮುಂದಿನ 6 ದಿನಗಳ ಕಾಲ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ…

Leave a Reply

Your email address will not be published. Required fields are marked *