Today's 3-state win is a compass for a hat-trick win in 2024

ಬಿಜೆಪಿಗೆ ಅದೃಷ್ಟ ತಂದ ಹ್ಯಾಟ್ರಿಕ್ ಗೆಲುವು..! – ‘ಆಪರೇಷನ್ ಹಸ್ತ’ಕ್ಕೆ ಬ್ರೇಕ್; ಪಂಚರಾಜ್ಯ ಚುನಾವಣೆಯ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ!

ನ್ಯೂಸ್ ಆ್ಯರೋ : ಪಂಚ ರಾಜ್ಯ ವಿಧಾನಸಭಾ ಚುನಾವಣೆ, ದೇಶದ ರಾಜಕಾರಣದ ಮೇಲೆ ಹಲವು ರೀತಿಯ ಪರಿಣಾಮಗಳನ್ನ ಬೀರುತ್ತಿದೆ. ಲೆಕ್ಕಾಚಾರಗಳೆಲ್ಲವೂ ಉಲ್ಟಾ ಪಲ್ಟಾ ಆಗಿದೆ. ಕರ್ನಾಟಕ ರಾಜಕಾರಣದ ಮೇಲೂ ಪಂಚ ರಾಜ್ಯ ಚುನಾವಣೆ ಹಲವು ರೀತಿಯ ಪರಿಣಾಮಗಳನ್ನು ಬೀರಲಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಪಂಚ ರಾಜ್ಯ ಚುನಾವಣೆಯ ಫಲಿತಾಂಶವನ್ನ ತಮಗೆ ಬೇಕಾದ ರೀತಿಯಲ್ಲಿ ವಿಶ್ಲೇಷಣೆ ಮಾಡಿಕೊಳ್ಳಲು ಮತದಾರನ ತೀರ್ಪು ನೆರವಾಗಲಿದೆ. ಜೊತೆಯಲ್ಲೇ ಜೆಡಿಎಸ್‌ಗೂ ಕೂಡ ತಾನು ಎನ್‌ಡಿಎ ಸೇರಿದ ತೀರ್ಮಾನವನ್ನು ಸಮರ್ಥನೆ ಮಾಡಿಕೊಳ್ಳಲು ಈ ಫಲಿತಾಂಶ ಪೂರಕವಾಗಿದೆ.

ಒಟ್ಟಾರೆಯಾಗಿ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಬಿಜೆಪಿ ಪಾಲಿಗೆ ತ್ರಿಬಲ್ ಸಂಭ್ರಮ ತಂದಿದೆ. ಭಾನುವಾರ ಪ್ರಕಟವಾದ ನಾಲ್ಕು ರಾಜ್ಯಗಳ ಫಲಿತಾಂಶಗಳ ಪೈಕಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಡದಲ್ಲಿ ಬಿಜೆಪಿಗೆ ಅಧಿಕಾರ ಒಲಿದಿದೆ. ಕಾಂಗ್ರೆಸ್ ಗೆಲುವಿನ ಓಟ ತೆಲಂಗಾಣ ರಾಜ್ಯಕಷ್ಟೇ ಸೀಮಿತವಾಗಿದೆ.

ಮಧ್ಯಪ್ರದೇಶದಲ್ಲಿ ಬಿಜೆಪಿ ಸೃಷ್ಟಿಸಿತು ಮ್ಯಾಜಿಕ್ ನಂಬರ್…!

ಒಟ್ಟು 230 ಕ್ಷೇತ್ರಗಳಲ್ಲಿ 163 ಕ್ಷೇತ್ರಗಳನ್ನು ಕಮಲ ಪಡೆ ಭದ್ರಪಡಿಸಿಕೊಂಡಿದೆ. ಕಾಂಗ್ರೆಸ್ ಈ ಬಾರಿ 67ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ರಾಜಸ್ಥಾನದಲ್ಲೂ ಕಮಲಕ್ಕೆ ಮುತ್ತಿಕ್ಕಿದ ಮತದಾರರು..!

ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಮಣಿಸಿದ ಬಿಜೆಪಿ 155 ಸ್ಥಾನ ಗೆದ್ದುಕೊಂಡಿದೆ. ಕೈ ಪಡೆ 69 ಕ್ಷೇತ್ರಗಳಲ್ಲಿ ತನ್ನ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಛತ್ತೀಸ್ ಗಡದಲ್ಲೂ ಬಿಜೆಪಿಗೆ ಬಹುಮತ…!

ಇಲ್ಲಿ ಒಟ್ಟು 90ಕ್ಷೇತ್ರಗಳಲ್ಲಿ ಬಿಜೆಪಿ 54ಕ್ಷೇತ್ರಗಳಲ್ಲಿ ಪೂರ್ಣ ಬಹುಮತ ಪಡೆದಿದೆ. ಅಧಿಕಾರದಲ್ಲಿದ್ದ ಕಾಂಗ್ರೆಸ್ 35ಸ್ಥಾನಕ್ಕೆ ಕುಸಿದಿದೆ.

ತೆಲಂಗಾಣದಲ್ಲೂ ಉಲ್ಟಾ ಹೊಡೆದ ಚುನಾವಣೆ ಫಲಿತಾಂಶ:

ತೆಲಂಗಾಣದಲ್ಲಿ ಒಟ್ಟು 119 ಕ್ಷೇತ್ರಗಳಲ್ಲಿ ಕಾಂಗ್ರೆಸ್ 64 ಸ್ಥಾನಗಳನ್ನು ಗೆದ್ದು ಗೆಲುವಿನ ನಗೆ ಬೀರಿದೆ. ಬಿಜೆಪಿ ಕೇವಲ 8 ಸ್ಥಾನಗಳನ್ನಷ್ಟೇ ಗೆದ್ದುಕೊಂಡಿದೆ.

ಇನ್ನು ಈ ಬಗ್ಗೆ ಟೀಕಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ ‘ತೆಲಂಗಾಣ ರಾಜ್ಯ ನಾಯಕರು ಮಾಡಿದ ಪ್ರಚಾರದಿಂದ ಗೆದ್ದಿಲ್ಲ, ಬದಲಾಗಿ ಇಲ್ಲಿಂದ (ಕರ್ನಾಟಕ) ರವಾನೆಯಾದ ಹಣದಿಂದ ಕಾಂಗ್ರೆಸ್ ಗೆದ್ದಿದೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಬಿಜೆಪಿಯ ತ್ರಿಬಲ್ ಸಕ್ಸಸ್ ಗೆ ದೇಶದ ಪ್ರಧಾನಿ ಮೋದೀಜೀ ಶಹಬ್ಬಾಶ್ ಹೇಳಿದ್ದಾರೆ. ಈ ಗೆಲುವು 2024ರ ಲೋಕಸಭಾ ಚುನಾವಣೆಯ ಹ್ಯಾಟ್ರಿಕ್ ಗೆಲುವಿನ ಮುನ್ನುಡಿ ಎಂದು ಬಣ್ಣಿಸಿದ್ದಾರೆ.